ಸೋಮವಾರಪೇಟೆ, ಮೇ ೫: ತಾಲೂಕಿನ ಗರಗಂದೂರು ಬಿ. ಗ್ರಾಮದ ಹೊಸತೋಟ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ನಿರ್ಮಾಣಕ್ಕೆ ಸೋಮವಾರಪೇಟೆ ಲಯನ್ಸ್ ಕ್ಲಬ್ ಹಾಗೂ ಬೆಂಗಳೂರು ಯಲಹಂಕದ ಲಯನ್ಸ್ ಸಂಸ್ಥೆ ಮುಂದೆ ಬಂದಿದ್ದು, ರೂ. ೪.೩೦ ಲಕ್ಷ ವೆಚ್ಚದ ಯೋಜನೆಗೆ ಚಾಲನೆ ನೀಡಲಾಯಿತು.

ಗರಗಂದೂರು ಬಿ. ಗ್ರಾಮದ ಹೊಸತೋಟದಲ್ಲಿ ಬಹುತೇಕ ಬಡ ಕುಟುಂಬಗಳೇ ನೆಲೆಸಿದ್ದು, ಸ್ಮಶಾನಕ್ಕೆ ಜಾಗದ ಕೊರತೆಯಿದೆ. ಕೂಲಿ ಕಾರ್ಮಿಕ ಕುಟುಂಬಗಳು ನೆಲೆಸಿರುವ ಈ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸಿಲಿಕಾನ್ ಚೇಂಬರ್‌ನ ಅಗತ್ಯವಿರುವುದನ್ನು ಮನಗಂಡ ಸೋಮವಾರಪೇಟೆ ಲಯನ್ಸ್ ಸಂಸ್ಥೆಯು, ಯಲಹಂಕದ ಲಯನ್ಸ್ ಘಟಕದೊಂದಿಗೆ ಚರ್ಚೆ ನಡೆಸಿ, ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ಅದರAತೆ ರೂ. ೪.೩೦ ಲಕ್ಷ ವೆಚ್ಚದಲ್ಲಿ ಚೇಂಬರ್ ನಿರ್ಮಾಣವಾಗಿದ್ದು, ಕಾಮಗಾರಿಗೆ ಲಯನ್ಸ್ ಪ್ರಮುಖರು ಚಾಲನೆ ನೀಡಿದರು. ಈ ಸಂದರ್ಭ ಸೋಮವಾರಪೇಟೆ ಲಯನ್ಸ್ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಚಾವಾಡಿಮನೆ ಶಿವಕುಮಾರ್, ಯಲಹಂಕ ಲಯನ್ಸ್ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಜಿತೇಂದ್ರ ಸಿಂಗ್, ಸೋಮವಾರಪೇಟೆ ಘಟಕದ ಪ್ರಮುಖರಾದ ಚೆಟ್ಟಿಮಾಡ ರೋಹಿತ್, ನಂಗಾರು ರಾಮಚಂದ್ರ, ಎ.ಪಿ. ಸುಬ್ಬಯ್ಯ, ಪ್ರಮುಖರಾದ ರಾಜು, ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು.ನಿರ್ಮಾಣವಾಗಿದ್ದು, ಕಾಮಗಾರಿಗೆ ಲಯನ್ಸ್ ಪ್ರಮುಖರು ಚಾಲನೆ ನೀಡಿದರು. ಈ ಸಂದರ್ಭ ಸೋಮವಾರಪೇಟೆ ಲಯನ್ಸ್ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಚಾವಾಡಿಮನೆ ಶಿವಕುಮಾರ್, ಯಲಹಂಕ ಲಯನ್ಸ್ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಜಿತೇಂದ್ರ ಸಿಂಗ್, ಸೋಮವಾರಪೇಟೆ ಘಟಕದ ಪ್ರಮುಖರಾದ ಚೆಟ್ಟಿಮಾಡ ರೋಹಿತ್, ನಂಗಾರು ರಾಮಚಂದ್ರ, ಎ.ಪಿ. ಸುಬ್ಬಯ್ಯ, ಪ್ರಮುಖರಾದ ರಾಜು, ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು.