ಸಿದ್ದಾಪುರ, ಏ. ೨೮: ಕೊಂಡAಗೇರಿ ಉರೂಸ್ ಸಮ್ಮೇಳನ ಹಾಗೂ ಅನ್ನಸಂತರ್ಪಣಾ ಕಾರ್ಯದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಂಡಿದ್ದರು. ಕೊಂಡAಗೇರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮೊಹಮ್ಮದ್ ಪೈಗಂಬರ್ ಸ.ಅ ರವರ ಸಂತತಿ ಪುತ್ರರಾದ ಬಹು ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ ಅಲ್ ಹಳ್ರಮಿ (ನ.ಮ) ಹಾಗೂ ಸಮೀಪದ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಗೊಳ್ಳುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭದ ಅಂಗವಾಗಿ ಸಾರ್ವಜನಿಕ ಸೌಹಾರ್ದ ಸಮ್ಮೇಳನ ನಡೆಯಿತು.

ಧಾರ್ಮಿಕ ಪಂಡಿತ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸೇವಾ ಮನೋಭಾವದಿಂದ ಸಂಕಷ್ಟದಲ್ಲಿರು ವವರಿಗೆ ನೆರವಾಗುವ ಮೂಲಕ ಮಾನವೀಯತೆ ತೋರಬೇಕು, ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿ ಕೊಂಡು ಮುನ್ನಡೆಯಬೇಕೆಂದರು.

ಧಾರ್ಮಿಕ ಭಾಷಣಕಾರ ಪೇರೋಡ್ ಅಬ್ದರ್ರಹ್ಮಾನ್ ಸಖಾಫಿ ಮಾತನಾಡಿ, ಹಚ್ಚ ಹಸಿರಿನೊಂದಿಗೆ ಅಪಾರ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಎಲ್ಲಾ ಬಾಂಧವರು ತಮ್ಮದೇ ಆದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊAದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿ ರುವುದರಿಂದಲೇ ಭಾವೈಕತೆಯ ಸೌಹಾರ್ದ ಸಮಾಜ ನಿರ್ಮಾಣ ವಾಗಿದೆ ಎಂದರು. ಕೊಂಡAಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ. ಯೂಸುಫ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಅಸ್ಸಯ್ಯದ್ ಆಟಕೋಯ ಅಸ್ಸಖಾಫ್ ತಂಙಳ್ ಆದೂರು, ಸಯ್ಯದ್ ಎಸ್. ಹಕೀಂ ತಂಙಳ್ ಅಸ್ಪಖಾಫ್ ಆದೂರು, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಬ್ದುಲ್ ರೆಹಮಾನ್ ಅಂದಾಯಿ, ಹನೀಫ್, ಅಶ್ರಪ್ ಅಸಹನಿ ಉಸ್ತಾದ್, ಪೇರಂಡ ಎ. ಯುಸೂಫ್ ಹಾಜಿ, ಮೊಹಮ್ಮದ್ ಇರ್ಫಾನ್, ಮೊಹಮ್ಮದ್ ಹಾಜಿ, ತಕ್ಕ ಮುಖ್ಯಸ್ಥರುಗಳಾದ ಪೇರಿಯಂಡ ಎ. ಕುಂಞÂ ಅಹಮದ್ ಮುಸ್ಲಿಯಾರ್, ಕುಪ್ಪಂದರ ಎಂ. ಯಹ್ಯಾ ಹಾಜಿ, ಎಂ.ಐ. ಇಕ್ಬಾಲ್, ಕೊಟ್ಟಿಯಾಟ್ ಎಂ. ಶಾದುಲಿ, ಸಮಿತಿಯ ಉಪಾಧ್ಯಕ್ಷ ಪುಡಿಯಂಡ ಈ ಶಾದುಲಿ, ಕಾರ್ಯದರ್ಶಿ ಪೇರಿಯಂಡ ಎಂ. ಹಂಸ ಪ್ರಮುಖರಾದ ಅನೀಫ್ ಸಖಾಫಿ ಸೇರಿದಂತೆ ಜನಪ್ರತಿನಿಧಿಗಳು, ಧಾರ್ಮಿಕ ಪಂಡಿತರು, ಸಮಾಜ ಸೇವಕರು, ಗಣ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭ ಸ್ಥಳೀಯ ಶಾದಿ ಮಾಲ್ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

-ಎಸ್.ಎಂ. ಮುಬಾರಕ್