ಮಡಿಕೇರಿ, ಜೂ. ೧೬ : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ೧೯೯೯-೨೦೦೨ ರ ವಾಣಿಜ್ಯ ಬ್ಯಾಚ್‌ನ ಹಳೇ ವಿದ್ಯಾರ್ಥಿಗಳ ಭಾವನಾತ್ಮಕ ಪುನರ್ಮಿಲನ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು.

ತಮಗೆ ವಿದ್ಯೆ ಕಲಿಸಿದ ಉಪನ್ಯಾಸಕ ವೃಂದದವರಿಗೆ ವಂದಿಸಿದ ಹಳೇ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ಕಾಲೇಜಿನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ. ಡಾ. ಬಿ. ರಾಘವ ಅವರು, ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿ, ಕಳಚಿಹೋದ ಸಂಬAಧವನ್ನು ಬೆಸೆಯುವತ್ತ ಐತಿಹಾಸಿಕ ಹೆಜ್ಜೆ ಇರಿಸಿದ ೧೯೯೯-೨೦೦೨ನೇ ವಾಣಿಜ್ಯ ಬ್ಯಾಚ್‌ನ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಇದು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಆದರ್ಶವಾಗಲಿದೆ ಎಂದು ಬಣ್ಣಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ದೇವಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳದ ಇಂದಿನ ದಿನಗಳಲ್ಲಿ, ಒಂದು ನಿರ್ದಿಷ್ಟ ಬ್ಯಾಚ್‌ನ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರನ್ನು ಕೃತಜ್ಞತಾಪೂರ್ವಕವಾಗಿ ವಂದಿಸಿರುವ ಕಾರ್ಯ ಕಾಲೇಜಿನ ಇತಿಹಾಸದ ಪುಟಗಳಲ್ಲಿ ದಾಖಲಿಸುವಂತದ್ದು ಎಂದು ತಿಳಿಸಿದರು.

೨೦೦೨ನೇ ಇಸವಿಯಲ್ಲಿ ಉತ್ತೀರ್ಣರಾಗಿ ಅಮೇರಿಕಾ, ಯು.ಎ.ಇ., ಬೆಂಗಳೂರು ಸೇರಿದಂತೆ ವಿವಿಧ ದೇಶ, ರಾಜ್ಯ ಮತ್ತು ನಗರಗಳಲ್ಲಿ ನೆಲೆಸಿರುವ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎರಡು ದಶಕಗಳ ಹಳೆಯ ನೆನಪುಗಳನ್ನು ವಿವರಿಸಿ, ಉಪನ್ಯಾಸಕ ವೃಂದದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕರುಣಾಕರ್, ಆಂಗ್ಲ ವಿಭಾಗದ ಪೂಣಚ್ಚ, ಹಿಂದಿ ವಿಭಾಗದ ಡಾ. ಶ್ರೀಧರ್ ಹೆಗಡೆ, ಅರ್ಥಶಾಸ್ತç ವಿಭಾಗದ ತಿಪ್ಪೇಸ್ವಾಮಿ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.