ಕೂಡಿಗೆ, ಜೂ. ೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ವ್ಯಾಪ್ತಿಯಲ್ಲಿ ಗಂಧದ ಮರವನ್ನು ಕತ್ತರಿಸಿ ತಂದು, ಹಾರಂಗಿ ನದಿ ದಂಡೆಯಲ್ಲಿ ತುಂಡರಿಸಿ ಸಾಗಿಸಿರುವ ಕುರುಹು ಕಂಡುಬAದಿದೆ.

ಮದಲಾಪುರ ಕಡೆಯಿಂದ ಬಂದು ಹಾರಂಗಿ ನದಿಯನ್ನು ದಾಟಿ ಸೈನಿಕ ಶಾಲೆಯ ಹಿಂಭಾಗಕ್ಕೆ ತಂದು ತುಂಡರಿಸಿ ಗಂಧ ಶೇಖರಿಸಿ ಸಾಗಿಸಿರುವುದು ಕಂಡುಬAದಿದೆ. ಸ್ಥಳಕ್ಕೆ ಅತ್ತೂರು ಉಪ ವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.