ಗೋಣಿಕೊಪ್ಪಲು, ಜೂ. ೧೬: ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣವಾದ ಗೋಣಿಕೊಪ್ಪದಲ್ಲಿ ಹರಿಯುವ ಜಲಮೂಲವಾದ ಕೀರೆಹೊಳೆಯ ತಟಗಳು ಒತ್ತುವರಿಯಾಗಿದ್ದರೆ ಅಂತಹ ಪ್ರಕರಣಗಳನ್ನು ಗುರುತಿಸಿ ಕಾನೂನು ಬದ್ಧವಾಗಿ ತೆರವುಗೊಳಿಸಲು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ ನೀಡುವುದರ ಜೊತೆಗೆ ಜಲಮೂಲಕ್ಕೆ ಶೌಚಾಲಯ ನೀರು ಹರಿಬಿಡುವವರು, ಅಶುಚಿತ್ವಗೊಳಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಹೊಳೆಯಲ್ಲಿ ತೇಲಿ ಬರುವ ಘನತ್ಯಾಜ್ಯ ವಸ್ತುಗಳನ್ನು ತಡೆಯುವ ನಿಟ್ಟಿನಲ್ಲಿ ಮೊದಲ ಬಾರಿಗೆ ಕ್ಲೀನ್ ಕೂರ್ಗ್ ತಂಡವು ಪ್ರಾಯೋಗಿಕವಾಗಿ ಗೋಣಿಕೊಪ್ಪಲುವಿನ ಕೀರೆಹೊಳೆಗೆ ಅಳವಡಿಸಿರುವ ‘ಟ್ರಾö್ಯಷ್ ಬೂಮ್' ಅನ್ನು ಕೀರೆಹೊಳೆಯ ದಂಡೆಯಲ್ಲಿ ಮತ್ತೆ ಹಸಿರು ನಿರ್ಮಾಣ ಮಾಡುವ ಸಲುವಾಗಿ ನೂರಾರು ಗಿಡಗಳನ್ನು ನೆಡುವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೀರೆಹೊಳೆಯಲ್ಲಿ ಹರಿದು ಬರುವ ಪ್ಲಾಸ್ಟಿಕ್ ಸೇರಿದಂತೆ ಘನ ತ್ಯಾಜ್ಯ ತಡೆಯಲು ವಿನೂತನ ಪ್ರಯತ್ನ ನಡೆದಿದ್ದು, ಇದು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಜಲಮೂಲ, ಪರಿಸರ ಉಳಿದರಷ್ಟೆ ಮಾನವನ ಅಸ್ತಿತ್ವ ಉಳಿಯಲು ಸಾಧ್ಯ. ನಾವು ಎಷ್ಟೇ ದೊಡ್ಡ ಆಸ್ತಿಯನ್ನು ಹೊಂದಿದ್ದರೂ ಅದು ಕ್ಷಣಿಕ ಮಾತ್ರ, ಈ ಪರಿಸರ ಉಳಿದ್ದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬಹುದಾಗಿದೆ. ಈ ಹಿಂದೆ ನಮ್ಮ ಪೂರ್ವಜರು ನದಿ, ಉತ್ತಮ ಪರಿಸರವನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಯಾರು ಕೂಡ ನದಿಯನ್ನು ಮಲೀನ ಮಾಡುವ ಕೆಲಸಕ್ಕೆ ಮುಂದಾಗಬಾರದು. ಎಷ್ಟೇ ದೊಡ್ಡ ಪ್ರಭಾವಿ ವ್ಯಕ್ತಿಯಾಗಿದ್ದರೂ ಅಂತಹವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಹಿಂಜರಿಯುದಿಲ್ಲ ಎಂದು ತೀಕ್ಷ÷್ಣವಾಗಿ ಹೇಳಿದ ಪೊನ್ನಣ್ಣ ಅವರು, ತ್ಯಾಜ್ಯ, ಶೌಚಾಲಯದ ನೀರು ಹೊಳೆಗೆ ಹರಿಸಬಾರದು. ಈ ರೀತಿ ಘಟನೆ ಕಂಡುಬAದರೆ ನಿರ್ದಾಕ್ಷಿಣ್ಯ ಕ್ರಮವನ್ನು ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.