ವೀರಾಜಪೇಟೆ, ಏ. ೨೭: ಇಲ್ಲಿನ ಅಪ್ಪಯ್ಯಸ್ವಾಮಿ ರಸ್ತೆಯ ಕಾವೇರಿ ಆಶ್ರಮದಲ್ಲಿದ್ದ ಶ್ರೀ ವಿವೇಕಾನಂದ ಶರಣ ಸ್ವಾಮಿಗಳು (೧೦೨) ತಾ. ೨೬ ರಂದು ನಿಧನರಾದರು.
ಕಾವೇರಿ ಆಶ್ರಮದಲ್ಲಿ ಕಳೆದ ಹಲವು ದಶಕಗಳಿಂದ ಸೇವೆಯನ್ನು ಮಾಡುತ್ತಾ ಬಂದಿದ್ದ ಇವರು ಆಶ್ರಮದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಿತ್ಯ ನಿರಂತರವಾಗಿ ನಡೆಸುತ್ತಾ ಬರುತ್ತಿದ್ದರು.
ಇವರ ಅಂತ್ಯಕ್ರಿಯೆ ತಾ. ೨೭ ರಂದು ಕಾವೇರಿ ಆಶ್ರಮದಲ್ಲಿ ನೆರವೇರಿತು. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರು ಓಂಕಾರ ಆಶ್ರಮದ ಮಧುಸೂದನ ನಂದಾ ಸ್ವಾಮೀಜಿ, ಆತ್ಮನಿಷ್ಠಾ
ನಂದಪುರಿ ಸ್ವಾಮೀಜಿ, ಮಂಡ್ಯ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮನಂದನಾಥ ಸ್ವಾಮೀಜಿ, ಮೈಸೂರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಬೆಂಗಳೂರು ಕೈಲಾಸಂ ಆಶ್ರಮದ ಬುದ್ದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶಂಭುನಾಥ್ ಸ್ವಾಮೀಜಿ ಉಪಸ್ಥಿತರಿದ್ದರು.