ಸಿದ್ದಾಪುರ, ಮೇ ೨: ಸಿದ್ದಾಪುರದ ಹೇರೂರು-ಮೈಸೂರು ರಸ್ತೆಯಲ್ಲಿರುವ ವರಾಹಿ ರೂಪಿಣಿ ದೊಡ್ಡಮ್ಮ ತಾಯಿ ದೇವಾಲಯದ ೩೦ನೇ ವರ್ಷದ ವಾರ್ಷಿಕ ಉತ್ಸವ ವಿವಿಧ ಪೂಜಾ ಕೈಂಕರ್ಯ ಗಳೊಂದಿಗೆ ತಾ. ೪ ಮತ್ತು ೫ ರಂದು ನಡೆಯಲಿದೆ.

ತಾ. ೪ ರಂದು ಸಂಜೆ ೫.೩೦ಕ್ಕೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸುದರ್ಶನ ಹೋಮ, ಪ್ರಾಕಾರ ಬಲಿ, ತೀರ್ಥ ಪ್ರಸಾದ ವಿತರಣೆ. ತಾ. ೫ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ನವಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಮಂಗಳಾರತಿಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದ್ದಾರೆ.