ಮಡಿಕೇರಿ, ಏ. ೨೮: ಪ್ರತಿ ವರ್ಷ ಏಪ್ರಿಲ್ ೨೨ ರಂದು ವಿಶ್ವ ಭೂ ದಿನಾಚರಣೆ ಆಚರಿಸಲಾಗುತ್ತಿದ್ದು, ಅದರಂತೆ ೨೦೨೪ ನೇ ವರ್ಷದ ವಿಶ್ವ ಭೂ ದಿನದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಕೆ. ಬೈಗೋಡು ಗ್ರಾಮದ ಅಯ್ಯಪ್ಪ ದೇವರ ಕಾಡಿನಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ ಆರ್., ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ್ ಕೊಠಾರಿ, ಅಪರ ಸಿವಿಲ್ ನ್ಯಾ. ಪ್ರದೀಪ್ ಪೋತದಾರ್ ಹಾಗೂ ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎನ್.ಹೆಚ್. ಜಗನ್ನಾಥ, ವಲಯ ಅರಣ್ಯ ಅಧಿಕಾರಿಗಳಾದ ಕೆ.ಎಂ. ದೇವಯ್ಯ, ಅರಣ್ಯ ಪಾಲಕರಾದ ಚಂದ್ರಶೇಖರ್ ಅಮರಗೋಳ, ಉಪ ವಲಯ ಅರಣ್ಯ ಅಧಿಕಾರಿ ಜನಾರ್ದನ ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.