ಗುಡ್ಡೆಹೊಸೂರು, ಜೂ. ೧೬: ಚಿಕ್ಕ ಬಳ್ಳಾಪುರದಲ್ಲಿ ನಡೆದ ೫ನೇ ಜೂನಿಯರ್ ರಾಜ್ಯಮಟ್ಟದ ಸೆಸ್ಟೋಬಾಲ್ ಗೇಮ್ಸ್ನಲ್ಲಿ ಕರ್ನಾಟಕದ ತಂಡ ಪ್ರಥಮ ಸ್ಥಾನ ಪಡೆಯಿತು. ಮುಂಬೈ ತಂಡದ ವಿರುದ್ಧ ೨೦-೨೨ ಅಂಕದ ಅಂತರದಲ್ಲಿ ತಂಡದಲ್ಲಿ ಜಯಗಳಿಸಿತು. ಕರ್ನಾಟಕ ತಂಡದಲ್ಲಿ ಕೊಡಗಿನ ಕ್ರೀಡಾ ಪಟುಗಳಾದ ಚಂದನ್, ಪ್ರಿಮಿತ್, ಗೌತಮ್, ಚಿರಾಗ್, ಗಿರೀಶ್ ಚಂದನ್ ಭಾಗವಹಿಸಿದ್ದರು.