ಸಿದ್ದಾಪುರ, ಮೇ ೨: ಬಾಡಗ-ಬಾಣಂಗಾಲ ಮಠ ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದ ೪೩ನೇ ವಾರ್ಷಿಕ ಮಹೋತ್ಸವ ಹಾಗೂ ತೆರೆ ಮಹೋತ್ಸವ ಕಾರ್ಯಕ್ರಮ ತಾ. ೪ ಮತ್ತು ೫ ರಂದು ನಡೆಯಲಿದೆ.
ತಾ. ೪ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೮ಕ್ಕೆ ಧ್ವಜಾರೋಹಣ, ಅಪರಾಹ್ನ ೨ ಗಂಟೆಗೆ ಮುತ್ತಪ್ಪನ ಮಲೆ ಇಳಿಸುವುದು, ಸಂಜೆ ೫ಕ್ಕೆ ಮುತ್ತಪ್ಪನ ವೆಳ್ಳಾಟಂ, ೭ ಗಂಟೆಗೆ ಕುಟ್ಟಿಚಾತನ್ ವೆಳ್ಳಾಟಂ, ರಾತ್ರಿ ೮ಕ್ಕೆ ಕಂಡಕರ್ಣನ ವೆಳ್ಳಾಟಂ, ರಾತ್ರಿ ೯ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ತಾ. ೫ ರಂದು ಪ್ರಾತಃಕಾಲ ಪೊಟ್ಟನ ಅಗ್ನಿಪೂಜೆ, ೩ ಗಂಟೆಗೆ ಗುಳಿಗನ ತೆರೆ, ೪ ಗಂಟೆಗೆ ತಿರುವಪ್ಪನ ತೆರೆ, ೭ ಗಂಟೆಗೆ ವಸೂರಿ ಮಾಲ ತೆರೆ, ೮ಕ್ಕೆ ಪೊಟ್ಟನ ತೆರೆ ನಡೆಯಲಿದೆ ಎಂದು ಶ್ರೀ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.