ಕರಿಕೆ, ಮೇ. ೩: ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಜಾತಿಯ ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರು ವ್ಯಕ್ತಿಗಳು ಸೇರಿದಂತೆ ಖಾಸಗಿ ಸಂಸ್ಥೆಯ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದೆ.

ವೀರಾಜಪೇಟೆ ಉಪವಿಭಾಗ ಮುಂಡ್ರೋಟ್, ಮುರುಕುಮೊಟ್ಟೆ ಉಪವಲಯ ವ್ಯಾಪ್ತಿಯ ತಲಕಾವೇರಿ ಸನಿಹದ ಹದಿನಾಲ್ಕು ನಾಡು ಮೀಸಲು ಅರಣ್ಯ ಪ್ರದೇಶದೊಳಗಿನ ಮಂದಾರ ಮಲೆ ಎಂಬಲ್ಲಿ ಘಟನೆ ನಡೆದಿದ್ದು, ವಿವಿಧ ರೀತಿಯ ಕಾಡುಜಾತಿ ಮರಗಳನ್ನು ಕಡಿದು ಪಕ್ಕದ ತೋಟ ವೊಂದರಲ್ಲಿ ಸಂಗ್ರಹಿಸಿದ್ದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕಡಿದ ಮರ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳ ರಾಜ್ಯದ ಕಾಸರಗೋಡುವಿನ ಸನ್ನಿ ಮಾಲೆಬೇರಿ, ಕಣ್ಣೂರಿನ ಅಬ್ರಾಹಂ ಸೇರಿದಂತೆ ಕಡಿದ ಮರಗಳನ್ನು ಸಂಗ್ರಹಿಸಿದ್ದ ಮೈಸೂರ್ ಫಾರ್ಮ್ಸ್ ಹಾಗೂ ಎಂಟರ್‌ಪ್ರೆöÊಸಸ್ (ಆರ್.ಟಿ.ಸಿ. ಯಲ್ಲಿರುವ ಸಂಸ್ಥೆ ಹೆಸರು) ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ತಲಕಾವೇರಿ ಯಿಂದ ೮ ಕಿ.ಮೀ ದೂರದ ಮಂದಾರ ಮಲೆ ಅರಣ್ಯ ಪ್ರದೇಶ ಅರಣ್ಯ ಇಲಾಖೆ ಸಿಬ್ಬಂದಿ ವಸತಿಗೃಹಕ್ಕೆ ಹತ್ತಿರವಿದ್ದು, ಸಾಗಾಟ ಮಾಡುವ ನಿಟ್ಟಿನಲ್ಲಿ ಕಾರ್ಯ ತಂತ್ರವನ್ನು ಆರೋಪಿಗಳನ್ನು ರೂಪಿಸು ತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮರಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.