ಮಡಿಕೇರಿ, ಏ. ೨೯: ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಮಡಿಕೇರಿಯ ರಾಜಾಸೀಟ್ ವ್ಯಾಪ್ತಿಯಲ್ಲಿ ನಡೆದ ಗ್ರೇಟರ್ ರಾಜಾಸೀಟ್ ಯೋಜನೆಯಲ್ಲಿ ಕಳಪೆ ಕಾಮಗಾರಿ ಮತ್ತು ಬಹುಕೋಟಿ ಅಕ್ರಮವೆಸಗಲಾಗಿದೆ ಎಂದು ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಕರ್ನಾಟಕ ಲೋಕಾಯುಕ್ತ ಮುಂದಾಗಿದೆ.

ದಿನಾAಕ ೨೦-೩-೨೦೨೩ ರಂದು ಕರ್ನಾಟಕ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ಬಹುಕೋಟಿ ವೆಚ್ಚದ ಕಾಮಗಾರಿಗೆ ಸಂಬAಧಿಸಿದAತೆ ಅಕ್ರಮವೆಸಗಿರುವ ವಿವರಗಳನ್ನು ಛಾಯಾಚಿತ್ರಗಳು, ಧೃಡೀಕರಿಸಿದ ದಾಖಲೆಗಳೊಂದಿಗೆ ತೆನ್ನಿರ ಮೈನಾ ಸಲ್ಲಿಸಿದ್ದರು. ಸದರಿ ಕಾಮಗಾರಿಗೆ ಸಂಬAಧಿಸಿದAತೆ ನಕಲಿ ಅಳತೆ ಪುಸ್ತಕ ಸೃಷ್ಟಿಸಲಾಗಿದೆ ಎಂದೂ ದಾಖಲೆಗಳನ್ನು ಒದಗಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಅಳತೆ ಪುಸ್ತಕ (ಎಂ.ಬಿ. ಪುಸ್ತಕ) ಕಳವಾಗಿದೆ ಎಂದು ದೂರು ಸಲ್ಲಿಸಿದ್ದರು. ನಂತರದಲ್ಲಿ ಅಳತೆ ಪುಸ್ತಕದ ಹಾಳೆಗಳನ್ನು ಹರಿದು ಹಾಕಲಾಗಿದೆ ಎಂದು ದೂರು ಸಲ್ಲಿಸಿದ್ದರು.

ಆದರೆ ವಿವಾದಿತ ಎಂ.ಬಿ. ಪುಸ್ತಕದ ಧೃಡೀಕೃತ ಪ್ರತಿಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತೆನ್ನಿರ ಮೈನಾ ರವರು ಪಡೆದಿದ್ದು ಅದನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದರು. ಅಂದಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವರಾಂ ಮತ್ತು ಕಿರಿಯ ಇಂಜಿನಿಯರ್ ಕೆ.ಎಲ್. ದೇವರಾಜ್ (ಡಿ.ಸಿ. ಕಛೇರಿ ತಡೆಗೋಡೆ ನಿರ್ವಹಣೆ ಹೊತ್ತಿದ್ದ ಅಧಿಕಾರಿ) ಹಾಗೂ ಗುತ್ತಿಗೆದಾರರು ಸೇರಿ ಅಕ್ರಮವೆಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸದರಿ ದೂರಿನ ಬಗ್ಗೆ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಲಯ ಮುಂದಿನ ತನಿಖೆಗೆ ಲೋಕಾಯುಕ್ತ ತಾಂತ್ರಿಕ ಸಮಿತಿಗೆ ಸೂಚಿಸಿದ್ದು ಈಗ ತಾಂತ್ರಿಕ ಸಮಿತಿ ಸದರಿ ಕಾಮಗಾರಿಯ ಕಾಮಗಾರಿ ಒಪ್ಪಂದದ ಪ್ರತಿ, ಅಂದಾಜು ಪಟ್ಟಿ ಪ್ರತಿ, ಅಳತೆಗಳನ್ನು ದಾಖಲಿಸಿದ ಅಳತೆ ಪುಸ್ತಕದ ಪ್ರತಿಗಳು, ಬಿಲ್ಲಿನ ಪ್ರತಿಗಳು, ಗುಣ ಪರೀಕ್ಷಾ ವರದಿಯ ಪ್ರತಿ ಹಾಗೂ ಈ ಕಾಮಗಾರಿಗೆ ಸಂಬAಧಿಸಿದ ಇನ್ನಿತರ ದಾಖಲೆಗಳನ್ನು ಧೃಡೀಕರಿಸಿ ಪುಸ್ತಿಕೆ (booಞಟeಣ ಜಿoಡಿm) ರೂಪದಲ್ಲಿ ಸಲ್ಲಿಸುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.