ಕಾರ್ಮಿಕರು ಒಂದು ದೇಶದ ಬೆನ್ನೆಲುಬು. ದೇಶ ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಕಾರ್ಮಿಕ ವರ್ಗವದು ದುಡಿಯುವ ವರ್ಗ. ಶ್ರಮಿಕ ವರ್ಗ. ದುಡಿಯುವುದರಿಂದಲೇ ಅವರ ಬದುಕು. ಬೆವರು ಹರಿಸಿದರಷ್ಟೇ ಅವರ ಹೊಟ್ಟೆ ತುಂಬಬಹುದು. ಕಠಿಣ ದುಡಿಮೆಯೇ ಅವರ ಬದುಕು.
ಪ್ರಾಚೀನ ಸಮಾಜದಲ್ಲಿ ಗುಲಾಮಗಿರಿ ಪದ್ಧತಿಯಿತ್ತು. ಆಗ ದುಡಿಮೆಗೆ ಬೆಲೆಯೇ ಇರಲಿಲ್ಲ. ಗುಲಾಮರನ್ನು ಪ್ರಾಣಿಗಳಂತೆ ದುಡಿಸಿಕೊಳ್ಳುತ್ತಿತ್ತು. ಅವರನ್ನು ಮನುಷ್ಯರು ಎಂದೇ ಪರಿಗಣಿಸಲಾಗುತ್ತಿರಲಿಲ್ಲ. ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿತ್ತು. ನ್ಯಾಯ, ದುಡಿಮೆಗೆ ತಕ್ಕ ಪ್ರತಿಫಲವೆಂಬುದು ಗಗನಕುಸುಮವಾಗಿತ್ತು. ನಂತರ ಊಳಿಗ ಮಾನ್ಯ ಪದ್ಧತಿಯು ಬಂದಿತು. ಇಲ್ಲೂ ಕೂಡ ದುಡಿಯುವವನಿಗೆ ತಕ್ಕ ಪ್ರತಿಫಲವಿಲ್ಲದೆ, ಯಜಮಾನನಿಗೆ ಲಾಭವೆಲ್ಲವೂ ಸಂದಾಯವಾಗುತ್ತಿತ್ತು. ಕಾರ್ಮಿಕನಿಲ್ಲಿ ಸದಾ ಶ್ರಮಿಕನಾಗೇ ಇದ್ದನು, ಹೊರತಾಗಿ ಆತ ಆರ್ಥಿಕವಾಗಿ ಇನ್ನಾವುದೇ ರೂಪದಲ್ಲಿ ಬಲಿಷ್ಠನಾಗಲೇ ಇಲ್ಲ. ಬದಲಾಗಿ ಆತ ಇನ್ನಷ್ಟು ಕುಸಿಯಲಾರಂಭಿಸಿದ.
ನAತರದಲ್ಲಿ ಬೆಳೆದುಬಂದ ಪದ್ಧತಿಯೇ ಬಂಡವಾಳಶಾಹಿ ಪದ್ಧತಿ. ಈ ಪದ್ಧತಿಯಲ್ಲಿ ಕಾರ್ಮಿಕರ ಸ್ಥಿತಿ ಭಾರೀ ಸುಧಾರಣೆಯೇನು ಕಾಣಲಿಲ್ಲ. ಆದರೆ ಕಾರ್ಮಿಕರ ಸಂಘಟನೆಯಾಗತೊಡಗಿತು. ತಮ್ಮ ದುಡಿಮೆಗೆ ತಕ್ಕ ಪ್ರತಿಫಲಕ್ಕಾಗಿ ಹೋರಾಡುವ ಛಲತೊಟ್ಟರು.
೧೮೮೬ ಮೇ ೧ ರಂದು ನಡೆದ ಕಾರ್ಮಿಕ ಸಮಾವೇಶ ಐತಿಹಾಸಿಕ ಮಹತ್ವವನ್ನು ಪಡೆಯಿತು. ಮಾತ್ರವಲ್ಲ ಸಂಘಟನೆ ಹೋರಾಟದ ದೃಷ್ಟಿಯಿಂದಲೂ ಮುಖ್ಯ ಎಂದೆನಿಸಿತು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ಒಂದೆಡೆ ಸೇರಿದರು. ೧೮೮೬ ಮೇ ೧ ರಂದು ಚಿಕಾಗೋ ನಗರದ ಹೇಮ್ರ್ಷ್ಲ್ ಸ್ಕೇರ್ನಲ್ಲಿ ೧ ಲಕ್ಷ ಜನ ಕಾರ್ಮಿಕರು ಸೇರಿ ದಿನಕ್ಕೆ ಎಂಟು ಗಂಟೆ ಕೆಲಸ ಕ್ರಮವನ್ನು ಜಾರಿಗೆ ತರಲು ಒತ್ತಾಯಿಸಿತು. ಅಲ್ಲದೇ ಅನೇಕ ಕಾರ್ಮಿಕರ ಪ್ರಮುಖ ವಿಷಯಗಳ ಬಗ್ಗೆಯು ಚರ್ಚಿಸಿತು. ಮೊದಲ ಬಾರಿಗೆ ೧೯೨೩ ಮೇ ೧ ರಂದು ಮದ್ರಾಸ್ನಲ್ಲಿ ನಡೆದ ಕಾರ್ಮಿಕ ಸಮಾವೇಶದಲ್ಲಿ ಕಾರ್ಮಿಕ ವರ್ಗ ಮತ್ತು ರೈತ ಕಾರ್ಮಿಕ ವರ್ಗಗಳು ಒಟ್ಟಿಗೆ ಸೇರಿ ದುಡಿಯುವ ಕಾರ್ಮಿಕ ರಾಜಕೀಯ ಪಕ್ಷ ಹೊಂದಿರಬೇಕೆAಬ ಚರ್ಚೆ ನಡೆಯಿತು. ಭಾರತದಲ್ಲಿ ೧೯೨೭ ರಲ್ಲಿ ಐ.ಟಿ.ಯು.ಸಿ. ಕರೆಯ ಮೇರೆಗೆ ಮೇ ದಿನಾಚರಣೆಯನ್ನು ಹೆಚ್ಚು ಕಾರ್ಮಿಕರಿರುವ ನಗರಗಳಲ್ಲಿ ನಡೆಸಲಾಯಿತು. ೧೯೪೮ ರಲ್ಲಿ ಕೈಗಾರಿಕೆಗಳ ಕಾಯ್ದೆಗೆ ತರಲಾದ ತಿದ್ದುಪಡಿಯಲ್ಲಿ ಭಾರತ ಸರಕಾರ ಕಾರ್ಮಿಕರು ಒಂದು ವಾರಕ್ಕೆ ೪೮ ಗಂಟೆಗಳ ಕಾಲ ಕೆಲಸ ಮಾಡಬೇಕೆಂಬುದನ್ನು ಘೋಷಿಸಿತು. ಏಷ್ಯಾಖಂಡದಲ್ಲಿ ಬಾಲ ಕಾರ್ಮಿಕರು ಹೆಚ್ಚಿದ್ದಾರೆ, ಇದಕ್ಕೆಲ್ಲಾ ಮುಖ್ಯ ಕಾರಣ ನಿರುದ್ಯೋಗ ಹಾಗೂ ಅನಕ್ಷರತೆ. ವಿಶ್ವ ಕಾರ್ಮಿಕ ಸಂಸ್ಥೆ ಐ.ಎಲ್.ಓ. ೧೯೧೯ ರಲ್ಲಿ ಸ್ಥಾಪನೆಯಾಯಿತು. ಇದು ಜಿನೆವಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಇದರ ಉದ್ದೇಶ ಕಾರ್ಮಿಕರಿಗೆ ನ್ಯಾಯ ಒದಗಿಸುವುದು, ಜೀವನ ಸ್ಥಿತಿಯನ್ನು ಉತ್ತಮಗೊಳಿಸುವುದು ಮತ್ತು ಜೀವನ ಮಟ್ಟವನ್ನು ಸುಧಾರಿಸಿ, ಅವರ ಆರ್ಥಿಕ ದೃಢತೆಯನ್ನು ಸ್ಥಾಪಿಸುವುದು.
ಇಂದು ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ವಿವಿಧ ಉದ್ದಿಮೆಗಳಲ್ಲಿ, ಕಾರ್ಖಾನೆಗಳಲ್ಲಿ ಹಾಗೂ ಇನ್ನಿತರ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಅವರಿಗೆ ಸಂಘಟನೆಯಲ್ಲಿ ಇಂದಿಗೂ ಕೊರತೆಯಿದೆ.
ಸರಕಾರದಿಂದ ಸರಿಯಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ಸ್ವತಃ ಮನೆಗಳಿಲ್ಲ, ನಿವೇಶನಗಳಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿಲ್ಲ. ಇವೇ ಅಲ್ಲದೇ ಇನ್ನಿತರ ಸಮಸ್ಯೆಗಳು ಕಾರ್ಮಿಕ ವರ್ಗದವರನ್ನು ಕಾಡುತ್ತಿದೆ.
ಮೇ ೧ ರಂದು ಕಾರ್ಮಿಕರ ದಿನವನ್ನು ಎಲ್ಲರೂ ಸೇರಿ ಆಚರಣೆ ಮಾಡುತ್ತಾರೆ.
- ಹರೀಶ್ ಸರಳಾಯ, ಮಡಿಕೇರಿ.