ಸೋಮವಾರಪೇಟೆ,ಮೇ ೨: ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿರುವ ಶ್ರೀ ವನದುರ್ಗಿ ದೇವಾಲಯದಲ್ಲಿ ತಾ. ೩ರಂದು (ಇಂದು) ಶ್ರೀ ವನದುರ್ಗಿ, ಚೌಡಿ ಹಾಗೂ ಗುಳಿಗ ದೇವರುಗಳಿಗೆ ವಾರ್ಷಿಕೋತ್ಸವ ಪೂಜೆ ನಡೆಯಲಿದೆ. ತಾ.೩ರಂದು ಬೆಳಿಗ್ಗೆ ೬.೩೦ರಿಂದ ದೇವಾಲಯದಲ್ಲಿ ಪೂಜಾ ಕಾರ್ಯಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯ ಪ್ರಮುಖರಾದ ಶಿವಪ್ರಸಾದ್ ತಿಳಿಸಿದ್ದಾರೆ.