ಕುಶಾಲನಗರ, ಜೂ.೧೬ : ಕುಶಾಲನಗರ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೆಂಕಿ ರಹಿತ ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾಲೇಜು ಪ್ರಾಂಶುಪಾಲ ಬಿ.ಎಂ. ಪ್ರವೀಣ್ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಅಭಿವ್ಯಕ್ತಿಯನ್ನು ವಿಕಸನಗೊಳಿಸುವ ದೃಷ್ಟಿಯಿಂದ ಬೆಂಕಿ ರಹಿತ ಅಡುಗೆ ಮಾಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಬೆಂಕಿ ರಹಿತ ಹಾಗೂ ಒಲೆ ರಹಿತ ತಿನಿಸುಗಳನ್ನು ಪರಿಶೀಲಿಸಿ ರುಚಿ ಆಸ್ವಾಧಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಕಾಲೇಜಿನ ಸಹ ಪ್ರಾಧ್ಯಾಪಕರಾದ ಬಿ.ಡಿ.ಹರ್ಷ, ಸುನಿಲ್ ಕುಮಾರ್, ಸುಧಾಕರ್ ,ಕುಸುಮ, ದೀಪಾ, ವಂದನ ಮತ್ತಿತರರು ಇದ್ದರು.