ಮಡಿಕೇರಿ, ಮೇ ೨: ಕೊಡಗು ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರ ಮಡಿಕೇರಿಯ ಸಮೀಪ ಮೇಕೇರಿ ಮಸೀದಿಯ ಮಖಾಂ ಉರೂಸ್ ಕಾರ್ಯಕ್ರಮ ತಾ.೩ ರಿಂದ ೭ ರವರೆಗೆ ನಡೆಯಲಿದೆ.

ತಾ.೩ರ ಶುಕ್ರವಾರ ಜನಾಬ್ ಸಯ್ಯದ್ ಜಂಬ್ರುದ್ದೀನ್ ನೇತೃತ್ವದಲ್ಲಿ ಜುಮಾ ನಮಾಜಿನ ನಂತರ ಧ್ವಜಾರೋಹಣ ನೆರವೇರಲಿದೆ. ಮಧ್ಯಾಹ್ನ ೨ ಗಂಟೆಗೆ ಮಖಾಂ ಝಿಯಾರತ್, ರಾತ್ರಿ ೮ ಗಂಟೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದೆ. ತಾ.೪ರ ಶನಿವಾರ ರಾತ್ರಿ ೮ ಗಂಟೆಗೆ ಧಾರ್ಮಿಕ ಉಪನ್ಯಾಸ, ತಾ.೫ ರಂದು ಮಗ್ರಿಬ್ ನಮಾಜಿನ ನಂತರ ಮಖಾಂ ಅಲಂಕಾರವಿರುತ್ತದೆ. ತಾ.೬ರಂದು ಜೊಹರ್ ನಮಾಜಿನ ನಂತರ ಮೌಲೂದ್ ಪಾರಾಯಣ, ೨.೩೦ ಕ್ಕೆ ಸಂದಲ್ ಮೆರವಣಿಗೆ ಹಾಗೂ ಸಂಜೆ ೪ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮೇಕೇರಿಯ ಕಿಜ಼ರ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್. ರಹೀಮ್ ತಿಳಿಸಿದ್ದಾರೆ.