ಅನಿಲ್ ಎಚ್.ಟಿ.

ಬೆಂಗಳೂರು, ಜೂ. ೧೬: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬAಧಿತ ಚಟುವಟಿಕೆಗಳಿಗೆ ವಿಪುಲ ಅವಕಾಶಗಳಿದ್ದು, ಕರ್ನಾಟಕದ ಪಕ್ಕದ ರಾಜ್ಯಗಳು ಕೂಡ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಪ್ರವಾಸೋದ್ಯಮಿ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಸಲಹೆ ನೀಡಿದ್ದಾರೆ.

ಇಲ್ಲಿನ ಅರಮನೆ ಮೈದಾನದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಆಯೋಜಿತ ದಕ್ಷಿಣ್ ಭಾರತ್ ಉತ್ಸವದ ಸಂದರ್ಭ ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮದಲ್ಲಿನ ಅವಕಾಶಗಳು ಕುರಿತಂತೆ ವೇದಿಕೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ದಿನೇಶ್ ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ೨ ದಶಕಗಳಿಂದ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದೆ, ಭವಿಷ್ಯದ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಎಲ್ಲಾ ರೀತಿಯಲ್ಲಿಯೂ ಅವಕಾಶ ಮಾಡಿಕೊಡುವ ಅನಿವಾರ್ಯ ಸ್ಥಿತಿ ಬಂದಿದೆ. ಮೊದಲ ಕಾರ್ಯ ಯೋಜನೆ ಎಂಬAತೆ ಕೊಡಗಿನ ಎಲ್ಲಾ ಪ್ರವಾಸಿ ತಾಣಗಳಲ್ಲಿಯೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕಾದ ಅತ್ಯಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ನಿಯಮಾವಳಿ ರೂಪಿಸಬೇಕಿದೆ ಎಂದು ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಮನವಿ ಮಾಡಿದರು,

ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂಡವಾಳ ಹೂಡುತ್ತಿರುವ ಪ್ರವಾಸೋದ್ಯಮಿಗಳು ಕೂಡ ಭವಿಷ್ಯದ ದಿನಗಳ ಹಿತದೃಷ್ಟಿಯಿಂದ ಹೊಣೆಯರಿತು ಪ್ರವಾಸೋದ್ಯಮಕ್ಕೆ ಚಿಂತನೆ ನೀಡಬೇಕು, ಪ್ರವಾಸೋದ್ಯಮ ಕೇವಲ ವಾಣಿಜ್ಯ ದೃಷ್ಟಿಯಿಂದ ಮಾತ್ರ ಯೋಚಿಸದೇ ಪರಿಸರ ಮತ್ತು ಭವಿಷ್ಯದ ಪೀಳಿಗೆಯ ಹಿತಚಿಂತನೆ ಯನ್ನೂ ಯೋಚಿಸಿಕೊಂಡೇ ಪ್ರವಾಸೀ ಯೋಜನೆಗಳನ್ನು ಜಾರಿಗೊಳಿಸ ಬೇಕಾಗಿದೆ., ಇಲ್ಲದಿದ್ದಲ್ಲಿ ಪ್ರವಾ ಸೋದ್ಯಮದ ಬಗ್ಗೆ ಭವಿಷ್ಯದ ಜನಾಂಗ ಜಿಗುಪ್ಸೆ ತಳೆಯುವ ಸಾಧ್ಯತೆ ಹೆಚ್ಚಾಗಿದೆ ಎಂದೂ ದಿನೇಶ್ ಎಚ್ಚರಿಸಿದರು.

ಹಲವು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಪ್ರವಾಸೋದ್ಯಮದ ಬದಲಿಗೆ ಹೊಸ ರೀತಿಯ ವಿನೂತನ ಯೋಜನೆಗಳನ್ನೊಳಗೊಂಡ ಪ್ರವಾಸೋದ್ಯಮ ಯೋಜನೆಗಳ ಚಿಂತನೆ ಇಂದಿನ ಕಾಲಘಟ್ಟದ ತುರ್ತು ಅಗತ್ಯವಾಗಿದೆ, ಸಾಂಪ್ರ ದಾಯಿಕ ಪ್ರವಾಸೋದ್ಯಮದ ಬದಲಿಗೆ, ಜಲಪಾತ ಪ್ರವಾಸೋದ್ಯಮ, ಕ್ರೀಡಾ ಪ್ರವಾಸೋದ್ಯಮ, ದೇವಾಲಯ ಪ್ರವಾಸೋದ್ಯಮ, ಚಾರಣ ಪ್ರವಾಸೋದ್ಯಮದಂಥ ವಿಭಿನ್ನ ಪ್ರವಾಸೋದ್ಯಮ ಚಟುವಟಿಕೆಗಳ ಪ್ರಾರಂಭ ಕೊಡಗಿನಂಥ ಪರಿಸರ ಹೊಂದಿರುವ ಜಿಲ್ಲೆಗೆ ಸೂಕ್ತ ಎಂದೂ ಅವರು ವಿಚಾರ ಮಂಡಿಸಿದರು.

೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡಗಿನಲ್ಲಿ ಪ್ರವಾಸೋದ್ಯಮ ಇಲಾಖೆ ವ್ಯವಸ್ಥಿತ ರೀತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬೇಕು, ಇಲ್ಲದೇ ಹೋದಲ್ಲಿ ಪ್ರವಾಸೋದ್ಯಮ ಎಂಬುದು ಲಂಗುಲಗಾಮಿಲ್ಲದೆ ಕೊಡಗಿನ ಸಂಸ್ಕೃತಿ, ನಿಸರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಸ್ಥಳೀಯರ ತಿರಸ್ಕಾರಕ್ಕೆ ಗುರಿಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಗೊತ್ತು ಗುರಿಯಿಲ್ಲದೇ ಬೆಳೆಯುತ್ತಿರುವ ಹೋಂಸ್ಟೇಗಳಿಗೂ ಕೊಡಗಿನಂಥ ಮಲೆನಾಡು ಜಿಲ್ಲೆಗಳಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಸೂಕ್ತ ನೀತಿ ನಿಯಮ ಜಾರಿಗೊಳಿಸಿ ಹೋಂಸ್ಟೇಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಬೇಕಾಗಿದೆ ಎಂದೂ ದಿನೇಶ್ ಅಭಿಪ್ರಾಯಪಟ್ಟರು.

ಈ ಸಂದರ್ಭ ಮಾತನಾಡಿದ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ.ಫಾಯಿಮಾ, ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸಿ ತಾಣಗಳ ಪ್ರಗತಿಯೊಂದಿಗೆ, ವಿವಿಧ ಸ್ಥಳಗಳಲ್ಲಿ ಸೂಕ್ತ ರೀತಿಯಲ್ಲಿ ಪ್ರವಾಸಿ ತಾಣಗಳನ್ನು ಪ್ರಾರಂಭಿಸುವ ಉದ್ದೇಶ ಸರ್ಕಾರಕ್ಕಿದೆ ಎಂದರಲ್ಲದೇ, ಪ್ರವಾಸೋದ್ಯಮ ಕ್ಷೇತ್ರವನ್ನು ರಾಜ್ಯದಲ್ಲಿ ಕೈಗಾರಿಕೆ ರೀತಿಯಲ್ಲಿ ಪರಿಗಣಿಸಿ ಏಕಗವಾಕ್ಷಿ ಯೋಜನೆಯಡಿಯಲ್ಲಿ ಪ್ರವಾಸೋದ್ಯಮಿಗಳಿಗೆ ಸುಲಭವಾಗಿ ಯೋಜನೆಗಳ ಜಾರಿಗೆ ಅವಕಾಶವನ್ನು ಪ್ರವಾಸೋದ್ಯಮ ಇಲಾಖೆ ಮಾಡಿಕೊಡಲಿದೆ ಎಂದರು, ಪ್ರವಾಸೋದ್ಯಮಿಗಳು ತಮ್ಮ ಯೋಜನೆಗೆ ಅಗತ್ಯವಾದ ಭೂಮಿಯನ್ನು ಗುರುತಿಸಿದ್ದೇ ಆದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ವಿಳಂಬರಹಿತವಾಗಿ ಅಂತಹ ಜಮೀನಿಗೆ ಸೂಕ್ತ ರೀತಿಯಲ್ಲಿ ವಾಣಿಜ್ಯೀಕರಣಕ್ಕೆ ಎನ್‌ಓಸಿ ನೀಡಲಾಗುತ್ತದೆ. ಈ ತಿಂಗಳಾAತ್ಯದಲ್ಲಿ ಕರ್ನಾಟಕ ಸರ್ಕಾರದ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿದ್ದು, ಈ ನೀತಿಯ ಜಾರಿಗೆ ಪ್ರವಾಸೋದ್ಯಮಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಅವರು ಮನವಿ ಮಾಡಿದರು.