ಶನಿವಾರಸಂತೆ, ಮೇ ೫: ಶಿಕ್ಷಕರು ಕೇವಲ ಉದ್ಯೋಗಿಗಳಲ್ಲ ಎರಡನೇ ಪೋಷಕರಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ರೂವಾರಿಗಳು ಎಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ೨೦೨೩-೨೪ನೇ ಸಾಲಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಚಾರ್ಯ ದೇವೋಭವ ಎಂದು ಹೇಳುವ ಶಿಕ್ಷಕರನ್ನು ಗೌರವಿಸಬೇಕು. ಗುರುವಂದನೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಶಿಕ್ಷಕರನ್ನು ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರಮ್ಯಾ, ದಿಲೀಪ್, ವಸಂತ್, ರಕ್ಷಿತ್, ಅಶೋಕ್, ಚೆಲುವರಾಜ್, ದಿವ್ಯಾ, ಚಾಂದಿನಿ, ಕವಿತಾ, ಲೋಹಿತ್, ಕೀರ್ತಿ, ಗಾಯತ್ರಿ, ಸತೀಶ್, ಸುಭಾಷ್, ನಯನ, ಆಶಾ, ಸೌಮ್ಯಾ ಇತರರು ಹಾಜರಿದ್ದರು.