ಪೊನ್ನಂಪೇಟೆ, ಮೇ ೨: ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್ ಕಾರ್ಯಕ್ರಮ ತಾ.೫ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಗುಂಡಿಕೆರೆ ಮಖಾಂನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಅದ್ದೂರಿಯಿಂದ ನಡೆಸಲಾಗುವ ಗುಂಡಿಕೆರೆ ಮಖಾಂ ಉರೂಸ್ ಈ ಸಾಲಿನಲ್ಲೂ ೩ ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಮಹಮ್ಮದ್ ಹಾಜಿ ತಿಳಿಸಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.೫ರಂದು ಭಾನುವಾರ ಸಂಜೆ ೪ ಗಂಟೆಗೆ ಧ್ವಜಾರೋಹಣದ ಮೂಲಕ ಗುಂಡಿಕೆರೆ ಮಖಾಂ ಉರೂಸ್ಗೆ ಚಾಲನೆ ದೊರೆಯಲಿದೆ. ಬಳಿಕ ಗುಂಡಿಕೆರೆ ಜಮಾಅತ್ನ ಖತೀಬರಾದ ಇಲ್ಯಾಸ್ ಅಂಜದಿ ಅವರ ನೇತೃತ್ವದಲ್ಲಿ ಮಖಾಂ ಅಲಂಕಾರ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಇದಾದ ಕೂಡಲೇ ಗುಂಡಿಕೆರೆ ಜಮಾಅತ್ನ ೧ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ ಮತ್ತು ೨ನೇ ತಕ್ಕರಾದ ಎಂ.ಪಿ. ಶಾದಲಿ ಅವರ ನೇತೃತ್ವದಲ್ಲಿ ಉರೂಸ್ನ ಭಂಡಾರ ಜಮಾಯಿಸುವ ಕಾರ್ಯಕ್ರಮ ಜರುಗಲಿದೆ ಎಂದು ಮಹಮದ್ ಹಾಜಿ ಹೇಳಿದ್ದಾರೆ.
ತಾ.೫ರಂದು ರಾತ್ರಿ ೮ ಗಂಟೆಗೆ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ನ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಗುಂಡಿಕೆರೆ ಜಮಾಅತ್ನ ಖತೀಬರಾದ ಇಲ್ಯಾಸ್ ಅಂಜದಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಪಂಡಿತರಾದ ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ನ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಂ.ವೈ. ಆಲಿ, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ ಗುಂಡಿಕೆರೆ ಜಮಾಅತ್ನ ೧ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ ಮತ್ತು ೨ನೇ ತಕ್ಕರಾದ ಎಂ.ಪಿ. ಶಾದಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಹಮದ್ ಹಾಜಿ ಗೋಷ್ಠಿಯಲ್ಲಿ ವಿವರಿಸಿದರು.
ತಾ.೬ರಂದು ಸೋಮವಾರ ಮಧ್ಯಾಹ್ನ ೧ ಗಂಟೆಗೆ ಗುಂಡಿಕೆರೆ ಮಖಾಂ ಉರೂಸ್ನ ಪ್ರಮುಖ ಆಕರ್ಷಣೆಯಾದ ಸಾರ್ವಜನಿಕ ಸಮ್ಮೇಳನ ನಡೆಯಲಿದೆ. ಆರಂಭದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆ ಜಮಾಅತ್ನ ಖತೀಬರಾದ ಇಲ್ಯಾಸ್ ಅಂಜದಿ ನೇತೃತ್ವ ನೀಡಲಿದ್ದಾರೆ. ವೀರಾಜಪೇಟೆಯ ಅನ್ವಾರಲ್ ಹುದಾ ಸಂಸ್ಥೆಯ ಪ್ರಾಂಶುಪಾಲರಾದ ಅಶ್ರಫ್ ಅಹ್ಸನಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನ ಭಾಷಣಗಾರರಾಗಿ ಹಿರಿಯ ಪಂಡಿತರಾದ ಇಸ್ಮಾಯಿಲ್ ಸಖಾಫಿ ರಿಪ್ಪನ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ಡಿ.ಎಚ್. ಸೂಫಿ ಹಾಜಿ, ಬೆಂಗಳೂರಿನ ಆಯೆಷಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಕುವೇಂಡ ವೈ. ಹಂಝತುಲ್ಲಾ, ಉದ್ಯಮಿಗಳಾದ ಎಂ. ಹೆಚ್. ಮೊಯ್ದು, ಎ.ಎಚ್. ಅಬೂಬಕ್ಕರ್, ಹೈಕೋರ್ಟ್ ವಕೀಲರಾದ ಕೆ.ಎಂ. ಸುಬೈರ್, ಬೇಟೋಳಿ ಗ್ರಾ.ಪಂ. ಸದಸ್ಯರಾದ ಎಂ. ಎಂ. ರಜಾಕ್, ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಂ. ವೈ. ಆಲಿ, ಗುಂಡಿಕೆರೆ ಜಮಾಅತ್ನ ೧ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ ಮತ್ತು ೨ನೇ ತಕ್ಕರಾದ ಎಂ.ಪಿ. ಶಾದಲಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಮಹಮ್ಮದ್ ಹಾಜಿ, ಅಂದು ಮಧ್ಯಾಹ್ನ ನಂತರ ೪:೩೦ ಗಂಟೆಗೆ ಮೌಲೂದ್ ಪಾರಾಯಣ ಮತ್ತು ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.
ತಾ. ೬ರಂದು ಸೋಮವಾರ ರಾತ್ರಿ ೮:೦೦ ಗಂಟೆಗೆ ನಡೆಯಲಿರುವ ಮತ್ತೊಂದು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಗುಂಡಿಕೆರೆ ಜಮಾಅತ್ನ ಸದರ ಉಸ್ತಾದ್ ಇಬ್ರಾಹಿಂ ಲತೀಫಿ ಉದ್ಘಾಟಿಸಲಿದ್ದಾರೆ. ಹಿರಿಯ ಧಾರ್ಮಿಕ ವಿದ್ವಾಂಸರಾದ ಹಂಸ ಮಿಸ್ಬಾಯಿ ಒಟ್ಟಪಡವು ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ನ ಆಡಳಿತ ಮಂಡಳಿ ಕೋಶಾಧಿಕಾರಿಗಳಾದ ಎಂ. ಎಂ. ಆಲಿ ಮುಸ್ಲಿಯರ್ ಹಾಜಿ, ಸದಸ್ಯರಾದ ಸಿ.ಯು. ಮಹಮ್ಮದ್ ಹಾಜಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದ ಮಹಮ್ಮದ್ ಹಾಜಿ, ತಾ. ೭ರಂದು ಮಂಗಳವಾರ ರಾತ್ರಿ ೮ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಗುಂಡಿಕೆರೆ ಮದರಸಾ ಅಧ್ಯಾಪಕರಾದ ರಾಫಿ ಜೈನಿ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ಕೇರಳದ ಪ್ರಸಿದ್ಧ ಧಾರ್ಮಿಕ ಸಾಹಿತ್ಯಗಾರರಾದ ಡಾ. ಕೋಯ ಕಾಪಾಡ್ ಮತ್ತು ಸಂಗಡಿಗರಿAದ ‘ಗ್ರಾಂಡ್ ಇಶಲ್ ನೈಟ್' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ನ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಂ.ವೈ. ಆಲಿ, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉರೂಸ್ನ ಎಲ್ಲಾ ದಿನವೂ ಮಗರಿಬ್ ನಮಾಜಿನ ನಂತರ ಸಾಂಪ್ರದಾಯಿಕ ದಫ್ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಹಮ್ಮದ್ ಹಾಜಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಎಂ. ವೈ. ಆಲಿ, ಎಂ.ಎA. ಆಲಿ ಮುಸ್ಲಿಯಾರ್ ಹಾಜಿ, ಎಂ.ಎ. ಇಸ್ಮಾಯಿಲ್ ಹಾಜಿ, ಸಿ.ಪಿ. ಆಲಿ, ಎಂ. ಎಂ. ಇಸ್ಮಾಯಿಲ್ ಮತ್ತು ಸಿ.ಯು. ಮಹಮ್ಮದ್ ಹಾಜಿ ಉಪಸ್ಥಿತರಿದ್ದರು.