ಐಗೂರು, ಏ. ೩೦: ಐಗೂರಿನ ಆದಿಶಕ್ತಿ ಪಾಷಾಣ ಮೂರ್ತಿ ಅಮ್ಮ ದೇವಸ್ಥಾನದ ೪೮ನೇ ವರ್ಷದ ದೈವಕೋಲ ಮತ್ತು ನೇಮೋತ್ಸವ ಮೇ ೨ ರಿಂದ ೭ ರವರೆಗೆ ನಡೆಯಲಿದೆ. ಮೇ ೨ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ, ಮೇ ೩ ರಂದು ಬೆಳಿಗ್ಗೆ ೫ ಗಂಟೆಗೆ ಕಲಶದ ಮೆರವಣಿಗೆ, ೧೦ ಗಂಟೆಗೆ ಮಹಾಪೂಜೆ, ೧೧ ಗಂಟೆಗೆ ಹಣ್ಣುಕಾಯಿ ಪೂಜೆ, ೧೧.೩೦ ಗಂಟೆಗೆ ಆದಿಶಕ್ತಿ ಮಹಾತಾಯಿ ದರ್ಶನ, ರಾತ್ರಿ ೮ ಗಂಟೆಗೆ ಅಣ್ಣಪ್ಪಸ್ವಾಮಿ ದರ್ಶನ, ಮೇ ೪ ರಂದು ಕೋಲಗಳು ಆರಂಭವಾಗಿ ಸಂಜೆ ೭ ಗಂಟೆಗೆ ಭಂಡಾರ ಆಗಮನ, ನೇಮ ಗರಡಿ ಇಳಿಸುವುದು, ರಾತ್ರಿ ೯ ಗಂಟೆಗೆ ವಸ್ತçದಾನ ಕಾರ್ಯಕ್ರಮ, ರಾತ್ರಿ ೧೦ ಗಂಟೆಗೆ ಪಾಷಾಣ ಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ. ಮೇ ೫ ರಂದು ಬೆಳಗ್ಗಿನ ಜಾವ ೧.೩೦ ಗಂಟೆಗೆ ಮಂತ್ರವಾದಿ ಗುಳಿಗ ದೈವದ ಕೋಲ, ೨.೩೦ ಗಂಟೆಗೆ ಕುಪ್ಪೆ ಪಂಜುರ್ಲಿ ದೈವದ ಕೋಲ, ಬೆಳಿಗ್ಗೆ ೪ ಗಂಟೆಗೆ ಕೊರತಿ ದೈವದ ಕೋಲ, ಬೆಳಿಗ್ಗೆ ೬ ಗಂಟೆಗೆ ರಕ್ತೇಶ್ವರಿ ಕೋಲ, ಬೆಳಿಗ್ಗೆ ೭.೩೦ ಗಂಟೆಗೆ ಧರ್ಮದೇವದ ಕೋಲ, ಬೆಳಿಗ್ಗೆ ೯.೩೦ ಗಂಟೆಗೆ ಕೊರಗಜ್ಜ ದೈವದ ಕೋಲ, ಮೇ ೭ ರಂದು ಬೆಳಿಗ್ಗೆ ೮ಕ್ಕೆ ಕುರಿ ಹಾಗೂ ಕೋಳಿ ಒಪ್ಪಿಸುವುದು, ಬೆಳಿಗ್ಗೆ ೧೦.೩೦ ಗಂಟೆಗೆ ಭದ್ರಕಾಳಿ ದೇವಿಯ ಕೋಲ, ಮಧ್ಯಾಹ್ನ ೧೨ ಗಂಟೆಗೆ ಜಾಗದ ಗುಳಿಗ ಕೋಲ, ಮಧ್ಯಾಹ್ನ ೧.೩೦ ಗಂಟೆಗೆ ಎಡೆ ಪ್ರಸಾದ ವಿನಿಯೋಗ, ಮಧ್ಯಾಹ್ನ ೩ ಗಂಟೆಗೆ ಮಹಾಮಂಗಳಾರತಿ ಸಂಜೆ ೬ ಗಂಟೆಗೆ ದೈವ ನಡೆಮುಚ್ಚುವುದು ಹಾಗೂ ವರ್ಷಾವಧಿಯ ಜಾತ್ರಾ ಕಾರ್ಯಕ್ರಮಗಳು ಮುಕ್ತಾಯವಾಗಲಿದ್ದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.