ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ವರದಿ ಕೇಳಿದ ಎನ್ಸಿಡಬ್ಲ್ಯು
ನವದೆಹಲಿ, ಏ. ೩೦: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ರಾಷ್ಟಿçÃಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಕರ್ನಾಟಕ ಪೊಲೀಸರಿಗೆ ಸೂಚಿಸಿದೆ. ಈ ಸಂಬAಧ ಕರ್ನಾಟಕ ಡಿಜಿಪಿಗೆ ಪತ್ರ ಬರೆದಿರುವ ಎನ್ಸಿಡಬ್ಲ್ಯೂ, ಪ್ರಜ್ವಲ್ ರೇವಣ್ಣ ಅವರು ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೀಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ದೇಶದಿಂದ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ತ್ವರಿತ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ರಾಷ್ಟಿçÃಯ ಮಹಿಳಾ ಆಯೋಗ ಕರ್ನಾಟಕ ಪೊಲೀಸರಿಗೆ ಒತ್ತಾಯಿಸಿದೆ. ಆಯೋಗವು ಈ ಘಟನೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಘಟನೆಯಿಂದ ತೀವ್ರ ವಿಚಲಿತವಾಗಿರುವುದಾಗಿ ಎನ್ಸಿಡಬ್ಲ್ಯು ಪತ್ರದಲ್ಲಿ ಹೇಳಿದೆ. ಇಂತಹ ಘಟನೆಗಳು ಮಹಿಳೆಯರ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಅವರ ವಿರುದ್ಧ ಅಗೌರವ ಮತ್ತು ಹಿಂಸೆಯ ಸಂಸ್ಕೃತಿಯನ್ನು ಬೆಳೆಸುತ್ತವೆ. ದೇಶದಿಂದ ಪರಾರಿಯಾಗಿರುವ ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಸಂಬAಧಪಟ್ಟ ಪೊಲೀಸ್ ಪ್ರಾಧಿಕಾರಿಗಳು ತ್ವರಿತ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಸಂಬAಧಪಟ್ಟ ಪೊಲೀಸ್ ಅಧಿಕಾರಿಗಳು ಕೈಗೊಂಡ ಕ್ರಮಗಳ ವಿವರವಾದ ವರದಿಯನ್ನು ಮೂರು ದಿನಗಳಲ್ಲಿ ತನಗೆ ಸಲ್ಲಿಸಬೇಕು ಎಂದು ಆಯೋಗ ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.
ಬೆಂಗಳೂರಿನಲ್ಲಿ ಬಾಡಿಗೆಯಿಂದ ಆದಾಯ ಪ್ರಮಾಣ ಹೆಚ್ಚಳ
ನವದೆಹಲಿ, ಏ. ೩೦: ದೇಶದ ಪ್ರಮುಖ ನಗರಗಳ ಪೈಕಿ ಬಾಡಿಗೆ ಪ್ರಮಾಣ ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈ ೨ನೇ ಸ್ಥಾನಕ್ಕೆ ಕುಸಿದಿದೆ. ಸಾವಿರಾರು ಐಟಿ ಸಂಸ್ಥೆಗಳಿಗೆ ತವರೂರಾಗಿರುವ ಬೆಂಗಳೂರಿನಲ್ಲಿ ಮೊದಲ ತ್ರೆöÊಮಾಸಿಕ (ಜನವರಿ-ಮಾರ್ಚ್)ದಲ್ಲಿ ಗರಿಷ್ಠ ಅಂದರೆ ಶೇ. ೪.೪೫ ರಷ್ಟು ಹೆಚ್ಚಿನ ಬಾಡಿಗೆ ಆದಾಯವನ್ನು ಹೊಂದಿದೆ. ಈ ಪಟ್ಟಿಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ ೨ನೇ ಸ್ಥಾನಕ್ಕೆ ಕುಸಿದಿದ್ದು, ಮುಂಬೈನ ಬಾಡಿಗೆ ಆದಾಯ ಶೇ. ೪.೧೫ ರಷ್ಟು ಏರಿಕೆಯಾಗಿದ್ದು, ಗುರುಗ್ರಾಮದಲ್ಲಿ ಶೇ. ೪.೧ ರಷ್ಟು ಬಾಡಿಗೆ ಆದಾಯ ಏರಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ತನ್ನ ದತ್ತಾಂಶಗಳಲ್ಲಿ ಉಲ್ಲೇಖಿಸಿದೆ. ಪ್ರಮುಖವಾಗಿ ಕೋವಿಡ್ ನಂತರದ ದಿನಗಳಲ್ಲಿ ಐಟಿ ಸಂಸ್ಥೆಗಳು ವರ್ಕ್ ಫ್ರಂ ಹೋಮ್ ಕೈ ಬಿಟ್ಟು ಕಚೇರಿಗೆ ಆಗಮಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಬಾಡಿಗೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಕೋವಿಡ್ ಪೂರ್ವ ಅಂದರೆ ೨೦೧೯ ರಲ್ಲಿ ನಗರದ ದೇಶದಲ್ಲಿ ಒಟ್ಟಾರೆ ಬಾಡಿಗೆ ಆದಾಯ ಶೇ. ೩.೬ ರಷ್ಟಿತ್ತು. ಮುಂಬೈ ಮತ್ತು ಗುರುಗ್ರಾಮದಲ್ಲಿ ಈ ಪ್ರಮಾಣ ಶೇ. ೩.೫ ರಷ್ಟಿತ್ತು. ಬಳಿಕ ಈ ಪ್ರಮಾಣ ಶೇ. ೨೪ ರಷ್ಟು ಬೆಳವಣಿಗೆಯಾಗಿದೆ. ಅಂತೆಯೇ ಕೋವಿಡ್ ಸಾಂಕ್ರಾಮಿಕದಿAದಾಗಿ ದೇಶದಲ್ಲಿ ಬಾಡಿಗೆ ಆದಾಯ ದೀರ್ಘಕಾಲಿಕವಾಗಿ ಹಿನ್ನಡೆ ಅನುಭವಿಸಿತ್ತು. ಆದರೆ ಕೋವಿಡ್ ನಂತರ ಬಾಡಿಗೆ ಆದಾಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಸರಾಸರಿ ಶೇ. ೩ ರಷ್ಟಿದ್ದ ಬಾಡಿಗೆ ಆದಾಯ ಈಗ ಸರಾಸರಿ ಶೇ. ೪ಕ್ಕೆ ಏರಿಕೆಯಾಗಿದೆ. ಕಚೇರಿಗಳು, ಐಟಿ ಸಂಸ್ಥೆಗಳು, ಕಾರ್ಖಾನೆಗಳು ಪುನರಾರಂಭಗೊAಡ ನಂತರ ದೇಶದಲ್ಲಿ ಬಾಡಿಗೆ ಬೇಡಿಕೆಯು ಗಗನಕ್ಕೇರುತ್ತಿದೆ. ಬೆಂಗಳೂರು, ಮುಂಬೈ, ಗುರುಗ್ರಾಮ, ಪುಣೆ, ನೋಯ್ಡಾ, ಹೈದರಾಬಾದ್ ನಂತಹ ಐಟಿ ಪ್ರಾಬಲ್ಯ ಹೊಂದಿರುವ ನಗರಗಳಲ್ಲಿ ಬಾಡಿಗೆ ಪ್ರಮುಖ ಏರಿಕೆಯನ್ನು ಕಂಡಿವೆ ಎಂದು ಅನರಾಕ್ ಗ್ರೂಪ್ ಉಪಾಧ್ಯಕ್ಷ ಸಂತೋಷ್ ಕುಮಾರ್ ಹೇಳಿದ್ದಾರೆ.
ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು
ವಿಜಯಪುರ, ಏ. ೩೦: ಈಜು ಬಾರದಿದ್ದರೂ ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತ ಬಾಲಕರನ್ನು ಸೋಮಶೇಖರ್ ಆಲಮೇಲ (೧೬) ಹಾಗೂ ಮಲಿಕ್ ನದಾಫ್ (೧೬) ಎಂದು ಗುರುತಿಸಲಾಗಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈಜು ಬಾರದಿದ್ದರೂ ಈ ಬಾಲಕರು ಬಾವಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಈ ಸಂಬAಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಲಾಂಗ್ ಹಿಡಿದು ದಾಳಿ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಲAಡನ್, ಏ. ೩೦: ಪೂರ್ವ ಲಂಡನ್ನ ಹೈನಾಲ್ಟ್ನಲ್ಲಿ ಲಾಂಗ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ವ್ಯಕ್ತಿಯೊಬ್ಬ ಜನನಿಬಿಡ ರಸ್ತೆಗಳಲ್ಲಿ ತನ್ನ ಎದುರಿಗೆ ಬಂದ ಎಲ್ಲರ ಮೇಲೂ ಮನಬಂದAತೆ ಕತ್ತಿ ಬೀಸುತ್ತಿದ್ದ. ಸಿಕ್ಕ ಸಿಕ್ಕವರ ಮೇಲೆ ಏಕಾಏಕಿ ಕತ್ತಿ ಬೀಸಿದ ಪರಿಣಾಮ ಇಬ್ಬರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೈಯಲ್ಲಿ ಕತ್ತಿ (ಲಾಂಗ್) ಹಿಡಿದಿದ್ದ ವ್ಯಕ್ತಿ ಇತರ ಸಾರ್ವಜನಿಕರ ಮೇಲೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಾವು ಗಾಯಗೊಂಡವರ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ. ಲಂಡನ್ ಆಂಬ್ಯುಲೆನ್ಸ್ ಸೇವೆ, ಐದು ಜನರಿಗೆ ಚಿಕಿತ್ಸೆ ನೀಡಿದೆ ಮತ್ತು ಅವರೆಲ್ಲರನ್ನು ಆಸ್ಪತ್ರೆಗೆ ಕರೆದೊಯ್ದಿದೆ ಎಂದು ಪೊಲೀಸರು ಹೇಳಿದ್ದಾರೆ. ಲಂಡನ್ನ ಸ್ಥಳೀಯ ಕಾಲಮಾನ ಬೆಳಿಗ್ಗೆ ೭ ಗಂಟೆಗೆ ಈ ಘಟನೆ ನಡೆದಿದೆ. ಬೆಳಗಿನ ಹೊತ್ತು ಕಚೇರಿಗೆ ತೆರಳುವ ಒತ್ತಡದಲ್ಲಿದ್ದ ಜನರಿಗೆ ಈ ಘಟನೆ ಆಘಾತ ತಂದಿತ್ತು. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಸಾರ್ವಜನಿಕರು ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಕತ್ತಿ ಹಿಡಿದು ಎಲ್ಲರ ಮೇಲೂ ಮನಬಂದAತೆ ಬೀಸುತ್ತಿದ್ದಾನೆ ಎಂದು ಹೇಳಿದ್ದಾರೆ. ಕೂಡಲೇ ಪೊಲೀಸರು ಕಾರ್ಯ ಪ್ರವೃತ್ತರಾಗಿ, ವ್ಯಕ್ತಿಯನ್ನು ಬಂಧಿಸಿದ್ದಾರೆ.