ಗೋಣಿಕೊಪ್ಪ ವರದಿ, ಮೇ ೨: ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೧೮ ತಂಡಗಳು ಗೆಲುವಿನ ಸಾಧನೆ ಮಾಡಿದವು.
ಮಹಿಳಾ ವಿಭಾಗ: ನಾಟೋಳಂಡಕ್ಕೆ ಕಾಳಿಮಾಡ ವಿರುದ್ಧ ೪೪ ರನ್ಗಳ ಗೆಲುವು ದೊರೆಯಿತು. ನಾಟೋಳಂಡ ೩ ವಿಕೆಟ್ಗೆ ೭೩ ರನ್, ಕಾಳಿಮಾಡ ೩ ವಿಕೆಟ್ಗೆ ೨೯ ರನ್ ಗಳಿಸಿತು.
ಕೊಂಗAಡ ತಂಡಕ್ಕೆ ಬಾಳೆಯಡ ವಿರುದ್ಧ ೮ ವಿಕೆಟ್ ಜಯ ಲಭಿಸಿತು. ಬಾಳೆಯಡ ೧ ವಿಕೆಟ್ಗೆ ೪೩ ರನ್, ಕೊಂಗAಡ ೪ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.
ಅಳಮೇಂಗಡ ಒಡಿಯಂಡ ತಂಡವನ್ನು ೧೦ ವಿಕೆಟ್ಗಳಿಂದ ಮಣಿಸಿತು. ಒಡಿಯಂಡ ೧ ವಿಕೆಟ್ ಕಳೆದುಕೊಂಡು ನೀಡಿದ ೨೮ ರನ್ ಗುರಿಯನ್ನು ಅಳಮೇಂಗಡ ವಿಕೆಟ್ ನಷ್ಟವಿಲ್ಲದೆ ಪೂರೈಸಿತು.
ಕಂಬೀರAಡ ಚಿಮ್ಮಣಮಡ ಮತ್ತು ತೀತಮಾಡ ತಂಡವನ್ನು ಮಣಿಸಿತು. ಚಿಮ್ಮಣಮಾಡವನ್ನು ೧೭ ರನ್ಗಳಿಂದ ಪರಾಭವಗೊಳಿಸಿತು. ಕಂಬೀರAಡ ೧ ವಿಕೆಟ್ ನಷ್ಟಕ್ಕೆ ೩೪ ರನ್, ಚಿಮ್ಮಣಮಾಡ ೨ ವಿಕೆಟ್ ಕಳೆದುಕೊಂಡು ೧೭ ರನ್ ಗಳಿಸಿ ಸೋಲಿಗೆ ಶರಣಾಯಿತು. ತೀತಮಾಡ ವಿರುದ್ದ ೩ ವಿಕೆಟ್ ನಷ್ಟಕ್ಕೆ ೧೩೨ ರನ್ ಗಳಿಸಿ, ೩೯ ರನ್ಗಳ ಗೆಲುವು ದಾಖಲಿಸಿತು. ತೀತಮಾಡವು ೭ ವಿಕೆಟ್ಗೆ ೯೩ ರನ್ ಗಳಿಸಿತು.
ಮಾಳೇಟಿರ (ಕೆದಮುಳ್ಳೂರು) ತಂಡವು ಮೇವಡವನ್ನು ೯ ರನ್ಗಳಿಂದ ಮಣಿಸಿತು. ಮಾಳೇಟಿರ ೭ ವಿಕೆಟ್ ನಷ್ಟಕ್ಕೆ ೪೪ ರನ್, ಮೇವಡ ೨ ವಿಕೆಟ್ ಕಳೆದುಕೊಂಡು ೩೫ ಕ್ಕೆ ಆಟ ಮುಗಿಸಿತು.
ಪುರುಷರ ವಿಭಾಗ: ಕುಟ್ಟಂಡ (ಅಮ್ಮತ್ತಿ) ಮತ್ರಂಡವನ್ನು ೯ ವಿಕೆಟ್ಗಳಿಂದ ಮಣಿಸಿತು. ಮತ್ರಂಡ ೫ ವಿಕೆಟ್ಗೆ ೭೭ ರನ್, ಕುಟ್ಟಂಡ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಒಡಿಯಂಡ ಬಲ್ಲಿಮಾಡ ವಿರುದ್ಧ ೪೮ ರನ್ಗಳ ಜಯ ಪಡೆದುಕೊಂಡಿತು. ಒಡಿಯಂಡ ೩ ವಿಕೆಟ್ಗೆ ೯೮ ರನ್, ಬಲ್ಲಿಮಾಡ ೮ ವಿಕೆಟ್ ಕಳೆದುಕೊಂಡು ೫೦ ಕ್ಕೆ ಕುಸಿಯಿತು.
ಬಾಳೆಯಡ ಪೊನ್ನಿಮಾಡವನ್ನು ೪೪ ರನ್ಗಳಿಂದ ಸೋಲಿಸಿತು. ಬಾಳೆಯಡ ೪ ವಿಕೆಟ್ಗೆ ೯೩ ರನ್, ಪೊನ್ನಿಮಾಡ ೬ ವಿಕೆಟ್ ಕಳೆದುಕೊಂಡು ೫೦ ರನ್ ದಾಖಲಿಸಿತು. ಗಾಂಡAಗಡ ಚೇಂದಿರವನ್ನು ೯ ವಿಕೆಟ್ಗಳಿಂದ ಮಣಿಸಿತು. ಚೇಂದೀರ ೫ ವಿಕೆಟ್ಗೆ ೮೮ ರನ್, ಗಾಂಡAಗಡ ೧ ವಿಕೆಟ್ ಕಳೆದುಕೊಂಡು ೫.೨ ಒವರ್ಗಳಲ್ಲಿ ಗುರಿ ಸಾಧನೆ ಮಾಡಿತು.
ಚೆಟ್ಟಿಯಾರಂಡಕ್ಕೆ ಬಾಚಳೀರ ವಿರುದ್ಧ ೨೩ ರನ್ಗಳ ಗೆಲುವು ದಕ್ಕಿತು. ಚೆಟ್ಟಿಯಾರಂಡ ೩ ವಿಕೆಟ್ ನಷ್ಟಕ್ಕೆ ೧೦೮ ರನ್, ಬಾಚಳೀರ ೪ ವಿಕೆಟ್ ನಷ್ಟಕ್ಕೆ ೮೫ ರನ್ ದಾಖಲಿಸಿತು. ಮೊಣ್ಣಂಡಕ್ಕೆ ಐಮುಡಿಯಂಡ ವಿರುದ್ಧ ೧೦ ವಿಕೆಟ್ಗಳ ಜಯ ದೊರೆಯಿತು. ಐಮುಡಿಯಂಡ ೬ ವಿಕೆಟ್ಗೆ ೭೨ ರನ್, ಮೊಣ್ಣಂಡ ೩.೨ ಒವರ್ಗಳಲ್ಲಿ ಗುರಿ ಸಾಧಿಸಿತು.
ಪರವಂಡಕ್ಕೆ ಬಲ್ಯಂಡ ವಿರುದ್ದ ೧೧೩ ರನ್ ಗೆಲುವು ದೊರೆಯಿತು. ಪರವಂಡ ೧೪೪ ರನ್ ಕಲೆ ಹಾಕಿತು. ಪರವಂಡ ೯ ವಿಕೆಟ್ ನಷ್ಟಕ್ಕೆ ೩೧ ರನ್ ಗಳಿಸಿ ಸೋಲಿಗೆ ಶರಣಾಯಿತು. ಪರವಂಡ ಪ್ರಿನ್ಸ್, ರಂಜಿತ್ ತಲಾ ೨ ವಿಕೆಟ್ ಪಡೆದರು. ಮಂಡುವAಡಕ್ಕೆ ಮಾಪಣಮಾಡ ವಿರುದ್ಧ ೧೦ ವಿಕೆಟ್ ಜಯ ಲಭಿಸಿತು. ಮಾಪಣಮಾಡ ೪ ವಿಕೆಟ್ಗೆ ೩೮ ರನ್, ಮಂಡುವAಡ ೨.೨ ಒವರ್ಗಳಲ್ಲಿ ಗುರಿ ಸಾಧಿಸಿತು. ಮಂಡುವAಡ ದರ್ಶನ್ ೩ ವಿಕೆಟ್ ಪಡೆದರು.ಮೊಣ್ಣಂಡಕ್ಕೆ ಚೆಟ್ಟಿಯಾರಂಡ ವಿರುದ್ಧ ೬ ವಿಕೆಟ್ ಜಯ ಸಿಕ್ಕಿತು. ಚೆಟ್ಟಿಯಾರಂಡ ನೀಡಿದ ೪೭ ರನ್ಗಳ ಗುರಿಯನ್ನು ಮೊಣ್ಣಂಡ ೪ ವಿಕೆಟ್ ಕಳೆದುಕೊಂಡು ಪೂರೈಸಿತು. ಚೆಟ್ಟಿಯಾರಂಡ ದಿಲನ್ ೨ ವಿಕೆಟ್ ಪಡೆದರು.
ಮಲಚೀರಕ್ಕೆ ನೂರೇರ ವಿರುದ್ಧ ೧೦ ರನ್ಗಳ ಜಯ ಲಭಿಸಿತು. ಮಲಚೀರ ೬ ವಿಕೆಟ್ಗೆ ೭೮ ರನ್, ನೂರೇರ ೬ ಕ್ಕೆ ೬೮ ರನ್ ದಾಖಲಿಸಿತು.
ಮುಕ್ಕಾಟೀರ (ಹರಿಹರ-ಬೆಳ್ಳೂರು) ಐಲಪಂಡವನ್ನು ೨೯ ರನ್ಗಳಿಂದ ಸೋಲಿಸಿತು. ಮುಕ್ಕಾಟೀರ ೬ ವಿಕೆಟ್ಗೆ ೯೮ ರನ್, ಐಲಪಂಡ ೩ ವಿಕೆಟ್ಗೆ ೬೯ ರನ್ ಗಳಿಸಿತು. ತಾಚಮಂಡ ಕೊಲ್ಲೀರವನ್ನು ೭೦ ರನ್ಗಳಿಂದ ಮಣಿಸಿತು. ತಾಚಮಂಡ ೧ ವಿಕೆಟ್ ಕಳೆದುಕೊಂಡು ೧೦೮ ರನ್, ಕೊಲ್ಲೀರ ೪ ವಿಕೆಟ್ಗೆ ೩೮ ರನ್ ದಾಖಲಿಸಿತು.
ಉಡುವೇರ ತಂಡಕ್ಕೆ ಅಣ್ಣಾರ್ಕಂಡ ವಿರುದ್ಧ ೨೮ ರನ್ಗಳ ಜಯ ಲಭಿಸಿತು. ಉಡುವೇರ ೧ ವಿಕೆಟ್ಗೆ ೧೧೧ ರನ್, ಅಣ್ಣಾರ್ಕಂಡ ೭ ವಿಕೆಟ್ ಕಳೆದುಕೊಂಡು ೮೩ ಕ್ಕೆ ಕುಸಿಯಿತು. ಬೈರಾಜಂಡ ಗೈರಿನಿಂದ ಪೋರೆರ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತು.
ಮತ್ರಂಡ ದೀಪು ಭೀಮಯ್ಯ, ಬಲ್ಲಿಮಾಡ ಚೇತನ್, ಪೊನ್ನಿಮಾಡ ವಿಕ್ಕಿ, ಚೇಂದಿರ ತಿಮ್ಮಯ್ಯ, ಬಾಚಳೀರ ಕೃತನ್, ಐಮುಡಿಯಂಡ ಕಿಶೋರ್, ಕಾಳಿಮಾಡ ಉಷಾ, ಬಲ್ಯಂಡ ವರ್ಷ, ಮಾಪಣಮಾಡ ಕವನ್, ಚೆಟ್ಟಿಯಾರಂಡ ಬಿನ್ನು ಕಾವೇರಪ್ಪ, ಬಾಳೆಯಡ ಶಿಶಿಲ್, ಒಡಿಯಂಡ ರೋಹಿಣಿ, ಚಿಮ್ಮಣಮಡ ಮಂಜುಳ, ತೀತಮಾಡ ಡೆಲ್ವಿನ್, ಮಾಳೇಟಿರ ಕಲ್ಪಿತಾ, ನೂರೇರ ವಿನು, ಐಲಪಂಡ ಧನಿಕ್ ನಾಚಪ್ಪ, ಕೊಲ್ಲೀರ ಅಪ್ಪಣ್ಣ, ಅಣ್ಣಾರ್ಕಂಡ ಪ್ರೇಮ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.