ನಾಪೋಕ್ಲು, ಜೂ. ೧೬: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಕಾರೊಂದು ಉರುಳಿದ್ದು, ಪ್ರಯಾಣಿಕರು, ಚಾಲಕರು, ಜೀವ ಅಪಾಯದಿಂದ ಪಾರದ ಘಟನೆ ಇಲ್ಲಿಗೆ ಸಮೀಪದ ಬೆಟ್ಟಗೇರಿಯ ತಳೂರು ಜಂಕ್ಷನ್ ಬಳಿ ನಡೆದಿದೆ.
ಭಾಗಮಂಡಲ ಕಡೆಯಿಂದ ಮಡಿಕೇರಿಗೆ ಟಿ ನರಸೀಪುರದ ನಿವಾಸಿ ನಾಗೇಂದ್ರ ಚಲಾಯಿಸುತಿದ್ದ ಕಾರು ರಸ್ತೆಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿದೆ.
ಕಾರಲ್ಲಿ ನಾಗೇಂದ್ರ ಅವರ ಪತ್ನಿ ಮತ್ತು ಮಗು ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ೧೧೨ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಜಖಂಗೊAಡ ಕಾರನ್ನು ಮೇಲೆತ್ತಲಾಯಿತು. -ದುಗ್ಗಳ