ಗೋಣಿಕೊಪ್ಪಲು, ಮೇ ೨ : ಜನಾಂಗದ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಪದ್ದತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ೨೧ ವರ್ಷಗಳ ಹಿಂದೆ ಆರಂಭಿಸಿದ ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವು ಇದೀಗ ೨೧ರ ಸಂಭ್ರಮದಲ್ಲಿದೆ.

ಈ ಬಾರಿ ೩ ದಿನಗಳ ಕಾಲ ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಕ್ರೀಡೋತ್ಸವ ಆರಂಭಗೊಳ್ಳಲಿದ್ದು, ತಾ.೩ ರಂದು (ಇಂದು) ೨೧ನೇ ವರ್ಷದ ಕ್ರೀಡೋತ್ಸವ ಆರಂಭಗೊಳ್ಳಲಿದ್ದು ಸಮಾಜದÀ ಅಧ್ಯಕ್ಷ ಪಡಿಞರಂಡ ಜಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಿಲಿದ್ದಾರೆ. ಕ್ರೀಡೋತ್ಸವವನ್ನು ವಿಧಾನ ಪರಿಷತ್ ಸದಸ್ಯರಾದ ಮಂಡೆಪAಡ ಸುಜಾಕುಶಾಲಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಭಾಗವಹಿಸಲಿದ್ದಾರೆ.

ತಾ. ೫ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಞರಂಡ.ಜಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉದ್ಯಮಿಗಳಾದ ಪಂದಿಕAಡ ದಿನೇಶ್(ಕುಶ), ಹಾಗೂ ವನ್ಯಿಜೀವಿ ಪಶುವೈದ್ಯಾಧಿಕಾರಿ ಡಾ.ಮೇಘನಾ ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಶಿಕ್ಷಣ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಇದೇ ಸಂದರ್ಭ ವಿತರಿಸಲಾಗುವುದು.

ಪೊನ್ನಂಪೇಟೆ, ಹಾತೂರು, ಬಿಟ್ಟಂಗಾಲ, ಒಂಟಿಯAಗಡಿ, ಹಾಲುಗುಂದ, ಪಾರಾಣೆ, ಮೈತಾಡಿ, ಕಡಿಯತ್ತೂರು, ಬೆಟ್ಟಗೇರಿ ಹಾಗೂ ಕುಶಾಲನಗರ ವಲಯಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಹಿರಿಯರ ವಿಭಾಗದಲ್ಲಿ ೨೨ ತಂಡಗಳು, ಕಿರಿಯರ ವಿಭಾಗದಲ್ಲಿ ೭ ತಂಡಗಳು ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸುತ್ತಿವೆ. ಉಳಿದಂತೆ ಮಹಿಳಾ ಹಾಗೂ ಪುರುಷ ವಿಭಾಗದಲ್ಲಿ ಹಗ್ಗಜಗ್ಗಾಟ, ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯಾಟವು ಜರುಗಲಿದೆ. ಕ್ರೀಡಾ ಸಮಿತಿಯ ಜವಾಬ್ದಾರಿಯನ್ನು ಸಮಿತಿಯ ಸದಸ್ಯರುಗಳಾದ ಪಡಿಞರಂಡ ಪ್ರಭುಕುಮಾರ್ ಹಾಗೂ ಪಂದಿಕAಡ ನಾಗೇಶ್ ಮುನ್ನಡೆಸುತ್ತಿದ್ದಾರೆ. ೩ ದಿನಗಳ ಕಾಲ ನಡೆಯುವ ವಿವಿಧ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನಗಳನ್ನು ಹೆಗ್ಗಡೆ ಸಮಾಜದ ವತಿಯಿಂದ ನೀಡುತ್ತಾ ಬರುತ್ತಿದೆ.