ಮಡಿಕೇರಿ, ಏ. ೨೭: ಜಿಲ್ಲೆಯಲ್ಲಿ ವಿವಿಧ ಜನಾಂಗಗಳ ನಡುವೆ ಕ್ರೀಡಾಕೂಟಗಳು ನಡೆಯುತ್ತಿವೆ. ಅದೇ ರೀತಿ ಅರೆಭಾಷೆ ಗೌಡ ಸಮುದಾಯದ ಮಹಿಳೆಯರಿಗಾಗಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಎಲ್ಲರ ಗಮನ ಸೆಳೆಯಿತು. ನಿತ್ಯ ಕೌಟುಂಬಿಕ ಜಂಜಾಟದಲ್ಲಿರುತ್ತಿದ್ದ ಮಹಿಳೆಯರು ಕ್ರಿಕೆಟ್ ಆಡಿ ಸಂಭ್ರಮಿಸಿದರು. ಯುವತಿಯರೂ ಕೂಡ ಪಾಲ್ಗೊಂಡು ಹುರುಪು ತುಂಬಿದರು.
ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಳೆದ ೧೧ ದಿನಗಳಿಂದ ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಲಿದೆ. ಇದರೊಂದಿಗೆ ಗೌಡ ಯುವ ವೇದಿಕೆ ಹಾಗೂ ಮಹಿಳಾ ಸಂಚಾಲಕರ ವತಿಯಿಂದ ೪ ಓವರ್ಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಇಂದು ಗಣ್ಯರು ಚಾಲನೆ ನೀಡಿದರು.
ಒಟ್ಟು ೧೧ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಜಿಲ್ಲೆಯಲ್ಲದೆ ರಾಜ್ಯದ ವಿವಿಧೆಡೆ ನೆಲೆಸಿರುವ ಸಮುದಾಯದ ಮಹಿಳೆಯರು ಕ್ರಿಕೆಟ್ ತಂಡದಲ್ಲಿ ಆಟವಾಡಿ ಸೈ ಎನಿಸಿಕೊಂಡರು. ಎ.ಬಿ.ಸಿ. ಹಾಗೂ ಡಿ ಎಂಬ ೪ ಪೂಲ್ಗಳಲ್ಲಿ ೧೧ ತಂಡವನ್ನು ವಿಂಗಡಿಸಲಾಗಿದೆ. ೨ ದಿನಗಳ ಕಾಲ ಪಂದ್ಯಾಟ ಲೀಗ್ ಮಾದರಿಯಲ್ಲಿ ನಡೆಯುತ್ತಿದೆ.
ದಿ ಎಲೈಟ್ ಕ್ರಿಕೆಟ್ ಕ್ಲಬ್ ವಿಮೆನ್, ಮೈಸೂರಿನ ಕೆ.ಡಿ.ಕೆ. ಗೌಡ ಮಹಿಳಾ ತಂಡ, ಮರಗೋಡು ರಿಕ್ರಿಯೇಷನ್ ಕ್ಲಬ್, ಬ್ಲಾö್ಯಕ್ ಪ್ಯಾಂರ್ಸ್ ವಿಮೆನ್ ಕ್ರಿಕೆಟ್ ಕ್ಲಬ್, ಗೂಡ್ಲೂರು ಕಾವೇರಿ ಟೀಂ, ವೈಲ್ಡ್ ಮಾಸ್ಟರ್ಸ್, ಟೀಂ ಗ್ಲಾö್ಯಡಿಯೇಟರ್ ಕ್ವೀನ್ಸ್, ಬ್ಲಾಸಂ ಬೆಲ್ಸ್, ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ, ಚೇರಳ ಗೌಡ ಸಮಾಜ ಸಂಘ ಪ್ಯಾಂರ್ಸ್ ಕ್ಲಬ್ ಕೊಡಗು ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣಸಾಟ ನಡೆಯುತ್ತಿದೆ.
ಒಟ್ಟು ೧೧ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಜಿಲ್ಲೆಯಲ್ಲದೆ ರಾಜ್ಯದ ವಿವಿಧೆಡೆ ನೆಲೆಸಿರುವ ಸಮುದಾಯದ ಮಹಿಳೆಯರು ಕ್ರಿಕೆಟ್ ತಂಡದಲ್ಲಿ ಆಟವಾಡಿ ಸೈ ಎನಿಸಿಕೊಂಡರು. ಎ.ಬಿ.ಸಿ. ಹಾಗೂ ಡಿ ಎಂಬ ೪ ಪೂಲ್ಗಳಲ್ಲಿ ೧೧ ತಂಡವನ್ನು ವಿಂಗಡಿಸಲಾಗಿದೆ. ೨ ದಿನಗಳ ಕಾಲ ಪಂದ್ಯಾಟ ಲೀಗ್ ಮಾದರಿಯಲ್ಲಿ ನಡೆಯುತ್ತಿದೆ.
ದಿ ಎಲೈಟ್ ಕ್ರಿಕೆಟ್ ಕ್ಲಬ್ ವಿಮೆನ್, ಮೈಸೂರಿನ ಕೆ.ಡಿ.ಕೆ. ಗೌಡ ಮಹಿಳಾ ತಂಡ, ಮರಗೋಡು ರಿಕ್ರಿಯೇಷನ್ ಕ್ಲಬ್, ಬ್ಲಾö್ಯಕ್ ಪ್ಯಾಂರ್ಸ್ ವಿಮೆನ್ ಕ್ರಿಕೆಟ್ ಕ್ಲಬ್, ಗೂಡ್ಲೂರು ಕಾವೇರಿ ಟೀಂ, ವೈಲ್ಡ್ ಮಾಸ್ಟರ್ಸ್, ಟೀಂ ಗ್ಲಾö್ಯಡಿಯೇಟರ್ ಕ್ವೀನ್ಸ್, ಬ್ಲಾಸಂ ಬೆಲ್ಸ್, ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ, ಚೇರಳ ಗೌಡ ಸಮಾಜ ಸಂಘ ಪ್ಯಾಂರ್ಸ್ ಕ್ಲಬ್ ಕೊಡಗು ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣಸಾಟ ನಡೆಯುತ್ತಿದೆ.
(ಮೊದಲ ಪುಟದಿಂದ) ಚಾಂಪಿಯನ್ ಆಗುವ ತಂಡಕ್ಕೆ ರೂ. ೧೦ ಕ್ರೀಡಾಕೂಟ ಆಯೋಜನೆಯಿಂದ ಪರಸ್ಪರ ಸ್ನೇಹ ಹೆಚ್ಚಾಗಿ ಬಾಂಧವ್ಯ ವೃದ್ಧಿಸುತ್ತದೆ ಎಂದು ಮಹಿಳಾ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದ ಗಣ್ಯರು ಅಭಿಪ್ರಾಯಿಸಿದರು.
ದಾನಿ ದಂಬೆಕೋಡಿ ಚಿಣ್ಣಪ್ಪ ಮಾತನಾಡಿ, ಕ್ರೀಡೆಯಿಂದ ಒಗ್ಗಟ್ಟು ಮೂಡಿ ಸಹಬಾಳ್ವೆಗೆ ಸಹಕಾರವಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಭಾಗವಹಿಸುವಿಕೆ ಮುಖ್ಯ. ಮಹಿಳೆಯರು ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಿವೃತ್ತ ಡಿವೈಎಸ್ಪಿ ಯಾಲದಾಳು ಕೇಶವಾನಂದ ಮಾತನಾಡಿ, ನಿರೀಕ್ಷೆಗೂ ಮೀರಿ ಮಹಿಳಾ ಕ್ರಿಕೆಟ್ಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಪೌರಾಯುಕ್ತೆ ಮೂಟೇರ ಪುಷ್ಪಾವತಿ ಮಾತನಾಡಿ, ಕ್ರೀಡೆ ಎಲ್ಲರನ್ನು ಬೆಸೆಯುತ್ತದೆ. ಮಹಿಳೆಯರು ನಾಲ್ಕು ಗೋಡೆಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಈ ರೀತಿ ಕ್ರೀಡಾಕೂಟದಿಂದ ಮನರಂಜನೆ ದೊರೆತು ಮಾನಸಿಕ ಒತ್ತಡದಿಂದ ಹೊರಬರಬಹುದು ಎಂದು ಅಭಿಪ್ರಾಯಿಸಿದರು.
ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳಾದ ಮೂಟೇರ ನಚಿಕೇತ್, ಯಾಲದಾಳು ಸೋಮಯ್ಯ, ದಂಬೇಕೋಡಿ ಲೀಲಾ ಚಿಣ್ಣಪ್ಪ, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಮಹಿಳಾ ಕ್ರಿಕೆಟ್ ಸಹಸಂಚಾಲಕರಾದ ಚೊಕ್ಕಾಡಿ ಪ್ರೇಮಾ ರಾಘವಯ್ಯ, ತಳೂರು ಉಷಾರಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಜಿಪಿಎಲ್ -ಎಲೈಟ್ ಸ್ಕಾ÷್ವ್ವಡ್-೨ ಫೈನಲ್ಗೆ
ಗೌಡ ಪ್ರೀಮಿಯರ್ ಲೀಗ್ ಲೆದರ್ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕಾ÷್ವ್ವಡ್-೨ ಫೈನಲ್ ಪ್ರವೇಶಿಸಿದೆ.
ಇಂದು ನಡೆದ ಕ್ವಾಲಿಫೈಯರ್ ಪಂದ್ಯಾಟದಲ್ಲಿ ದಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕಾ÷್ವ್ವಡ್-೨ ಕೂರ್ಗ್ ವಾರಿಯರ್ಸ್ ತಂಡದ ವಿರುದ್ಧ ಹತ್ತು ವಿಕೆಟ್ಗಳ ರೋಚಕ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ವಾರಿಯರ್ಸ್ ತಂಡ ನಿಗದಿತ ೧೦ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೮೮ ರನ್ ಗಳಿಸಿತು. ತಂಡದ ಪರ ಗೋಪಿತ್ ೨೩ ಎಸೆತಗಳಲ್ಲಿ ಅಜೇಯ ೪೦ ರನ್ ಗಳಿಸಿದರು. ಕುಜಲ್ ಕಾರ್ಯಪ್ಪ ೨೯ ರನ್ಗಳ ಅಮೂಲ್ಯ ಕಾಣಿಕೆ ನೀಡಿದರು. ಎಲೈಟ್ ತಂಡದ ಪರ ದೀಕ್ಷಿತ್ ಕುತ್ಯಾಳ ಮತ್ತು ಹುದೇರಿ ತಮ್ಮಣ್ಣ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಎಲೈಟ್ ತಂಡ ೫.೩ ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ತಂಡದ ಪರ ಎ.ಎಸ್ ರಾಹುಲ್ ೨೧ ಎಸೆತಗಳಲ್ಲಿ ಅಜೇಯ ೬೬ ರನ್ ಗಳಿಸಿ ಗೆಲುವಿನ ರೂವಾರಿಯಾದರು. ಇದು ಇವರ ಐದನೇ ಅರ್ಧ ಶತಕವಾಗಿದೆ. ಆಕರ್ಷ್ ೧೮ ರನ್ ಗಳ ಕಾಣಿಕೆ ನೀಡಿದರು.
ಇದರೊಂದಿಗೆ ಎಲೈಟ್ ಸ್ಕಾ÷್ವ್ವಡ್-೨ ತಂಡ ಫೈನಲ್ ಪ್ರವೇಶಿಸಿತು.
ಮೊದಲ ಎಲಿಮೆನೇಟರ್ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡದ ವಿರುದ್ಧ ಗೆಲುವು ಸಾಧಿಸಿ ಎಲಿಮಿನೇಟರ್ -೨ ಹಂತಕ್ಕೆ ಅರ್ಹತೆ ಪಡೆಯಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ ೧೦ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೯೨ ರನ್ ಗಳಿಸಿತು. ತಂಡದ ಪರ ಜಶ್ವಂತ್ ೨೭ ರನ್ ಗಳಿಸಿದರು. ರೋಹನ್ ೨೨ ರನ್ ಗಳಿಸಿದರು.
ಎಲೈಟ್ ತಂಡದ ಪರ ಶರತ್ ಚೊಕ್ಕಾಡಿ ಮತ್ತು ಅಣ್ಣಚಿರ ಧಿನೇಂದ್ರ ತಲಾ ೨ ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ೯.೩ ಓವರ್ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಲೋಕೇಶ್ ೧೫ ಎಸೆತಗಳಲ್ಲಿ ಅಜೇಯ ೪೦ ರನ್ ಗಳಿಸಿದರು. ಬಿಳಿಗೇರಿ ತಂಡದ ಪರ ಮೂವನ ತುಷಾರ್ ೨ ವಿಕೆಟ್ ಪಡೆದರು.ಫಲಿತಾಂಶ ವಿವರ
ದಿನದ ಮೊದಲ ಪಂದ್ಯಾಟ ದಿ ಎಲೈಟ್ ಕ್ರಿಕೆಟ್ ಕ್ಲಬ್ ವಿಮೆನ್ ಹಾಗೂ ಮೈಸೂರಿನ ಕೆಡಿಕೆ ಗೌಡ ಮಹಿಳಾ ತಂಡದ ನಡುವೆ ನಡೆದು ೬೫ ರನ್ಗಳ ಅಂತರದಿAದ ಎಲೈಟ್ ಗೆಲುವು ಸಾಧಿಸಿತು. ತನಿಷ್ಕ ಜೈನೀರ ಹಾಗೂ ಲೀನಾ ಕೊನೆಯ ತನಕ ಜೊತೆಯಾಟದಿಂದ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ತನಿಷ್ಕ ೧೪ ಬಾಲ್ಗಳಿಗೆ ೪೫ ರನ್ ಬಾರಿಸಿದರು. ಲೀನಾ ೧೦ ಬಾಲ್ಗಳಲ್ಲಿ ೨೨ ರನ್ ಕಲೆ ಹಾಕಿದರು.
ಬ್ಲಾö್ಯಕ್ ಪ್ಯಾಂರ್ಸ್-ಗೂಡ್ಲೂರು ಕಾವೇರಿ ಟೀಂ ನಡುವಿನ ಪಂದ್ಯಾಟದಲ್ಲಿ ಪ್ಯಾಂರ್ಸ್ ೧೫ ರನ್ಗಳ ಗೆಲುವು ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಪ್ಯಾಂರ್ಸ್ ೪ ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೦ ರನ್ಗಳ ಗುರಿ ನೀಡಿತು. ಇದನ್ನು ಬೆನ್ನತ್ತಿದ ಕಾವೇರಿ ಟೀಂ ೪ ಓವರ್ನಲ್ಲಿ ಮೂರು ವಿಕೆಟ್ ನಷ್ಟಕ್ಕೆ ೨೫ ರನ್ ಮಾತ್ರ ದಾಖಲಿಸಲು ಶಕ್ತವಾಯಿತು. ಪ್ಯಾಂರ್ಸ್ ಪರ ಜ್ಯೋತಿ ೯ ಬಾಲ್ಗೆ ೧೯ ರನ್, ಲವಿನಾ ೧೬ ಬಾಲ್ಗೆ ೧೮ ರನ್ ಬಾರಿಸಿದರು. ರೀನಾ, ನಮಿತಾ, ಭವ್ಯ ತಲಾ ಒಂದು ವಿಕೆಟ್ ಕಬಳಿಸಿದರು.
ಗ್ಲಾö್ಯಡಿಯೇಟರ್ ಕ್ವೀನ್ಸ್ ಹಾಗೂ ವೈಲ್ಡ್ ಮಾಸ್ಟರ್ಸ್ ವಿಮೆನ್ ನಡುವಿನ ಪಂದ್ಯಾಟದಲ್ಲಿ ವೈಲ್ಡ್ ಮಾಸ್ಟರ್ಸ್ ಗೆಲುವಿನ ನಗೆ ಬೀರಿತು. ಗ್ಲಾö್ಯಡಿಯೇರ್ಸ್ ಮೂರು ವಿಕೆಟ್ ನಷ್ಟಕ್ಕೆ ೧೨ ರನ್ ಗುರಿಯನ್ನು ನೀಡಿತು. ಇದನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ವೈಲ್ಡ್ ಮಾಸ್ಟರ್ಸ್ ಗುರಿ ಮುಟ್ಟಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಂಡಿತು.
ವೈಲ್ಡ್ ಕ್ಯಾಟ್ ವಿರುದ್ಧ ಪ್ಯಾಂರ್ಸ್ ಕ್ಲಬ್ ಕೊಡಗು ೩೩ ರನ್ಗಳ ಗೆಲುವು ಪಡೆದುಕೊಂಡಿತು. ಪ್ಯಾಂರ್ಸ್ ಕ್ಲಬ್ ೧ ವಿಕೆಟ್ ನಷ್ಟಕ್ಕೆ ೫೮ ರನ್ ಬಾರಿಸಿ ಗುರಿ ನೀಡಿತು. ಇದನ್ನು ಬೆನ್ನತ್ತಿದ್ದ ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ ನಿಗದಿತ ಓವರ್ಗಳಲ್ಲಿ ಕೇವಲ ೨೫ ರನ್ ಮಾತ್ರ ಗಳಿಸಿಕೊಂಡಿತು.
ಕೆಡಿಕೆ ವಿಮೆನ್ ಮೈಸೂರು ವಿರುದ್ಧ ಮರಗೋಡು ರಿಕ್ರಿಯೇಷನ್ ಕ್ಲಬ್ ೨೧ ರನ್ಗಳ ಜಯ ಸಾಧಿಸಿತು. ಮರಗೋಡು ಒಂದು ವಿಕೆಟ್ ನಷ್ಟಕ್ಕೆ ೩೯ ರನ್ ಗುರಿಯನ್ನು ಕೆಡಿಕೆಗೆ ನೀಡಿತು. ಬ್ಯಾಟ್ ಮಾಡಿದ ಕೆಡಿಕೆ ೨ ವಿಕೆಟ್ ನಷ್ಟಕ್ಕೆ ೧೮ ರನ್ ಮಾತ್ರ ಗಳಿಸಲು ಶಕ್ತವಾಯಿತು.
ಗ್ಲಾö್ಯಡಿಯೇರ್ಸ್ ಕ್ವೀನ್ ಮೊದಲು ಬ್ಯಾಟ್ ಮಾಡಿ ೩ ವಿಕೆಟ್ ಕಳೆದುಕೊಂಡು ೪೯ ರನ್ಗಳ ಗುರಿಯನ್ನು ಬ್ಲಾಸಂ ಬೆಲ್ ತಂಡಕ್ಕೆ ನೀಡಿತು. ಬ್ಲಾಸಂ ಬೆಲ್ ೩ ವಿಕೆಟ್ ಕಳೆದುಕೊಂಡು ೪೬ ರನ್ ಗಳಿಸಿ ಮೂರು ರನ್ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಗ್ಲಾö್ಯಡಿಯೇರ್ಸ್ ಪರ ಹರಿಣಾಕ್ಷಿ ೧೨ ಬಾಲ್ಗೆ ೨೮ ರನ್ ಪೇರಿಸಿದರು.
ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ ಎದುರು ಪ್ಯಾಂರ್ಸ್ ಕ್ಲಬ್ ೫ ರನ್ಗಳ ಜಯ ಸಾಧಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿತು. ೩೭ ರನ್ ಗುರಿಯನ್ನು ಬೆನ್ನತ್ತಿದ ಪ್ಯಾಂರ್ಸ್ ಕ್ಲಬ್ ನಿಗದಿತ ಓವರ್ನಲ್ಲಿ ೪೨ ರನ್ ಗಳಿಸಿ ವಿಜಯಿಯಾಯಿತು. ಪ್ಯಾಂರ್ಸ್ ಪರ ಭವ್ಯ ೨೧, ವಿನುತ ೧೪, ವರ್ಣಶ್ರೀ ೧೩ ರನ್ ಗಳಿಸಿ ಗೆಲುವಿಗೆ ಕಾರಣರಾದರು. ಅಬ್ಬರಿಸಿದ ನಾರಿಯರು
ಕ್ರಿಕೆಟ್ ಪಂದ್ಯಾಟದಲ್ಲಿ ಮಹಿಳೆಯರು ನಾವ್ಯಾರಿಗೂ ಕಮ್ಮಿ ಇಲ್ಲ ಎಂಬAತೆ ಆಟ ಪ್ರದರ್ಶಿಸಿ ಆಶ್ಚರ್ಯ ಮೂಡಿಸಿದರು. ಯುವತಿಯರು ಬ್ಯಾಟ್ ಬೀಸಿ ಫೋರ್, ಸಿಕ್ಸ್ ಬಾರಿಸಿ ಮಿಂಚಿದರೆ. ಮಹಿಳೆಯರು ಕೂಡ ಉತ್ತಮ ಬೌಲಿಂಗ್, ಕ್ಷೇತ್ರ ರಕ್ಷಣೆ ಮೂಲಕ ಪೈಪೋಟಿ ನೀಡಿದರು. ಕರ್ನಾಟಕ ತಂಡದಲ್ಲಿ ಆಡಿರುವ ಜೈನೀರ ತನಿಷ್ಕ ಆಟವಾಡಿ ಎಲ್ಲರ ಗಮನ ಸೆಳೆದರು.