ನವದೆಹಲಿ, ಜೂ.೫: ನವದೆಹಲಿ: ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಇಂದು ಬುಧವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ೧೭ನೇ ಲೋಕಸಭೆಯನ್ನು ವಿಸರ್ಜಿಸಲಾಯಿತು.

ಬಳಿಕ ರಾಷ್ಟçಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ನೂತನ ಸರ್ಕಾರ ರಚನೆಗೆ ಅವಕಾಶ ಕೋರಿದರು. ಇಂದು ಸಂಜೆ ನವದೆಹಲಿಯಲ್ಲಿ ನಡೆದ ಎನ್‌ಡಿಎ ಮುಖಂಡರ ಸಭೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಲು ಬಿಜೆಪಿ ಮತ್ತು ಎಲ್ಲ ಮಿತ್ರ ಪಕ್ಷಗಳ ಪ್ರಮುಖರು ಅವಿರೋಧವಾಗಿ ಬೆಂಬಲ ಸೂಚಿಸಿದರು.

ಇಂದು ಬೆಳಿಗ್ಗೆ ಪ್ರಧಾನ ಮಂತ್ರಿ ಹಾಗೂ ಅವರ ಸಂಪುಟ ಸದಸ್ಯರ ರಾಜೀನಾಮೆ ಅಂಗೀಕರಿಸಿದ ರಾಷ್ಟçಪತಿ ಮುರ್ಮು ಅವರು ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವAತೆ ಮನವಿ ಮಾಡಿದರು ಎಂದು ರಾಷ್ಟçಪತಿ ಭವನದ ಪ್ರಕಟಣೆಯಲ್ಲಿ ತಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಸ್ಪಷ್ಟ ಬಹುಮತ ದೊರೆತ ಹಿನ್ನೆಲೆಯಲ್ಲಿ ಜೂನ್ ೮ ರ ಶನಿವಾರದಂದು ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಲಾಗಿದೆ. ಅದೇ ದಿನ ಕೆಲವು ಕೇಂದ್ರ ಸಚಿವ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ನಡೆಯುವ ನಿರೀಕ್ಷೆಯಿದೆ.

(ಮೊದಲ ಪುಟದಿಂದ) ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಇಂದು ಬೆಳಿಗ್ಗೆ ಪ್ರಧಾನಿ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ೧೭ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಲಾಯಿತು. ಸಭೆಯು ಬೆ. ೧೧.೩೦ ಕ್ಕೆ ಪ್ರಾರಂಭವಾಗಿ ನಂತರ ಮಂತ್ರಿ ಮಂಡಲದ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಇದು ಮೋದಿ ೨.೦ ರ ಕ್ಯಾಬಿನೆಟ್ ಮತ್ತು ಮಂತ್ರಿ ಮಂಡಳಿಯ ಕೊನೆಯ ಸಭೆಯಾಗಿದೆ. ಪ್ರಸ್ತುತ ಲೋಕಸಭೆಯ ವಿಸರ್ಜನೆಯ ಕುರಿತು ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿದ್ದು ೧೮ ನೇ ಲೋಕಸಭೆಗೆ ದಾರಿ ಮಾಡಿಕೊಡುತ್ತದೆ. ೧೭ನೇ ಲೋಕಸಭೆಯ ಅವಧಿ ಜೂನ್ ೧೬ಕ್ಕೆ ಕೊನೆಗೊಳ್ಳಲಿದೆ. ಇಂದಿನ ಸಂಪುಟ ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಅವಲೋಕನ ಮಾಡಲಾಯಿತು. ಮುಂದಿನ ಸರ್ಕಾರ ರಚನೆಗೆ ಸಂಬAಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ೨೪೦ ಸ್ಥಾನಗಳನ್ನು ಪಡೆದು ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿ ತನ್ನ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸಲು ಮುಂದಾಗಿದೆ. ೫೪೩ ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ ೨೯೩ ಸ್ಥಾನಗಳನ್ನು ಪಡೆದುಕೊಂಡಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ೯೯ ಸ್ಥಾನಗಳನ್ನು ಗಳಿಸಿದ್ದು ಇಂಡಿಯಾ ಬ್ಲಾಕ್ ಒಟ್ಟಾಗಿ ೨೩೩ ಸ್ಥಾನಗಳನ್ನು ಗೆದ್ದುಕೊಂಡಿವೆ.

ಎನ್ ಡಿ ಎ ಸಭೆಯಲ್ಲಿ ಮೋದಿ ಆಯ್ಕೆ

ಎನ್‌ಡಿಎ ನಾಯಕರ ಸಭೆ ಇಂದು ಸಂಜೆ ನವದೆಹಲಿಯಲ್ಲಿ ನಡೆಯಿತು. ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಟಿಡಿಪಿ ಹಾಗೂ ಜೆಡಿಯು ಸೇರಿದಂತೆ ಎಲ್ಲಾ ಮಿತ್ರ ಪಕ್ಷಗಳು ಒಪ್ಪಿಗೆ ಸೂಚಿಸಿವೆ. ಮೋದಿ ಅವರು ಜೂನ್ ೭ ರಂದು ಸಂಜೆ ೫ಕ್ಕೆ ರಾಷ್ಟ್ರಭವನಕ್ಕೆ ತೆರಳಿ ರಾಷ್ಟçಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮೋದಿ ಅವರಿಗೆ ಎನ್‌ಡಿಎ ನಾಯಕರು ಸಾಥ್ ನೀಡಲಿದ್ದಾರೆ. ಇಂದು ಸಂಜೆ ನವದೆಹಲಿಯಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಲ್ಜೆಪಿ(ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕೂಡ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಟಿಡಿಪಿ ೧೬, ಜೆಡಿಯು ೧೨, ಶಿಂಧೆ ನೇತೃತ್ವದ ಶಿವಸೇನೆ ೭ ಮತ್ತು ಎಲ್ಜೆಪಿ(ರಾಮ್ ವಿಲಾಸ್) ಐದು ಸ್ಥಾನಗಳನ್ನು ಗೆದ್ದು ಮೋದಿ ಮೂರನೇ ಬಾರಿಗೆ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಸುಮಾರು ೧೫ ಮಿತ್ರ ಪಕ್ಷಗಳ ಒಕ್ಕೂಟವಾಗಿ ಎನ್‌ಡಿಎ ಹೊರಹೊಮ್ಮಿದೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ನಾಯಕರು ಔಪಚಾರಿಕವಾಗಿ ಮೋದಿಯವರ ನಾಯಕತ್ವವನ್ನು ಬೆಂಬಲಿಸಿದ್ದು, ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ಪತ್ರ ನೀಡಿವೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಒಮ್ಮತದ ನಿರ್ಣಯ

ಸಭೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಎಲ್ಲ ಪಕ್ಷಗಳ ಪ್ರಮುಖರು ಲಿಖಿತವಾಗಿ ಕೈಗೊಂಡ ನಿರ್ಣಯ ಹೀಗಿದೆ: “ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರದ ಸಾರ್ವಜನಿಕ ಕಲ್ಯಾಣ ನೀತಿಗಳಿಂದಾಗಿ ಭಾರತದ ೧೪೦ ಕೋಟಿ ದೇಶವಾಸಿಗಳು ಕಳೆದ ೧೦ ವರ್ಷಗಳಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿರುವುದನ್ನು ಕಂಡಿದ್ದಾರೆ. ಬಹಳ ದೀರ್ಘವಾದ ಅಂತರದ ನಂತರ, ಸುಮಾರು ೬ ದಶಕಗಳ ನಂತರ, ಭಾರತದ ಜನರು ಸತತ ಮೂರನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಪ್ರಬಲ ನಾಯಕತ್ವವನ್ನು ಆಯ್ಕೆ ಮಾಡಿದ್ದಾರೆ.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಒಗ್ಗಟ್ಟಿನಿಂದ ಹೋರಾಡಿ ಗೆದ್ದಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಗೌರವಾನ್ವಿತ ಎನ್‌ಡಿಎ ನಾಯಕರಾದ ನರೇಂದ್ರ ಮೋದಿ ಅವರನ್ನು ನಾವೆಲ್ಲರೂ ಸರ್ವಾನುಮತದಿಂದ ನಮ್ಮ ನಾಯಕರನ್ನಾಗಿ ಆಯ್ಕೆ ಮಾಡುತ್ತೇವೆ.

ಮೋದೀಜಿಯವರ ನಾಯಕತ್ವದಲ್ಲಿ, ಎನ್ಡಿಎ ಸರ್ಕಾರವು ಭಾರತದ ಬಡ ಮಹಿಳೆಯರು, ಯುವಕರು, ರೈತರು ಮತ್ತು ಶೋಷಿತ, ವಂಚಿತ ಮತ್ತು ಬಳಲುತ್ತಿರುವ ನಾಗರಿಕರ ಸೇವೆಗೆ ಬದ್ಧವಾಗಿದೆ. ಭಾರತದ ಪರಂಪರೆಯನ್ನು ಕಾಪಾಡುವ ಮೂಲಕ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಭಾರತದ ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರವು ಕೆಲಸ ಮಾಡುವುದನ್ನು ಮುಂದುವರಿಸುತ್ತದೆ.”

ಈ ನಿರ್ಣಯವನ್ನು ಇಂದು ನವದೆಹಲಿಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ನಿರ್ಣಯಕ್ಕೆ ಸಹಿ ಮಾಡಿದವರ ಹೆಸರುಗಳು ಈ ಕೆಳಗಿನಂತಿದೆ.

ಬಿಜೆಪಿಯ ಜೆ.ಪಿ. ನಡ್ಡಾ, ರಾಜ್‌ನಾಥ್ ಸಿಂಗ್, ಅಮಿತ್ ಶಾ, ಟಿ.ಡಿ.ಪಿಯ ಚಂದ್ರಬಾಬು ನಾಯ್ಡು, ಜೆ.ಡಿ.ಯುನ ನಿತೀಶ್ ಕುಮಾರ್, ರಾಜೀವ್ ರಂಜನ್ ಸಿಂಗ್, ಸಂಜಯ್ ಜಾ, ಎಸ್.ಹೆಚ್.ಎಸ್‌ನ ಏಕ್‌ನಾಥ್ ಶಿಂದೆ, ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿ, ಎಲ್.ಜೆ.ಪಿ(ಆರ್‌ವಿ) ಯ ಚಿರಾಗ್ ಪಾಸ್ವಾನ್, ಹೆಚ್.ಎ.ಎಂನ ಜಿತಾನ್ ರಾಂ ಮಾಂಜಿ, ಜೆಎಸ್‌ಪಿಯ ಪವನ್ ಕಲ್ಯಾಣ್, ಎನ್‌ಸಿಪಿಯ ಸುನಿಲ್ ತಾತ್‌ಕರೆ, ಪ್ರಫುಲ್ ಪಟೇಲ್, ಎಡಿಎಸ್ ನ ಅನುಪ್ರಿಯ ಪಟೇಲ್, ಆರ್À.ಎಲ್.ಡಿಯ ಜಯಂತ್ ಚೌಧರಿ, ಯು.ಪಿ.ಪಿ.ಎಲ್‌ನ ಪ್ರಮೋದ್ ಬೋರೋ, ಎ.ಜಿ.ಪಿಯ ಅತುಲ್ ಬೋರ, ಎಸ್.ಕೆ.ಎಂನ ಇಂದ್ರ ಹಂಗ್ ಸುಬ್ಬ ಹಾಗೂ ಎಜೆ.ಎಸ್‌ನ ಸುದೇಶ್ ಮೆಹ್ತೋ.