(ಅತೀ ವಿಶ್ವಾಸ ತಂದ ಕುತ್ತು - ಚಾರ್ ಸೌ ಪಾರ್ ಹೋಗಲಿ ಅಧಿಕಾರ ಕಳೆದುಕೊಳ್ಳುವುದರಿಂದ ಪಾರಾದದ್ದೇ ಹೆಚ್ಚು - ಏಕ ಅಧಿಪತ್ಯಕ್ಕೆ ತೆರೆ - ನಾಯ್ಡು, ನಿತೀಶ್ ಎಂಬ ಕಿಂಗ್ ಮೇಕರ್‌ಗಳೇ ಸರ್ಕಾರದಲ್ಲಿ ಪ್ರಮುಖರು - ಇದು ಎಂಥ ಸ್ಥಿತಿ?)

ಅನಿಲ್ ಎಚ್.ಟಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂದರೆ ಹಾಗೇ, ಜನರು ನೀಡುವ ತೀರ್ಪು ಹೇಗಿರುತ್ತೆ, ಯಾಕೆ ಹೀಗಿರುತ್ತೆ ಎಂದೆಲ್ಲಾ ಗೊತ್ತೇ ಆಗದಂತೆ ಮತದಾರ ಎಂಬ ಮಹಾಪ್ರಭು ಮತಯಂತ್ರದ ಮೂಲಕ ತನ್ನ ಮನದ ಅಭಿಪ್ರಾಯ ಮಂಡಿಸಿ ಬಿಟ್ಟಿರುತ್ತಾನೆ.

ತಾವು ಭಾರೀ ಬಹುಮತದಿಂದ ಅಧಿಕಾರ ಹಿಡಿಯುತ್ತೇವೆ ಎಂಬ ಭ್ರಮೆಯಲ್ಲಿದ್ದವರ ಆಸೆಗಳೆಲ್ಲಾ ನಿರಾಸೆಯಾಗುವಂತೆ ಮತದಾರ ತನ್ನ ತೀರ್ಪು ನೀಡಿರುತ್ತಾನೆ. ಮತದಾನ ಎಂಬ ಪ್ರಜಾತಂತ್ರದ ಬಹಳ ದೊಡ್ಡ ಅಸ್ತçದ ವಿಶೇಷತೆಯೇ ಇದು.

ಈ ಬಾರಿಯ ಚುನಾವಣೆಯ ಫಲಿತಾಂಶ ಕೂಡ ಇದನ್ನೇ ಸಾಬೀತು ಪಡಿಸಿದೆ ಇಸ್ ಬಾರ್ ಚಾರ್ ಸೌ ಪಾರ್ (೪೦೦ ಸ್ಥಾನಗಳು) ದೊರಕುತ್ತವೆ ಎಂದು ಘೋಷಿಸುತ್ತಿದ್ದವರನ್ನು ನಾಪಾಸು ಆಗದಂತೆ ಜಸ್ಟ್ ಪಾಸ್ ಮಾಡಿದ್ದೇ ಸದ್ಯದ ಸಾಧನೆ ಎಂಬAತಾಗಿದೆ ಇದ್ದಬದ್ದ ಪಕ್ಷಗಳ ಜತೆ ಹೊಂದಾಣಿಕೆ ಮಾಡಿ ಕೊಂಡು ಒಕ್ಕೂಟ ರಚಿಸಿದ ವರಿಗೆ ನೀವಿನ್ನೂ ಸ್ವಲ್ಪ ಕಾಯಿರಿ ಎಂದು ಗೆಲುವಿನ ಮನೆಯ ಹೊಸ್ತಿನಲ್ಲಿಯೇ ಮತದಾರ ನಿಲ್ಲಿಸಿ ಬಿಟ್ಟಿದ್ದಾನೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯದೇ ಮಿತ್ರ ಪಕ್ಷಗಳ ಜತೆ ಕೇಂದ್ರದಲ್ಲಿ ಅಧಿಕಾರಕ್ಕೇರುವಂಥ ಪರಿಸ್ಥಿತಿ ಇದೆ, ಇಂಥ ಪರಿಸ್ಥಿತಿಯನ್ನು ನಿರೀಕ್ಷೆ ಮಾಡಿದ್ದವರು ಬಹಳ ಕಡಿಮೆ ಮಂದಿ, ಗಮನಿಸಿ ನೋಡಿ, ಆಂಧ್ರದಲ್ಲಿ ಯಾವ ಚಂದ್ರಬಾಬು ನಾಯ್ಡು ಜತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಬೇಕೋ ಬೇಡವೋ ಎಂದು ಬಿಜೆಪಿ ಚಾಣಕ್ಯ ಅಮಿತ್ ಷಾ ಲೆಕ್ಕಾಚಾರ ಹಾಕುತ್ತಾ ಮೀನಾಮೇಷ ಎಣಿಸಿಕೊಂಡು ಕೊನೇ ಹಂತದಲ್ಲಿ ಮೈತ್ರಿಗೆ ಮುಂದಾದರೋ ಅದೇ ಚಂದ್ರಬಾಬು ನಾಯ್ಡು ಇಲ್ಲದೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬAತಾಗಿದೆ, ಬಿಹಾರದಲ್ಲಿ ಯಾವ ನಿತೀಶ್ ಕುಮಾರ್ ಅವರಿಂದ ಅಂತರ ಕಾಯ್ದುಕೊಂಡು

(ಮೊದಲ ಪುಟದಿಂದ) ಬೇಕಾದರೆ ಬಳಸಿಕೊಳ್ಳೋಣ ಎಂದು ಬಿಜೆಪಿ ಯೋಚನೆ ಮಾಡುತ್ತಿತ್ತೋ ಅಂಥ ನಿತೀಶ್ ಕುಮಾರ್ ಯಾವಾಗ ದೆಹಲಿಗೆ ಬರುತ್ತಾರೋ ಎಂದು ಕಾಯುವ ಸ್ಥಿತಿ ಬಿಜೆಪಿಗೆ ಬಂದೊದಗಿದೆ.

ಈಗ ಹೇಗಾಗಿದೆ ಎಂದರೆ, ಕಳೆದ ೧೦ ವರ್ಷಗಳಿಂದ ಆನೆ ನಡೆದದ್ದೇ ದಾರಿ ಎಂಬ ರೀತಿಯಲ್ಲಿ ತಾನು ಸಾಗಿದ್ದೇ ರಾಜಕಾರಣ ಎಂದು ಮುಂದೆ ಸಾಗುತ್ತಿದ್ದ ಪ್ರಧಾನಿ ಮೋದಿ ಅವರ ನಾಗಾಲೋಟಕ್ಕೇ ಮತದಾರ ಬ್ರೇಕ್ ಹಾಕಿದ್ದಾನೆ, ನೀವು ಸರಿಯಿದ್ದೀರಿ, ಆದರೂ ನೀವು ಸರಿಪಡಿಸಿಕೊಳ್ಳುವುದು ಸಾಕಷ್ಟಿದೆ ಎಂಬ ಸಂದೇಶವನ್ನು ಮತದ ಮೂಲಕ ಸ್ಪಷ್ಟವಾಗಿ ರವಾನಿಸಿದ್ದಾನೆ.

ಚುನಾವಣಾ ಸಂದರ್ಭದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ವಿಶ್ವಾಸದಿಂದ ೪೦೦ ಸೀಟ್ ಪಡೆಯುತ್ತೇವೆ ಎಂದು ಘೋಷಿಸಿಕೊಳ್ಳುತ್ತಿದ್ದುದು, ಸ್ಥಳೀಯ ಸಮಸ್ಯೆಗಳನ್ನು ಅರಿಯದೇ ತಮಗಿಷ್ಟ ಬಂದ ಅಭ್ಯರ್ಥಿಗಳನ್ನು ರಾಜ್ಯಗಳಿಂದ ಕಣಕ್ಕಿಳಿಸುತ್ತಿದ್ದುದು, ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೆ ವಿಶ್ವಗುರುವಾಗಲು ಮುಂದಾದದ್ದು, ಏಕಮೇವ ಅಧಿಕಾರದ ಧೋರಣೆ ತುಸು ಹೆಚ್ಚೇ ಅನ್ನಿಸುತ್ತಿದ್ದುದು, ಸಮರ್ಪಕ ಸಲಹೆಗಳನ್ನು ಪಡೆಯದೆ ತಾವು ತಂದದ್ದೇ ಕಾನೂನು, ತಾವು ರೂಪಿಸಿದ್ದೇ ಶಾಸನ ಎಂಬAಥ ನೀತಿ ನಿಯಮಗಳು ಇಂಥ ಅನೇಕ ವಿಚಾರಗಳು ಸಾಮಾನ್ಯ ವರ್ಗ ಮಾತ್ರವಲ್ಲ ವಿದ್ಯಾವಂತ ವರ್ಗದವರ ಅಸಮಾಧಾನಕ್ಕೂ ಕಾರಣವಾಗಿದ್ದವು. ಆದರೆ 'ಮೋದಿ ಮೋದಿ' ಎಂಬ ಘೋಷಣೆಗಳ ಅಬ್ಬರದ ನಡುವೆ ಇಂಥ ಅತೃಪ್ತಿಯನ್ನು ಗಮನಿಸುವ ತಾಳ್ಮೆ ಕಮಲ ಪಾಳಯಕ್ಕೆ ಇರಲಿಲ್ಲ, ಹೀಗಾಗಿಯೇ ಇಂದು ೪೦೦ ಹೋಗಲಿ, ೩೦೦ ಸ್ಥಾನಗಳನ್ನೂ ತಲುಪಲಾಗದೇ ಬಸವಳಿದಂತೆ ಬಿಜೆಪಿ ಎಂಬ ಪಕ್ಷ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅವರನ್ನೇ ಅಧಿಕಾರದ ಊರುಗೋಲಾಗಿ ಬಳಸಲು ಮುಂದಾಗಿದೆ.

ಮತದಾರರ ಮನವರಿಯಬೇಕು

ನಿಜ, ಯಾರಿಗೆ ಆದರೂ ೧೦ ವರ್ಷಗಳು, ಎರಡು ಅವಧಿಯ ಬಳಿಕ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಸುಲಭ ಸಾಧ್ಯದ ಮಾತಲ್ಲ, ಮೂರನೇ ಅವಧಿಗೆ ಅಧಿಕಾರಕ್ಕೆ ಬರಬೇಕಾದರೆ ಮತದಾರನ ಮನಸ್ಥಿತಿಯನ್ನು ಅರಿತೇ ಮುಂದಡಿ ಇಡುವ ಅನಿವಾರ್ಯತೆ ಇದ್ದೇ ಇರುತ್ತದೆ, ೧೦ ವರ್ಷಗಳ ಕಾಲ ಒಂದೇ ಪಕ್ಷ, ಒಂದೇ ವ್ಯಕ್ತಿ, ಅದೇ ಅಬ್ಬರ ಗಮನಿಸಿ ಯಾರೇ ಆದರೂ ಬೇಸತ್ತು ಹೋಗಿರುತ್ತಾರೆ, ಬದಲಾವಣೆಯನ್ನು ಸಹಜವಾಗಿಯೇ ಬಯಸಿರುತ್ತಾರೆ.

ಈ ಮನಸ್ಥಿತಿಯನ್ನು ಅರಿಯದೇ ಜನರ ಅಭಿಪ್ರಾಯಕ್ಕೇ ಬೆಲೆ ಕೊಡದೇ ಪಕ್ಷದ ಕಾರ್ಯಕರ್ತರ ಮನಸ್ಸಿನ ಆಳದಲ್ಲಿ ಏನಿದೆ ಎಂಬುದನ್ನೂ ತಿಳಿದುಕೊಳ್ಳಲು ಹೋಗದೆ ದೆಹಲಿಯಿಂದ ಹುಕುಂ ಚಲಾಯಿಸಲು ಮುಂದಾದರೆ ಏನಾಗಬೇಕೋ ಅದೇ ಆಗಿದೆ, ಯಾವ ದಕ್ಷಿಣ ಭಾರತ ಅದರಲ್ಲಿಯೂ ಕರ್ನಾಟಕವನ್ನು ನಿರ್ಲಕ್ಷö್ಯ ಮಾಡಿ ಮನಬಂದAತೆ ಏಕಪಕ್ಷೀಯ ಧೋರಣೆ ತಳೆದಿದ್ದರೋ ಆ ಕರ್ನಾಟಕವೇ ಇಂದು ಬಿಜೆಪಿಗೆ ೧೭ ಸ್ಥಾನ ನೀಡಿದೆ, ಯಾವ ಉತ್ತರ ಭಾರತ ಕಮಲದ ಭದ್ರಕೋಟೆ ಎಂದು ದೆಹಲಿ ದೊರೆಗಳು ಭಾವಿಸಿದ್ದರೋ ಅದೇ ಉತ್ತರ ಸರಿಯಾಗಿಯೇ ಕೈ ಕೊಟ್ಟಿದೆ.

ಬೇರೆಲ್ಲೂ ಬೇಡ, ಉತ್ತರ ಪ್ರದೇಶ, ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದಲ್ಲಿ ೧ ಸ್ಥಾನವೂ ವಿಪಕ್ಷಗಳಿಗೆ ದೊರಕುವುದಿಲ್ಲ ಎಂದು ಅತೀ ವಿಶ್ವಾಸ ಹೊಂದಿತ್ತೋ, ಅದೇ ಯೋಗಿ ರಾಜ್ಯದ ೮೦ ರ ಪೈಕಿ ಬಿಜೆಪಿ ೩೩ ಸ್ಥಾನ ಪಡೆಯುವಲ್ಲಿ ಸುಸ್ತಾಗಿ ಹೋಗಿದೆ.

ಅಯೋಧ್ಯೆಯಲ್ಲಿಯೇ ಸೋಲು!

ಶ್ರೀರಾಮಮಂದಿರ ನಿರ್ಮಿಸಿದ ಅಯೋಧ್ಯೆಯಲ್ಲಿಯೇ ಬಿಜೆಪಿಗೆ ಗೆಲವು ಕನಸಾಗಿದೆ, ಮಂದಿರವನ್ನು ಮತದಾರ ಪೂಜೆಗೆ ಮಾತ್ರ ಸೀಮಿತಗೊಳಿಸಿದಂತಿದೆ, ಧಾರ್ಮಿಕ ನಂಬಿಕೆಯೇ ಬೇರೆ, ರಾಜಕೀಯವೇ ಬೇರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಯೋಗಿ ಆದಿತ್ಯನಾಥ್ ಸೂಚಿಸಿದ್ದವರಿಗೆ ಸ್ಪರ್ಧೆಗೆ ಅವಕಾಶ ನೀಡದೇ ತಮಗಿಚ್ಚೆ ಬಂದವರನ್ನೇ ಕಣಕ್ಕಿಳಿಸಿ, ಅರ್ಥಾತ್ ಯೋಗಿಯನ್ನೇ ನಿರ್ಲಕ್ಷಿಸಿದ್ದಕ್ಕೆ ಬಿಜೆಪಿಯ ದಿಲ್ಲಿ ಹೈಕಮಾಂಡ್ ತಕ್ಕ ಪಾಠವನ್ನೇ ಕಲಿಯುವಂತಾಗಿದೆ. ತಾನು ಮಾತ್ರ ಗುಣವಂತ, ಸಮರ್ಥ ಎಂದು ಭಾವಿಸಿ ಇತರರು ಲೆಕ್ಕಕ್ಕಿಲ್ಲ ಎಂದು ನಿರಂತರವಾಗಿ ವರ್ತಿಸುವ ಧೋರಣೆ ರಾಜಕಾರಣಕ್ಕೆ ಮುಳುವಾಗಬಲ್ಲುದು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

ಈ ಹಿನ್ನೆಲೆಯಲ್ಲಿ ಮತದಾರ ನೀಡಿದ ತೀರ್ಪಿನ ಕೊಡುಗೆ ಈಗ ದೊಡ್ಡ ಪಾಠದಂತಿದೆ, ಭಾರತದ ಅಭಿವೃದ್ಧಿ, ದೇಶದ ಇಮೇಜ್ ಹೆಚ್ಚಳಕ್ಕೆ ನೀಡಿದ ಕಾಣಿಕೆ, ಜನರಲ್ಲಿ ಹುಟ್ಟಿಸಿದ ಹೊಸ ಭರವಸೆ, ಆಶಾಕಿರಣ ಎಲ್ಲವೂ ಒಂದೆಡೆಯಾಗಿದ್ದರೆ ‘ಅಹಂ’ ಎಂಬುದು ಮತ್ತೊಂದು ಕಡೆ ಹೆಚ್ಚೇ ತೂಗುತ್ತಿತ್ತು, ಈ ಬಾರಿ ಜನ ‘ಅಹಂ’ ವಿರುದ್ಧ ಮತ ನೀಡಿದಂತೆ ಕಂಡು ಬರುತ್ತಿದೆ, ಅಂದರೆ ದೇಶದ ಬಗ್ಗೆ ನಿಮ್ಮ ಚಿಂತನೆಗಳು ಸರಿಯಿದೆ, ಹೀಗಾಗಿ ೨೪೦ ಸ್ಥಾನಗಳನ್ನು ಇರಿಸಿಕೊಳ್ಳಿ, ಆದರೆ ಅಹಂ ತಗ್ಗಿಸಿಕೊಳ್ಳಲು ಟಿಡಿಪಿಯ ನಾಯ್ಡು ಜತೆಗಿರುವ ೧೬, ಜೆಡಿಯು ನಿತೀಶ್ ಜತೆಗಿರುವ ೧೨ ಸೀಟ್‌ಗಳನ್ನು ಬಳಸಿಕೊಳ್ಳಿ ಎಂಬAಥ ತೀರ್ಪು ನೀಡಿದ್ದಾನೆ.

ಏನಾದೀತು?

ಆಂಧ್ರದಲ್ಲಿ ಯಾರೂ ಯೋಚಿಸದ ರೀತಿಯಲ್ಲಿ ಚಂದ್ರಬಾಬು ನಾಯ್ಡು ಮತ್ತೆ ರಾಜಕೀಯ ಪಡಸಾಲೆಯಲ್ಲಿ ಪುಟಿದೆದ್ದಿದ್ದಾರೆ, ೧೬ ಸ್ಥಾನಗಳನ್ನು ಲೋಕಸಭಾ ಚುನಾವಣೆಯಲ್ಲಿ ನಾಯ್ಡು ಗೆದ್ದಿದ್ದರೆ ಆಂಧ್ರದ ವಿಧಾನಸಭೆಯ ೧೩೫ ಸೀಟ್‌ಗಳನ್ನು ಪಡೆದು ತೆಲುಗರ ಕಣ್ಮಣಿಯಾಗಿದ್ದಾರೆ.

ಕಿಂಗ್‌ಮೇಕರ್

ಈಗ ಆಂಧ್ರದ ಚಂದ್ರನAತೆ ಕಂಗೊಳಿಸಿರುವ ನಾಯ್ಡು ತಾವೇ ನಿರೀಕ್ಷಿಸದ ರೀತಿಯಲ್ಲಿ ದೆಹಲಿ ಆಡಳಿತದಲ್ಲಿ ಕಿಂಗ್ ಮೇಕರ್ ಆಗುವಂಥ ರಾಜಕೀಯ ಸ್ಥಿತಿ ಬಂದೊದಗಿದೆ, ಆಂಧ್ರ ವಿಧಾನಸಭೆಯ ೧೭೫ ಸ್ಥಾನಗಳ ಪೈಕಿ ಟಿಡಿಪಿ ೧೩೫ ಸ್ಥಾನ ಗೆದ್ದಿದೆ ಎಂದರೆ ನಾಯ್ಡು ಹವಾ ಹೇಗಿದ್ದಿರಬಹುದು?

ಇಂಡಿಯಾ ಒಕ್ಕೂಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಲಾಲು ಪ್ರಸಾದ್ ಯಾದವ್ ಬಿಹಾರದಲ್ಲಿ ಮಕಾಡೆ ಮಲಗಿದ್ದಾರೆ, ೪೦ ಸಂಸತ್ ಸ್ಥಾನಗಳಲ್ಲಿ ನಿತೀಶ್ ಕುಮಾರ್ ೧೨ ಸ್ಥಾನ ಪಡೆಯುವ ಮೂಲಕ ದುರ್ಬಲ ಮುಖ್ಯಮಂತ್ರಿ ಎಂಬ ಹಣೆಪಟ್ಟಿಯಿಂದ ಹೊರಬಂದಿದ್ದಾರೆ, ಇಷ್ಟು ಮಾತ್ರವೇ ಅಲ್ಲ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ನಿತೀಶ್ ಕುಮಾರ್ ಬೆಂಬಲ ಬೇಕೇ ಬೇಕು ಎಂಬAಥ ಸ್ಥಿತಿಗೆ ಕಾರಣರಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ೧೦ ವರ್ಷಗಳ ಬಳಿಕ ಕೇಂದ್ರದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆ ಖಂಡಿತಾ, ಈ ಮೈತ್ರಿ ಸರ್ಕಾರದಲ್ಲಿ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅವರೇ ನಿಜವಾದ ಕಿಂಗ್‌ಗಳು, ಯಾಕೆಂದರೆ ನಾಯ್ಡು ಅವರ ೧೬, ನಿತೀಶ್ ಅವರ ೧೨ ಸೇರಿದಂತೆ ೨೮ ಸಂಸದರ ಬೆಂಬಲ ಇಲ್ಲದೇ ಹೋದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಆಗಲಾರದು.

ಮುಂದಿನ ಸಂಕಷ್ಟ ಹೇಗಿದೆ ಎಂದರೆ, ಮೊದಲಿನಂತೆ ಮೋದಿ ಅಥವಾ ಅಮಿತ್ ಷಾ ತಮ್ಮದೇ ನಿರ್ಧಾರಗಳನ್ನು ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾವುದೇ ನಿರ್ಧಾರಕ್ಕೆ ಮುನ್ನ ನಾಯ್ಡು, ನಿತೀಶ್ ಕುಮಾರ್ ಒಪ್ಪಿಗೆ ಕೇಳಲೇಬೇಕು, ಅದು ಮೈತ್ರಿ ಧರ್ಮ, ಮೈತ್ರಿ ನಾಯಕರ ಜತೆ ಮಾಡಿಕೊಂಡ ಒಪ್ಪಂದಗಳು, ಮೈತ್ರಿ ಪಕ್ಷಗಳ ೨೮ ಸಂಸದರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ನೀಡಲೇಬೇಕು, ಸಾಮಾನ್ಯವಾಗಿ ಮೈತ್ರಿ ಸರ್ಕಾರದಲ್ಲಿ ಮೈತ್ರಿ ಪಕ್ಷಗಳ ನಡುವೆ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ, ಇಂಥ ಯೋಜನೆಗಳನ್ನು ಎಚ್ಚರಿಕೆಯಿಂದಲೇ ಜಾರಿಗೊಳಿಸುವ ಅನಿವಾರ್ಯತೆ ಇದೆ.

ಮೈತ್ರಿ ಮಾಡಿಕೊಳ್ಳುವ ಮುನ್ನ ನಾಯ್ಡು ಅಥವಾ ನಿತೀಶ್ ಕುಮಾರ್ ಬಿಜೆಪಿಯ ಆಪರೇಷನ್ ಬಗ್ಗೆ ಖಂಡಿತಾ ಯೋಚಿಸಿರುತ್ತಾರೆ, ಸರ್ಕಾರ ರಚನೆಯಾದ ಮೇಲೆ ತಮ್ಮ ಪಕ್ಷದ ಸಂಸದರನ್ನು ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಸೆಳೆದುಕೊಳ್ಳುವ ಸಾಧ್ಯತೆ ಬಗ್ಗೆ ಇವರೀರ್ವರಿಗೂ ಅರಿವಿಲ್ಲದೇ ಇಲ್ಲ, ಆಪರೇಷನ್ ತಂತ್ರಗಾರಿಕೆಯಲ್ಲಿ ದೇಶದಲ್ಲಿಯೇ ಹೆಸರುವಾಸಿಯಾದ ಬಿಜೆಪಿ ಜತೆ ಮೈತ್ರಿಗೆ ಮುನ್ನ ಇಂಥ ಅಪಾಯಗಳ ಬಗ್ಗೆಯೂ ಕಿಂಗ್ ಮೇಕರ್‌ಗಳು ಮುನ್ನೆಚ್ಚರಿಕೆ ವಹಿಸಿರುತ್ತಾರೆ.

ಮೋದಿ ಮತ್ತು ಪರಿವಾರಕ್ಕೆ ಎದುರಾಗಬಹುದಾದ

ಸಮಸ್ಯೆಗಳು ಏನೆಂದರೆ,

ಸಮ್ಮಿಶ್ರ ಸರ್ಕಾರದಲ್ಲಿ ತಾವು ಉದ್ದೇಶಿಸಿದ್ದ ಏಕರೂಪ ನ್ಯಾಯ ಸಂಹಿತೆ ಜಾರಿಗೊಳಿಸಲು ಸುಲಭ ಸಾಧ್ಯವಾಗಲಿಕ್ಕಿಲ್ಲ, ಒಂದು ದೇಶ - ಒಂದು ಚುನಾವಣೆಯಂಥ ನಿರ್ಧಾರ ಕೈಗೊಳ್ಳಲು ಮಿತ್ರ ಪಕ್ಷಗಳ ಒಪ್ಪಿಗೆಗಾಗಿ ಕಾಯಬೇಕು.

ಮೈತ್ರಿ ಸರ್ಕಾರದಲ್ಲಿ ಯಾರಿಂದಲೇ ಆದರೂ ಕೊಂಚ ಹೆಚ್ಚು ಕಮ್ಮಿಯಾದರೂ ನಂಬಿಕೊAಡಿರುವ ನಾಯಕರು ಮೈತ್ರಿ ಮುರಿದುಕೊಂಡು ಸರ್ಕಾರದಿಂದ ಹೊರಹೋದಲ್ಲಿ ಅದರ ಪರಿಣಾಮ ಎದುರಿಸಲೇಬೇಕು, ತಮಗಿಷ್ಟ ಬಂದAತೆ ಮಂತ್ರಿ ಮಂಡಲದಲ್ಲಿ ನೇಮಕ ಸಾಧ್ಯವಿಲ್ಲ, ೧೦ ವರ್ಷಗಳಲ್ಲಿ ಇದ್ದಂತೆ ಬಿಜೆಪಿಯೊಳಗಿನ ಎಲ್ಲರೂ ಸಹಮತ ವ್ಯಕ್ತಪಡಿಸುವುದು ಸಾಧ್ಯವಾಗಲಿಕ್ಕಿಲ್ಲ, ಮೋದಿ, ಅಮಿತ್ ಷಾ ವಿರುದ್ದ ಇರುವ ಮನಸ್ಸುಗಳು ಭುಗಿಲೇಳಬಹುದು.

ವಿಶ್ವಾಸಾರ್ಹತೆಯ ದಿಗಿಲು!

ಎಲ್ಲಕ್ಕಿಂತ ಮುಖ್ಯವಾಗಿ ಚಂದ್ರಬಾಬು ನಾಯ್ಡು ಅಥವಾ ನಿತೀಶ್ ಕುಮಾರ್ ಆಗಲಿ ಎಷ್ಟರ ಮಟ್ಟಿಗೆ ನಂಬಿಕೆಗೆ ಅರ್ಹರು ಎಂಬ ಪ್ರಶ್ನೆಯೂ ಮೂಡುತ್ತದೆ. ಈ ಹಿಂದೆ ನಾಯ್ಡು ಮೈತ್ರಿ ಪಕ್ಷದಲ್ಲಿದ್ದು ನಂತರ ಮುನಿಸಿಕೊಂಡು ದೂರ ಸರಿದಿರುವ ಇತಿಹಾಸ ಇದೆ, ಆಂಧ್ರದಲ್ಲಿ ಅಗತ್ಯವಾಗಿರುವ ಅಮರಾವತಿ ಹೆಸರಿನ ರಾಜಧಾನಿ ನಿರ್ಮಿಸುವ ಮಹತ್ತರ ಯೋಜನೆ ನಾಯ್ಡು ಬಳಿಯಿದೆ. ಇದಕ್ಕೆ ಅಗತ್ಯವಾದ ಕೋಟ್ಯಂತರ ಅನುದಾನ ಕೇಂದ್ರದಿAದ ದೊರಕಬೇಕಾಗಿದೆ, ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಮೇಲೂ ನಾಯ್ಡು ಕಣ್ಣಿಟ್ಟಿದ್ದಾರೆ, ತಾವು ಹೇಳಿದ ಸಂಸದರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯೂ ಇದೆ, ರಾಹುಲ್ ಗಾಂಧಿ ಅವರ ಇಂಡಿಯಾ ಒಕ್ಕೂಟದಲ್ಲಿ ಕೆಲವೇ ತಿಂಗಳ ಹಿಂದೆ ಗುರುತಿಸಿಕೊಂಡಿದ್ದ ಚಂಚಲ ಮನಸ್ಥಿತಿಯ ನಿತೀಶ್ ಕುಮಾರ್ ಅವರನ್ನೂ ಎಷ್ಟು ದಿನ ನಂಬಲು ಸಾಧ್ಯ? ನಿತೀಶ್ ಬಳಿಯಿರುವುದು ೧೨ ಸ್ಥಾನಗಳಾದರೂ ಬೇಡಿಕೆಗಳು ನೂರಾರು ಇವೆ, ಹೇಳಿ ಕೇಳಿ ಅವರು ಉತ್ತರ ಭಾರತದ ನಿಪುಣ ರಾಜಕಾರಣಿ, ಮುನಿಸು ತುಸು ಹೆಚ್ಚೇ ಇದೆ, ಈ ಮೊದಲು ಪ್ರಧಾನಿ ಹುದ್ದೆ ಮೇಲೂ ಕಣ್ಣಿಟ್ಟಿದ್ದರು, ಹೀಗಾಗಿ ಯಾವಾಗ ನಿತೀಶ್ ಏನು ಬೇಡಿಕೆ ಇಡುತ್ತಾರೋ ಎಂಬ ಚಿಂತೆಯಲ್ಲಿಯೇ ಬಿಜೆಪಿ ವರಿಷ್ಠರು ನಿದ್ದೆಗೆಡಬೇಕಾಗಿದೆ.

ಈ ಎಲ್ಲಾ ಹಗ್ಗದ ಮೇಲೆ ನಡಿಗೆ ೧೦ ವರ್ಷಗಳಿಂದ ತಮ್ಮ ಇಚ್ಛಾನುಸಾರ ನಡೆಯುತ್ತಿದ್ದ ಮೋದಿ ಪರಿವಾರಕ್ಕೆ ಕಠಿಣವಾಗದೇ ಮತ್ತೇನು?

ಇನ್ನೊಂದು ಪ್ರಮುಖ ಅಂಶ ಎಂದರೆ, ನಾಯ್ಡು ಆಗಲಿ, ನಿತೀಶ್ ಆಗಲಿ ಮುನಿಸಿಕೊಂಡು ಮೈತ್ರಿಯಿಂದ ದೂರವಾದ ಸಂದರ್ಭದಲ್ಲಿ ಇದಕ್ಕಾಗಿ ಕಾಯುತ್ತಾ ಕುಳಿತಿರುವ ಇಂಡಿಯಾ ಒಕ್ಕೂಟ ಇವರನ್ನು ಸಂಪರ್ಕಿಸಿ ತಮ್ಮ ಸರ್ಕಾರ ರಚನೆಗೆ ಮುಂದಾಗುವ ಸಾಧ್ಯತೆ ಇದ್ದೇ ಇದೆ.

ಹೀಗಾಗಿಯೇ ನಾಯ್ಡು ಮತ್ತು ನಿತೀಶ್ ಕೇಂದ್ರ ಸರ್ಕಾರ ರಚನೆಯಾದಲ್ಲಿ ಕಿಂಗ್ ಮೇಕರ್‌ಗಳಾಗಿ ದೇಶದ ರಾಜಕೀಯದಲ್ಲಿಯೇ ಬಹಳ ಮಹತ್ವದ ಪಾತ್ರ ವಹಿಸುತ್ತಾರೆ, ಕಿಂಗ್ ಮೇಕರ್‌ಗಳು ಒಂದು ಸರ್ಕಾರವನ್ನು ಓರ್ವ ನಾಯಕನ ಉದಯಕ್ಕೆ ಹೇಗೆ ಕಾರಣರಾಗುತ್ತಾರೆಯೋ ಹಾಗೇ ಆ ಸರ್ಕಾರವನ್ನೂ ಆ ನಾಯಕನ ಅಧಿಕಾರದ ಕೊನೆಗೂ ಕ್ಷಣ ಮಾತ್ರದಲ್ಲಿ ಕಾರಣರಾಗಬಲ್ಲರು, ಇದು ಇತಿಹಾಸದ ಸತ್ಯ.

೨೦೨೪ರ ಮಹಾಚುನಾವಣೆ ಕಲಿಸಿದ ಮಹಾಪಾಠ ಎಂದರೆ, ನೀವು ಯೋಚಿಸಿದಂತೆ ಯಾರೂ ದೊಡ್ಡವರಲ್ಲ, ನೀವು ಯೋಚಿಸಿದಂತೆ ಯಾವ ಪಕ್ಷವೂ ಸಣ್ಣದಲ್ಲ, ೧೨ - ೧೬ ಸೀಟ್ ಪಡೆದವನ ಕಾಲು ಬುಡಕ್ಕೂ ಘಟಾನು ಘಟಿಗಳು ತೆರಳಬೇಕಾಗಬಹುದು, ಸ್ನೇಹಚಾರವೇ ಬೇಡ ಎಂದು ದೂರವಿಟ್ಟವನನ್ನು ‘ನೀನಿಲ್ಲದೇ ನಾನಿಲ’್ಲ ಎಂದು ಅಪ್ಪಿಕೊಳ್ಳುವ ಪರಿಸ್ಥಿತಿ ಬರಬಹುದು. ಈಗ ಎಲ್ಲರಿಗೂ ಅರಿವಾಗಬಹುದು. ಮತದಾರ ಎಂಬುವವನು ಕಿಂಗ್ ಅಲ್ಲವೇ ಅಲ್ಲ, ಯಾರಿಗೆ ಬೇಕಾದರೂ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಬಲ್ಲ ಸಾಮರ್ಥ್ಯ ಹೊಂದಿರುವ,,,, ಅವನೋರ್ವ ಕಿಂಗ್ ಮೇಕರ್ ಅಷ್ಟೇ!!