ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ

ವೀರಾಜಪೇಟೆ, ಏ. ೨೮: ಪಟ್ಟಣದ ತೆಲುಗರ ಬೀದಿಯ ನಿವಾಸಿ ಅಯ್ಯಪ್ಪ ಟಿ.ಕೆ. ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಮತದಾನ ಮಾಡಲಾಗಲಿಲ್ಲ. ಅಯ್ಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸುಂಕದಕಟ್ಟೆಯ ಬೂತ್‌ನಲ್ಲಿ ಮತ ಚಲಾಯಿಸಿದ್ದೆ.

ಆದರೆ ಈ ಬಾರಿ ನಾನು ಮತ ಚಲಾಯಿಸಲು ಹೋಗಿದ್ದಾಗ ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿ ಅಧಿಕಾರಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.ಚೆಯ್ಯAಡಾಣೆ, ಏ. ೨೮: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ೮೨ ರಲ್ಲಿ ಬೆಳಿಗ್ಗೆ ೭ ಗಂಟೆಯಿAದ ಯಾವುದೇ ಸಮಸ್ಯೆಗಳು ಇಲ್ಲದೆ ಮತದಾನ ಪ್ರಕ್ರಿಯೆ ನಡೆಯಿತು.

ಬೂತ್‌ಗಳಲ್ಲಿ ಮತದಾರರು ಸಾಲಾಗಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಮೊದಲ ಬಾರಿ ಮತಗಳನ್ನು ಚಲಾಯಿಸುವ ಯುವ ಮತದಾರರು ಉತ್ಸಾಹದಿಂದ ಬಂದು ತಮ್ಮ ತಮ್ಮ ಮತ ಚಲಾಯಿಸಿದರು.

ಕಾಡಾನೆ ಹಾವಳಿ ಇರುವ ಚೇಲಾವರ ಮತಗಟ್ಟೆಯಲ್ಲಿ ವೀರಾಜಪೇಟೆ ವಲಯ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಸಿಬ್ಬಂದಿಗಳನ್ನು ಒದಗಿಸಿ ಮತದಾರರಿಗೆ ಯಾವುದೇ ಭಯವಿಲ್ಲದೆ ಮತ ಕೇಂದ್ರಗಳಿಗೆ ತೆರಳಲು ಅವಕಾಶ ಒದಗಿಸಲಾಗಿತ್ತು.

ಸುಂಟಿಕೊಪ್ಪದಲ್ಲಿ ಹಿರಿಯ ನಾಗರಿಕರು, ವಿಶೇಷಚೇತನರಿಗೆ ತೊಂದರೆ

ಸುAಟಿಕೊಪ್ಪ, ಏ. ೨೮: ಸುಂಟಿಕೊಪ್ಪ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮತದಾನ ನಡೆಯಿತು.

ಚುನಾವಣಾ ಆಯೋಗದ ನೀತಿ ನಿಯಮಗಳಿಗೆ ಅನುಸಾರವಾಗಿ ೨೦೦ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ, ಹೊಟೇಲ್ ವ್ಯಾಪಾರ, ವಾಹನ ನಿಲುಗಡೆ ಮತ್ತು ಗುಂಪು ಜನರ ಓಡಾಟವನ್ನು ನಿರ್ಬಂಧಿಸಲಾಗಿತ್ತು.

ಆದರೆ ಈ ನಿರ್ಬಂಧಗಳು ಮಾನವೀಯತೆಯನ್ನು ಕಳೆದುಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹಿರಿಯ ನಾಗರಿಕರು, ವಿಶೇಷಚೇತನರು, ಅನಾರೋಗ್ಯ ಪೀಡಿತರು ವಾಹನಗಳಲ್ಲಿ ಬಂದ ಸಂದರ್ಭ ಅವರನ್ನು ಮತಗಟ್ಟೆಯ ಗೇಟಿನ ಮುಂಭಾಗ ತಡೆದು ಅಲ್ಲಿಂದಲೇ ಮತಗಟ್ಟೆಗೆ ಹೋಗುವಂತೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳು ಒತ್ತಾಯಿಸುತ್ತಿದ್ದುದು ಕಂಡು ಬಂತು. ಕೇವಲ ಬೆರಳೆಣಿಕೆಯ ವ್ಹೀಲ್‌ಚೇರ್ ಇರಿಸಿದ್ದು ೩ ಸಾವಿರಕ್ಕೂ ಮಿಕ್ಕಿ ಮತದಾರರನ್ನು ಹೊಂದಿರುವ ೪ ಮತ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಹಾಗೂ ಅನಾರೋಗ್ಯ ಪೀಡಿತರು ಸಂಕಷ್ಟಕ್ಕೆ ಒಳಗಾಗಿದ್ದು, ಕಂಡು ಬಂತು ವಿಶೇಷವಾಗಿ ಹೊರ ರಾಜ್ಯದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಹಿನ್ನೆಲೆಯಲ್ಲಿ ಭಾಷೆ, ಪರಿಸರ ತಿಳಿಯದ ಅವರು ಕಾನೂನಿನ ನೇರಕ್ಕೆ ಕೆಲಸ ಮಾಡಿ ಮಾನವೀಯತೆಯನ್ನು ಮರೆತರು ಎಂಬ ಆರೋಪ ಕೇಳಿ ಬಂದಿತು.

ಚುನಾವಣೆಯಲ್ಲಿ ಮತದಾನ ಮಾಡುವುದು ಒಂದು ಹಬ್ಬದ ಕಾರ್ಯಕ್ರಮ, ಅತ್ಯಂತ ಪ್ರಮುಖವಾದ ಕಾರ್ಯಗಳಲ್ಲಿ ಒಂದು ಎಂದೆಲ್ಲಾ ವಿಪರೀತ ಅಬ್ಬರದ ಪ್ರಚಾರವನ್ನು ವಿವಿಧ ಇಲಾಖೆಗಳ ಮೂಲಕ ಲಕ್ಷಾಂತರ ರೂಪಾಯಿ ವ್ಯಯಮಾಡಿ ಪ್ರಚಾರಪಡಿಸಿತ್ತು. ಆದರೆ ಎಲ್ಲಿ ಮಾನವೀಯತೆ ತೋರಬೇಕಿತ್ತೋ ಅಲ್ಲಿ ಮಾನವೀಯತೆಯೇ ಮರೆಯಾಗಿದ್ದುದು ವಿಪರ್ಯಾಸ..

ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ವಿಶೇಷಚೇತನರು, ಅನಾರೋಗ್ಯ ಪೀಡಿತರ ಆರೈಕೆ ಮನೆಯವರು, ಸಂಬAಧಿಕರು ಅಸಮಾಧಾನ ಹಿನ್ನೆಲೆಯಲ್ಲಿ ಮತದಾರರು ಮತದಾನದ ಪ್ರಮಾಣ ಇಳಿಮುಖವಾಗಲು ಕಾರಣವಾಗುತ್ತಿದೆ ಎಂಬ ಮಾತು ಕೇಳಿ ಬಂದಿತು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲೂ ಈ ರೀತಿಯ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಗಮನಹರಿಸಬೇಕೆಂದು ಹಿರಿಯ ನಾಗರಿಕರು ಪತ್ರಿಕೆಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದರು.

ಬಿರುಸುಗೊಂಡ ಮತದಾನ : ಸುಂಟಿಕೊಪ್ಪದ ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ ೧೦ ಗಂಟೆಯವರೆಗೆ ನಿಧಾನಗತಿಯಲ್ಲಿ ಸಾಗಿದ್ದ ಮತದಾನ ನಂತರ ಬಿರುಸುಗೊಂಡಿತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೭ ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಬಿರುಸಿನ ಮತದಾನ ನಡೆಯಿತು.

ಮತದಾನ ಮುಗಿಯುವ ವೇಳೆಗೆ ೭ ಮತಗಟ್ಟೆಗಳಲ್ಲಿ ೭೦೦೧ ಮಂದಿ ಮತದಾನ ಮಾಡುವ ಮೂಲಕ ಶೇ.೭೪ರಷ್ಟು ಮತದಾನವಾಗಿದೆ.

ಅದರಲ್ಲೂ ಮೊದಲ ಬಾರಿ ಮತ ಚಲಾಯಿಸಿದ ಯುವಕ, ಯುವತಿಯರ ಮುಖದಲ್ಲಿ ಸಂತೋಷದ ನಗೆ ಮೂಡಿತ್ತು.

ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಅವರ ನೇತೃತ್ವದಲ್ಲಿ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವಹಿಸಿದ್ದರು.

ಕೊಡಗರಹಳ್ಳಿ ಸ್ಕೂಲ್ ಬಾಣೆ ನಿವಾಸಿ ಹಾಗೂ ಹಿರಿಯ ಪತ್ರಕರ್ತ ಬಿ.ಸಿ. ದಿನೇಶ್ ಅವರ ಪುತ್ರಿ ಬಿ.ಡಿ. ಮಧುರ ಅವರು ಪ್ರಥಮ ಮತದಾನವನ್ನು ಮತಗಟ್ಟೆ ಸಂಖ್ಯೆ ೧೮೯ ರ ಕೊಡಗರಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮಾಡಿದರು.

ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್‌ಕುಮಾರ್ ಮತಗಟ್ಟೆ ಸಂಖ್ಯೆ ೧೩೮ ರಲ್ಲಿ ಮತದಾನ ಮಾಡಿದರು.ಚುನಾವಣಾ ಕರ್ತವ್ಯದಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳ ಸೇವೆ

ಚೆಟ್ಟಳ್ಳಿ, ಏ. ೨೮: ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ಅನೇಕ ಸಿಬ್ಬಂದಿ ವರ್ಗದವರು ಭಾಗವಹಿಸಿ ಕರ್ತವ್ಯ ನಿರ್ವಹಿಸುವುದು ಸಾಮಾನ್ಯ. ಆದರೆ ಕಾಲೇಜಿನ ವಿದ್ಯಾರ್ಥಿಗಳು ಪಾಠ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಚುನಾವಣಾ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕರು ವಿವಿಧ ಚುನಾವಣಾ ಬೂತ್‌ಗಳಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿದರು. ಇವರು ಬೂತ್‌ಗೆ ಬರುವ ಜನರನ್ನು ಕರೆದುಕೊಂಡು ಬರುವುದು, ನಡೆಯಲು ಸಾಧ್ಯವಾಗದ ಜನರಿಗೆ ವಿ಼Ãಲ್‌ಚೇರ್ ಮೂಲಕ ಬೂತ್‌ಗೆ ಬರಲು ಸಹಾಯ ಮಾಡುವುದು, ಸರದಿ ಸಾಲಿನಲ್ಲಿ ನಿಂತ ಜನರಿಗೆ ನೀರನ್ನು ನೀಡುವುದು, ಜನದಟ್ಟಣೆ ಕಡಿಮೆ ಮಾಡಲು ಸಾಲಿನಲ್ಲಿ ಬರುವಂತೆ ಸೂಚನೆ ನೀಡುವುದು, ವಿಶೇಷಚೇತನರಿಗೆ ಸಹಾಯ ಮಾಡುವುದು ಹಾಗೂ ಇತರ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಗೋಣಿಕೊಪ್ಪಲು ಮತ್ತು ಸುತ್ತಮುತ್ತಲಿನ ಚುನಾವಣಾ ಬೂತ್‌ಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವ ಮೂಲಕ ಜನಮೆಚ್ಚುಗೆ ಪಡೆದರು. ಎನ್.ಎಸ್.ಎಸ್. ನೋಡಲ್ ಅಧಿಕಾರಿ ವನಿತ್ ಕುಮಾರ್ ಮತ್ತು ಎನ್.ಎಸ್.ಎಸ್. ಅಧಿಕಾರಿ ರೀತಾ ಎನ್.ಪಿ ಮಾರ್ಗದರ್ಶನದಲ್ಲಿ ಎನ್.ಎಸ್.ಎಸ್ ನಾಯಕರಾದ ದರ್ಶನ್ ಎಸ್.ಕೆ., ರೀಶು ಕಾವೇರಪ್ಪ, ಸುಜನ್ ನೇತೃತ್ವದಲ್ಲಿ ಸ್ವಯಂ ಸೇವಕರು ವಿವಿಧ ಚುನಾವಣಾ ಬೂತ್‌ಗಳಲ್ಲಿ ಸೇವೆ ಮಾಡಿದರು.