ಸುAಟಿಕೊಪ್ಪ, ಮೇ ೨: ಕಣದಲ್ಲಿ ಒಣಗಿಸಲು ಹಾಕಿದ್ದ ಕರಿಮೆಣಸು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧುರಮ್ಮ ಬಡಾವಣೆ ಎಲ್. ಮಹೇಶ್ (೪೨) ಬಂಧಿತ ಆರೋಪಿಯಾಗಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.
ಸಮೀಪದ ನಾಕೂರು ಶಿರಂಗಾಲ ಗ್ರಾಮದ ಭಾಗ್ಯಲಕ್ಷಿö್ಮ್ಮ ಎಂಬವರಿಗೆ ಸೇರಿದ ಲಕ್ಷಿö್ಮ್ಮ ತೋಟದಲ್ಲಿ ಏ. ೭ ರಂದು ತಡರಾತ್ರಿ ೨.೩೦ ರ ಸಮಯದಲ್ಲಿ ಮಹೇಶ್ ಮತ್ತು ಮತ್ತೊಬ್ಬ ವ್ಯಕ್ತಿ ಕಣದಲ್ಲಿ ಒಣಗಿಸಿಟ್ಟಿದ್ದ ೧೨೦ ಕೆ.ಜಿ ತೂಕದ ಕರಿಮೆಣಸನ್ನು ಮಾರುತಿ ಕಾರಿನಲ್ಲಿ ಸಾಗಾಟಗೊಳಿಸಿ ಆರೋಪಿ ಮಹೇಶ್ ಅವರ ಮನೆಯಲ್ಲಿ ಇರಿಸಲಾಗಿತ್ತು.
ಈ ಬಗ್ಗೆ ತೋಟದ ಮಾಲೀಕರಾದ ಭಾಗ್ಯಲಕ್ಷಿö್ಮ ಅವರ ದೂರಿನನ್ವಯ ತನಿಖೆ ಆರಂಭಿಸಿದ ಸುಂಟಿಕೊಪ್ಪ ಪೊಲೀಸರು ಖಚಿತ ಮಾಹಿತಿ ಮೇರೆಗೆ ಇಲ್ಲಿನ ಟಿಸಿಎಲ್ ತೋಟಕ್ಕೆ ತೆರಳುವ ರಸ್ತೆಯಲ್ಲಿ ಮಹೇಶ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕುಶಾಲನಗರ ಡಿವೈಎಸ್ ಪಿ ಗಂಗಾಧರಪ್ಪ ಹಾಗೂ ವೃತ್ತ ನೀರೀಕ್ಷಕ ಮಾರ್ಗದರ್ಶನದ ಮೇರೆ ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಪಿಎಸ್ಐ ಶ್ರೀಧರ್, ಕ್ರೆöÊಂ ಪಿಎಸ್ಐ ನಾಗರಾಜು, ಸಿಬ್ಬಂದಿಗಳಾದ ಸತೀಶ್, ಪ್ರವೀಣ, ಜಗದೀಶ್, ಲೀಲಾವತಿ ಸೇರಿದಂತೆ ಇತರರು ಇದ್ದರು.