ಗೋಣಿಕೊಪ್ಪಲು, ಮೇ ೩ : ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ನೂತನ ಅಧ್ಯಕ್ಷರಾಗಿ ಮುರುವಂಡ ಎನ್. ಉತ್ತಪ್ಪ ಆಯ್ಕೆಗೊಂಡಿದ್ದು, ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಗರದ ಸ್ಪೆöÊಸ್‌ರಾಕ್ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮುರುವಂಡ ಎನ್. ಉತ್ತಪ್ಪ ಮಾತನಾಡಿ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕಳೆದ ೧೧ ವರ್ಷಗಳ ಹಿಂದೆ ಪ್ರಾರಂಭವಾಗಿದೆ. ವರ್ಷದಿಂದ ವರ್ಷಕ್ಕೆ ಸದಸ್ಯರು ಸೇರ್ಪಡೆಗೊಳ್ಳುತ್ತಿದ್ದಾರೆ. ಎಸ್‌ಸಿಐ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಿವೆ. ಸಮಾಜದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಸ್ಥೆಯು ಮಾದರಿಯಾಗಲು ನಾವೆಲ್ಲರೂ ಕೈಜೋಡಿಸಬೇಕು. ದೇಶ ಹಾಗೂ ವಿದೇಶದಲ್ಲಿಯೂ ಎಸ್‌ಸಿಐ ಅಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ಹೊಂದುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ ಎಂದರು.

ಗೋಣಿಕೊಪ್ಪಲುವಿನಲ್ಲಿ ಕಳೆದ ೧೧ ವರ್ಷಗಳ ಹಿಂದೆ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದೆ. ಮಾತೃ ಘಟಕ ಪ್ರಾರಂಭವಾದ ನಂತರ ಕರ್ನಾಟಕದಲ್ಲಿ ೬೦ ಘಟಕಗಳು ಸೇವೆ ಸಲ್ಲಿಸುತ್ತಿವೆ. ಪ್ರತಿ ವರ್ಷವೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿವೆ. ಇಂದು ರಾಷ್ಟçಮಟ್ಟದಲ್ಲಿ ಸಂಸ್ಥೆಯು ಬೆಳೆದುನಿಂತಿದೆ. ಇವುಗಳಿಗೆ ಎಸ್‌ಸಿಐ ಗೋಣಿಕೊಪ್ಪ ಪ್ರಮುಖ ಕಾರಣ ಎಂದು ರಾಷ್ಟಿçÃಯ ಉಪಾಧ್ಯಕ್ಷರಾದ ಡಾ. ಎಂ. ಶಿವಕುಮಾರ್ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಇವರು ಸಮಾಜಸೇವೆಯಲ್ಲಿ ಪ್ರತಿ ನಾಗರಿಕನು ತೊಡಗಿಸಿಕೊಳ್ಳಬೇಕು. ಪ್ರಸ್ತುತ ವರ್ಷದಲ್ಲಿ ನೂತನವಾಗಿ ೬೦ ಘಟಕಗಳನ್ನು ಸ್ಥಾಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಕೈ ಜೋಡಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ರಾಷ್ಟಿçÃಯ ತರಬೇತುದಾರ ಚೇತನ ದತ್ತಾತ್ರೇಯ ಸಭೆಯನ್ನು ಉದ್ದೇಶಿಸಿ ಹಲವು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಶರತ್ ಮ್ಯಾಥ್ಯು ಕಳೆದ ೧ ವರ್ಷದ ಅವಧಿಯಲ್ಲಿ ನಡೆಸಿದ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿಯಾಗಿ ಅಲ್ಲುಮಾಡ ಸುನಿಲ್, ಖಜಾಂಜಿಯಾಗಿ ಬಿ.ಎನ್. ಪ್ರಕಾಶ್ ಈ ಸಂದರ್ಭ ನೂತನ ಆಡಳಿತ ಮಂಡಳಿಗೆ ನೇಮಕಗೊಂಡರು. ಡಾ. ಆಶಿಕ್ ಚಂಗಪ್ಪ ಹಾಗೂ ಸೌಮ್ಯ ನಾಗೇಶ್ ನಡೆಸಿಕೊಟ್ಟ ಹಾಡುಗಾರಿಕೆ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಪದಾಧಿಕಾರಿಗಳಾದ ಸಣ್ಣುವಂಡ ರಜನ್ ತಿಮ್ಮಯ್ಯ, ಟಿ.ಜೆ. ಆಂಟೋನಿ, ಡಿ.ಬಿ. ರವಿ, ಮನ್ನಕ್ಕಮನೆ ಬಾಲಕೃಷ್ಣ, ಸೌಮ್ಯ ಬಾಲಕೃಷ್ಣ, ವಕೀಲ ಕಾಶಿಯಪ್ಪ, ಸಂಜೀವ್, ದಿಲ್ ಕುಮಾರ್, ಕೆ.ಜಿ. ಪ್ರವೀಣ್, ಸಚಿನ್ ಬೆಳ್ಳಿಯಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಶರತ್ ಮ್ಯಾಥ್ಯೂ ಸ್ವಾಗತಿಸಿ, ರೋಹಿಣಿ ತಿಮ್ಮಯ್ಯ ನಿರೂಪಿಸಿ, ಅಲ್ಲುಮಾಡ ಸುನಿಲ್ ವಂದಿಸಿದರು.

-ಹೆಚ್.ಕೆ. ಜಗದೀಶ್