ಹೀಗೆ ಸಾಗುವ ಜೀವನದ ಗಾಡಿಯಲ್ಲಿ

ಈ ನಗು ಎಂದಿಗೂ ಮಾಸದಿರಲಿ.

-ತಂದೆ : ಮಲ್ಲಜೀರ ದರ್ಶನ್ ಪೆಮ್ಮಯ್ಯ

ಮಗಳು : ಮಲ್ಲಜೀರ ಆರ್ವಿ ದೇಚಕ್ಕ, ಅಮ್ಮತ್ತಿ.ಬೇಡಿದ್ದನ್ನೆಲ್ಲ ಕೊಡುವವನು ದೇವರಾದರೆ...ಬೇಡದೆ ಬಯಸಿದ್ದನ್ನೆಲ್ಲ ಕೊಡುವವನು ಅಪ್ಪ. ಹೆಣ್ಣು ಮಕ್ಕಳು ತಂದೆಯನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಈ ಪ್ರಪಂಚದಲ್ಲಿ ತನ್ನನ್ನು ನೋಯಿಸದ ಏಕೈಕ ಪುರುಷ ತಂದೆ ಮಾತ್ರ. I ಟove u ಅಪ್ಪ.

-ನಂಗಾರು ದೇಸ್ನವಿ ಪುನೀತ್,

ಚೆಟ್ಟಿಮಾನಿ. ನನ್ನ ದೇವರ ಕರದಲ್ಲಿ ಅಂದು. ಮೊದಲ ದಿನ ಆ ಆತಂಕದ ನಿನ್ನ ಮೊಗ ನನಗೇನೋ ಮಾಹಿತಿ ನೀಡಿದೆ. ಅಪ್ಪನ ಮೊದಲ ಸ್ಪರ್ಶ ಈ ಭೂಮಿಗೆ ನನ್ನನ್ನು ಪರಿಚಯಿಸಿದೆ. ಅಪ್ಪನ ಮನಸಿನ ಮಾತು ನಂಗೊAದು ಕಥೆ ಹೇಳಿದೆ ಮುಂದೊAದು ದಿನ ನಾ ಆಗುವೆ ಅಪ್ಪನ ರಾಜಕುಮಾರಿ ಎಂದು ಎಂದೆAದಿಗು.....

-ಎಡಿಕೇರಿ ಪನ್ವಿತ ಕಿರಣ್,

ಕುಶಾಲನಗರ

ನನ್ನ ಅಪ್ಪಾ, ನನ್ನ ಧೈರ್ಯ ಹಾಗೂ ನನ್ನ ಸಂತೋಷ.

-ಅಪ್ಪ : ಆನಂದ ಬೊಳ್ಳೂರು

ಮಗಳು :ರೂಪ ಬೊಳ್ಳೂರು

ನನ್ನ ಅಪ್ಪ ನನ್ನ ಸೂಪರ್ ಹೀರೋ. ನನಗೆ ಅಪ್ಪ ಒಳ್ಳೆಯ ಗುಣಗಳನ್ನು ಕಲಿಸುತ್ತಾರೆ. ನನ್ನ ಬೆಸ್ಟ್ ಫ್ರೆಂಡ್ ನನ್ನ ಅಪ್ಪ.

ತಂದೆ: ಪಟ್ಟಡ ಧನಂಜಯ (ಸರು),

ಮಗ : ಪಟ್ಟಡ ಅದ್ವೆöÊತ್ ಕಾಳಪ್ಪ,

೧ನೆ ತರಗತಿ, ಬಿ. ಜಿ.ಎಸ್ ಶಾಲೆ, ಮದೆನಾಡು

ತಂದೆ ಎಂದರೆ ನಮ್ಮನ್ನು ಎತ್ತರಕ್ಕೆ ಎತ್ತುವ ಶಕ್ತಿ, ಪ್ರೀತಿಸುವ ಹೃದಯ, ಬಲ ತುಂಬುವ ಭುಜ, ಭರವಸೆಯ ನಗು, ಆಶೀರ್ವದಿಸುವ ಹಸ್ತ, ಬೆಚ್ಚಗಿನ ಅಪ್ಪುಗೆ ನೀಡುವ ತೋಳು. ಈ ಪ್ರೀತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಹ್ಯಾಪಿ ಫಾದರ್ಸ್ ಡೇ ಅಪ್ಪಾಜಿ...

-ಕಾವ್ಯಶ್ರೀ ಎಂ. ಕೆ., ಬಿಳುಗುಂದ

ಬಾಳ ಪಯಣದ ಧೀರ ನಾಯಕ, ಚಿಂತೆ ದುಗುಡದಿ ನನ್ನ ಕೈ ಹಿಡಿವ ಪಾಲಕ. ನನ್ನಾಪ್ತ ಸ್ನೇಹಿತ ಅಪ್ಪ

-ಜಾನೆಟ್ ಜೋಸೆಫ್,

ಟಿ.ಜಾನ್ ಬಡಾವಣೆ, ಮಡಿಕೇರಿ

ದೇವರು ಕೊಟ್ಟ ಅದ್ಭುತವಾದ ವರ ನನ್ನ ಅಪ್ಪ. ಅಪ್ಪ ಅಂದರೆ ವಿಶೇಷ ಒಲವು, ಪ್ರೀತಿ, ಕಾಳಜಿ. ಅಮ್ಮ ನವಮಾಸ ಗರ್ಭದಲ್ಲಿ ಇರಿಸಿ ಹಾರೈಸಿದರೆ ಅಪ್ಪ ಪ್ರತಿದಿನ, ಪ್ರತಿಕ್ಷಣ ಮಗುವಿನ ಕುರಿತು ಆಲೋಚಿಸುವ ಏಕೈಕ ದೇವರು ನನ್ನಪ್ಪ. ‘ಐ ಲವ್ ಯು ಪಾ...’

-ಬಿ. ಆರ್. ವಿವೇಕ್ ರೈ,

ಬಿಂದ್ಯ ವಿ. ರೈ.,-ಗಾನವಿ ವಿ. ರೈ,

ಸುಂಟಿಕೊಪ್ಪ.

ಅಪ್ಪಾ ಎಂದರೆ ಪ್ರೀತಿ

ಬದುಕಿನ ಕಷ್ಟದ ನಡುವೆಯೂ ಎಲ್ಲವನ್ನೂ ಸಹಿಸಿಕೊಂಡು, ಎಲ್ಲಾ ಸಮಸ್ಯೆಯ ಮುಂದೆ ನಿಂತು ಕುಟುಂಬವನ್ನು ಕಾಪಾಡುವವರು ನೀವು. ನೀವೇ ನಮ್ಮ ಶಕ್ತಿ, ಪ್ರೀತಿಯಿಂದ ತುಂಬಿದ ಸಂತೋಷದಾಯಕ ಜೀವನವನ್ನು ನೀಡಿದ್ದೀರಿ ಸದಾ ಗುರುವಾಗಿ, ಬೆಂಬಲವಾಗಿ ಗುರಿ ಮುಟ್ಟುವ ಬೆಳಕಾಗಿದ್ದೀರಿ. ನಿಮಗೆ ತಂದೆಯ ದಿನದ ಶುಭಾಶಯಗಳು.

-ಶಾನ್ವಿ ಗೌಡ, ೯ನೇ ತರಗತಿ

ಸಂತ ಮೈಕಲರ ಶಾಲೆ, ಮಡಿಕೇರಿ.

ಯಾವುದೇ ನಿರೀಕ್ಷೆಯು ಇಲ್ಲದೆ

ನಮ್ಮೆಲ್ಲ ನಿರೀಕ್ಷೆಗಳನ್ನು

ನಿರಾಸೆ ಮಾಡದೆ ನೆರವೇರಿಸೋ

ಒಂದು ಜೀವ ‘‘ಅಪ್ಪ’’

-ಅಶ್ವಿನಿ ಪ್ರಸನ್ನ ವಿಶಾಲ ಮನಸ್ಸಿನ ಹೃದಯವಂತ. ಪ್ರೀತಿ, ಮಮತೆಯ ಗುಣವಂತನಿರುವ ನೀವು ನಮಗೆ ಬೇಕಪ್ಪ. ಅಪ್ಪಂದಿರ ದಿನವ ಶುಭಾಶಯಗಳು ಅಪ್ಪ.

-ಚಾರ್ವಿನಿ ಭುವನ್ ಕುಂಬುಗೌಡನ

ದಿಶಿತ ಭುವನ್ ಕುಂಬುಗೌಡನ

ಚಿಲಿAಬಿ-ಮAಗಳೂರು.

-ತAದೆ: ತೆಕ್ಕಡ ಗಿರೀಶ್ ಪೆಮ್ಮಯ್ಯ

ಮಗಳು : ದಿಯಾ ಬೋಜಮ್ಮ,

ಮಗ : ಯುಬಿನ್ ಪೆಮ್ಮಯ್ಯ

ಕೈಕೇರಿ-ಗೋಣಿಕೊಪ್ಪಲು.

ನನ್ನೋಲವಿನ ಅಪ್ಪ..

ಏನೇಂದು ನಾ ಬಣ್ಣಿಸಲಿ, ಮನಸಾರೆ ಮುದ್ದಿಸಿ,

ಪ್ರೀತಿಸಿ ಪೋಷಿಸುವ ಅಪ್ಪ

ನಾ ಕೇಳಿದ್ದನ್ನು ಆಲಿಸಿ ಆರಿಸಿ ತರುವೆ,

ಕೋಪಿಸಿಕೊಂಡರು ಮುದ್ದಿಸುವ ನನ್ನಪ್ಪ

ನನ್ನಿಷ್ಟಕ್ಕೆ ತಲೆಬಾಗುವ ನನ್ನಪ್ಪ

ನಗು ನಗುತ್ತಲೇ ಇರಬೇಕು

ನಿನ್ನ ಪ್ರೀತಿಯ ಮಾತಿಗೆ ನಾ ಕರಗುವೆನು ಅಪ್ಪ,

ಊಟ ಬೇಡವೆಂದರು ಒತ್ತಾಯಿಸಿ ಉಣಿಸುವ ಅಪ್ಪ

ಮನಕ್ಕೇನೊ ಹಿತವ ನೀಡುವ ಅಪ್ಪ

ನಾ ಎಂದಿಗೂ ನಿನಗೆ ಧನ್ಯಳು. ‘ಐ ಲವ್ ಯೂ ಅಪ್ಪಾ.’

-ತಂದೆ : ಪೂರ್ಣಪ್ರಕಾಶ್

ಮಗಳು : ಜನ್ಮಿತ ಎಸ್. ಪಿ.

ವಿದ್ಯಾನಗರ, ಮಡಿಕೇರಿ ಅಪ್ಪಾ ಎಂಬ ಅಕ್ಷರವ ಹೇಗೆ ವರ್ಣಿಸಲಿ

ನೂರು ಜನ್ಮಗಳು ಬೇಕು ಅಪ್ಪಾ ಎಂಬ ಪದವ ವರ್ಣಿಸಲು

ನಾನು ನೋಡಿದ ಮೊದಲ ವೀರ

ಮಾತು ಕಲಿಸಿದ ಗುರು ಬೆರಗು ಮೂಡಿಸಿದ ಜಾದೂಗಾರ ನನ್ನ ಅಪ್ಪ. ನನ್ನ ಬದುಕಲ್ಲಿ ಕನಸುಗಳನ್ನು ತುಂಬಿ, ನನ್ನ ಕೈ ಹಿಡಿದು ಬದುಕುವ ಭವಿಷ್ಯ ಕಟ್ಟುವ ಭರವಸೆಯ ತುಂಬುತ್ತಾ ನನ್ನನ್ನು ನಡೆಸುತ್ತಿರುವ ನನ್ನ ಮುದ್ದಿನ ಅಪ್ಪನಿಗೆ ಅಕ್ಕರೆಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ.

-ಐಯರ ಸುಧಾಕರ್

ರಾಣಿಪೇಟೆ-ಮಡಿಕೇರಿ.ನನ್ನ ಪ್ರೀತಿಯ ಅಪ್ಪ

ಎಲ್ಲಾ ತಂದು ಕೊಡುವ ಅಪ್ಪ

ನನ್ನ ಜೊತೆ ಆಟವಾಡುವ ಅಪ್ಪ

ನನ್ನ ಜೊತೆ ಸಮಯ

ಮುದ್ದು ಕಳೆಯುವ ಅಪ್ಪ

ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ

- ಪುಲಸ್ತö್ಯ ಆನಂದ ಎಂ. ಟಿ.

೭ನೇ ತರಗತಿ,

ಕೊಡಗು ವಿದ್ಯಾಲಯ, ಮಡಿಕೇರಿ.ಅಪ್ಪ ನಿಜವಾಗ್ಲೂ ದೈವತ್ವದ ಸಾಕಾರ ಮೂರ್ತಿ ಎಂದರೆ ತಪ್ಪಾಗಲಾರದು. ಜೀವನದಲ್ಲಿ ಅಪ್ಪ ಎನ್ನುವ ಆಲದ ಮರದ ನೆರಳಿನಲ್ಲಿ ಬಾಳಿ ಬದುಕುವ ಮಕ್ಕಳಿಗೆ ಆತನೇ ಸರ್ವಸ್ವನಾಗಿರುತ್ತಾನೆ. ಹಸಿದಾಗ ಅಮ್ಮ ಇರ್ತಾರೆ. ಕಷ್ಟ ಬಂದಾಗ ದೇವರಿದ್ದಾನೆ. ಆದರೆ ಜೀವನದ ಎಲ್ಲಾ ನೋವು ನಲಿವು. ಕಷ್ಟ-ಸುಖಗಳಲ್ಲಿ ಇರುವುದು ಅಪ್ಪ ಮಾತ್ರ. ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದವರು ಅಮ್ಮ ಆದರೆ. ಪ್ರಪಂಚವನ್ನು ಮಕ್ಕಳಿಗೆ ಪರಿಚಯ ಮಾಡಿರುವುದು ಅಪ್ಪನಾಗಿರುತ್ತಾನೆ. ಅಪ್ಪ ತ್ಯಾಗಮಯಿ. ಕರುಣಾಮಯಿ. ಆತ್ಮವಿಶ್ವಾಸಿ ಮತ್ತು ಎಲ್ಲಾ ಕ್ಷೇತ್ರದಲ್ಲಿ ರಕ್ಷಕನಾಗಿರುತ್ತಾನೆ. ಅಪ್ಪ ನೇರವಾಗಿ ಪ್ರೀತಿ ತೋರಿಸದಿದ್ದರೂ. ಮನಸ್ಸಿನಲ್ಲಿ ಅಗಾಧವಾದ ಪ್ರೀತಿ ಅಡಗಿರುತ್ತದೆ. ಘನತೆ. ಗಾಂಭೀರ್ಯ ದಿಂದ ಎಷ್ಟುಬೇಕೋ ಅಷ್ಟು ಮೌನವಾಗಿದ್ದುಕೊಂಡೆ ನಮ್ಮ ಎಲ್ಲಾ ಬೇಕು-ಬೇಡಗಳಿಗೆ ಸ್ಪಂದಿಸುತ್ತಾರೆ ಅಪ್ಪ.

ಸೇವಾ ಮನೋಭಾವನೆಯಲ್ಲಿ ನಮ್ಮಪ್ಪ ಮುಂಚೂಣಿ. ವಿವಿಧ ಸಂಘಟನೆ, ಜವಾಬ್ದಾರಿ ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಗುರುತಿಸಿರುವ ಅಪ್ಪ, ಖಡಕ್ ಅಪ್ಪ. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅಪ್ಪ ನಮ್ಮ ತಪ್ಪು ತಿದ್ದುವ ನಾಯಕ ಆಗಿರುತ್ತಾರೆ. ನಮ್ಮೆಲ್ಲ ಇಷ್ಟಾರ್ಥಗಳನ್ನು ಪೂರೈಸುವ ಅಪ್ಪನ ಹೆಸರಿಗೆ ಕಳಂಕ ತರದ ರೀತಿಯಲ್ಲಿ ನಾವು ಮುಂದೆ ಸಾಗಬೇಕು. ಇದು ಆದ್ಯ ಕರ್ತವ್ಯವಾಗಿರುತ್ತವೆ.

-ತಂದೆ: ಸುಕುಮಾರ್, ಮಗಳು : ದೃಶ್ಯ

ಹಾಕತ್ತೂರು-ತೊಂಬತ್ತುಮನೆ.

ಅಪ್ಪ...ಅಪ್ಪ... ನಮ್ಮಪ್ಪ

ಪ್ರೀತಿಲಿ ಗದರುವ ನಮ್ಮಪ್ಪ,

ಮುದ್ದನು ಮಾಡುವ ನಮ್ಮಪ್ಪ

ಸದಾ ಕಾಳಜಿ ಮಾಡುವ ನಮ್ಮಪ್ಪ

ನನ್ನ ಮತ್ತು ತಂಗಿಯ ಪ್ರೀತಿಯ ಮುದ್ದಪ್ಪ

ತಿಂಡಿಯ ತರುವ ನಮ್ಮಪ್ಪ

ಏನೇ ಕೇಳಿದರೂ ಕೊಡುವ ನಮ್ಮಪ್ಪ

ತಪ್ಪನ್ನು ಮಾಡಿದರೆ ಪ್ರೀತಿಲಿ ಗದರುವ ನಮ್ಮಪ್ಪ

ಬೆಟ್ಟದಷ್ಟು ಪ್ರೀತಿ ತೋರುವ ನಮ್ಮಪ್ಪ

ಅಪ್ಪ-ಅಪ್ಪ ನೀನೆಂದರೆ ಬಲು ಇಷ್ಟ.

ಅಪ್ಪ ಅಪ್ಪ ನಮ್ಮಪ್ಪ ಅಶೋಕಪ್ಪ

ಮುದ್ದಿನ ಅಪ್ಪ ನಮ್ಮಪ್ಪ

-ಗ್ರಂಥ ಮತ್ತು ಗುಣಾಲಿ

೪ನೇ ತರಗತಿ

ಕೇಂದ್ರೀಯ ವಿದ್ಯಾಲಯನಾನು ನನ್ನ ಅಪ್ಪನ ಜೊತೆಗಿನ ಸುಂದರ ಕ್ಷಣ.... ಅಪ್ಪನ ಜೊತೆ ದಿನ ಜಗಳ...

ಮತ್ತೆ ಜೊತೆಗೆ ಆಟ-ಊಟ-ಕೂಟ

ಎಲ್ಲಾನು ಅವರ ಜೊತೆ....

ನನ್ನ ಪ್ರೀತಿಯ ಅಪ್ಪ ಯಾವಾಗಲೂ ಚೆನ್ನಾಗಿರಬೇಕು.

ನನ್ನ ಜೊತೆ ಯಾವಾಗ್ಲೂ ಇರು ಅಪ್ಪ..

‘ಅಪ್ಪ ಐ ಲವ್ ಯೂ ಪ್ಪಾ’

ತಂದೆ : ಅರುಣ್

ಮಗಳು : ಯಶಿಅಪ್ಪನ ಕನಸಿನ ಪುಟ್ಟ ಪ್ರಪಂಚ ನಾನು

ಆದರೆ, ನನಗೆ ವಿಶಾಲವಾದ ಪ್ರಪಂಚ ನನ್ನಪ್ಪ

ಅಪ್ಪ ಎಂದರೆ ನನಗೆ ಪ್ರಾಣ ‘‘ಐ ಲವ್ ಯೂ ಅಪ್ಪ’’

- ಬಿ. ಎಸ್. ಅಪೇಕ್ಷ ರೈ, ೪ನೇ ತರಗತಿ,

ನ್ಯಾಷನಲ್ ಅಕಾಡೆಮಿ ಶಾಲೆ,

ಗೋಣಿಕೊಪ್ಪಲು.

(ಮುಂದುವರಿಯುವುದು)