ಗೋಣಿಕೊಪ್ಪಲು, ಏ. ೩೦: ಯರವ ಕುಟುಂಬಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯಾಟಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ಈಗಾಗಲೇ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನವು ಕ್ರೀಡಾಕೂಟಕ್ಕೆ ಸಜ್ಜಾಗಿದ್ದು, ಜಿಲ್ಲೆಯ ೬೫ ಯರವ ಕುಟುಂಬಗಳು ೫ ದಿನಗಳ ಕಾಲ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ತಾ.೧ರಿಂದ (ಇಂದಿನಿAದ) ೫ರವರೆಗೆ ಪಂದ್ಯಾವಳಿ ನಡೆಯಲಿದೆ. ಉದ್ಘಾಟನಾ ಪಂದ್ಯವು ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ. ತಾ.೫ರ ಸಂಜೆ ೩ ಗಂಟೆಗೆ ಫೈನಲ್ ಪಂದ್ಯ ಜರುಗಲಿದೆ.

೩೫ಕ್ಕೂ ಅಧಿಕ ಮನೆತನ ಇರುವ ಯರವ ಕುಟುಂಬದಲ್ಲಿ ಈ ಬಾರಿ ೧೨ನೇ ವರ್ಷದ ಆತಿಥ್ಯವನ್ನು ತಿರುಮುಂಡೆಲಾತ್ತಿಲಾ ಕುಟುಂಬವು ವಹಿಸಿ ಕೊಂಡಿವೆ. ಸರ್ಕಾರದ ಅನುದಾನವಿಲ್ಲದಿದ್ದರೂ, ಜನಪ್ರತಿನಿಧಿಗಳ, ದಾನಿಗಳ ಸಹಕಾರದಿಂದ ಯರವ ಸಮಾಜದ ಉತ್ಸಾಹಿ ಯುವಕರು ಸಮುದಾಯದ ಕ್ರೀಡೆಯ ಯಶಸ್ಸಿಗೆ ದುಡಿಯುತ್ತಾ ಬಂದಿದ್ದಾರೆ.

ಸಮಾಜದ ೨೦ಕ್ಕೂ ಅಧಿಕ ಯುವಕರು ತಮ್ಮ ಸಮಾಜದ ಕ್ರೀಡೋತ್ಸವಕ್ಕೆ ಶ್ರಮಿಸುತ್ತಿದ್ದಾರೆ. ಇದೀಗ ೧೨ನೇ ವರ್ಷದ ಸಂಭ್ರಮದಲ್ಲಿ ನಾವಿದ್ದೇವೆ. ಕೊಡಗಿನ ವಿವಿಧ ಭಾಗದಿಂದ ಸಮಾಜ ಭಾಂದವರು ಸಾವಿರಾರು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ. ಮುಂದಿನ ಸಾಲಿನಿಂದ ಸರ್ಕಾರ ಕ್ರೀಡೆಯ ಯಶಸ್ಸಿಗೆ ವಾರ್ಷಿಕ ಅನುದಾನವನ್ನು ಬಿಡುಗಡೆಗೊಳಿಸಬೇಕು. ಮಹಿಳೆಯರಿಗಾಗಿ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡೆಗಳು ಆಯೋಜಿಸಲಾಗಿದೆ. ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಗುವುದು.

-ಪಿ.ಕೆ.ಸಿದ್ದಪ್ಪ, ಅಧ್ಯಕ್ಷ ಯರವ ಸಮಾಜ (ಮೊದಲ ಪುಟದಿಂದ) ಕಳೆದ ೧೧ ವರ್ಷಗಳ ಹಿಂದೆ ಚೆನ್ನಂಗಿಯ ದಿ.ಶಾಂತಕುಮಾರ್ ಸ್ಥಾಪಕ ಅಧ್ಯಕ್ಷತೆಯಲ್ಲಿ ಪ್ರಾರಂಭಗೊAಡ ಯರವ ಸಮಾಜವು ಯರವ ಸಮುದಾಯದ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜ ಭಾಂದವರು ಮಾಡಿರುವ ಸಾಧನೆಯನ್ನು ಗುರುತಿಸಿ ಪಂದ್ಯಾಟದ ಸಮಾರೋಪ ಸಮಾರಂಭದ ವೇದಿಕೆ ಯಲ್ಲಿ ಅತಿಥಿಗಳ ಸಮ್ಮುಖದಲ್ಲಿ ಗೌರವಿಸುತ್ತಾ ಬಂದಿದೆ. ೫ ದಿನಗಳ ಕಾಲ ನಡೆಯುವ ಕ್ರೀಡೋತ್ಸವವು ಯರವ ಸಮಾಜದ ಅಧ್ಯಕ್ಷ ಪಿ.ಕೆ. ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸೇರಿದಂತೆ ಇನ್ನಿತರ ಕ್ರೀಡೆಯನ್ನು ಆಯೋಜಿಸಲಾಗಿದೆ. -ಹೆಚ್.ಕೆ. ಜಗದೀಶ್