ಸೋಮವಾರಪೇಟೆ, ಏ. ೨೭: ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ತಾ.೨೯ರಿಂದ ಮೇ.೧೮ರ ವರೆಗೆ ಉಚಿತ ಬೇಸಿಗೆ ಹಾಕಿ ತರಬೇತಿ ಶಿಬಿರ ಪಟ್ಟಣದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಲಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಹೇಳಿದರು.
೮ ವರ್ಷ ಮೇಲ್ಪಟ್ಟ ೧೮ ವರ್ಷದೊಳಗಿನ ಬಾಲಕಿಯರು ಮತ್ತು ಬಾಲಕರು ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದು. ಬೆಳಿಗ್ಗೆ ೬ರಿಂದ ೯ರ ವರಗೆ ತರಬೇತಿ ನಡೆಯಲಿದ್ದು, ಎನ್.ಐ.ಎಸ್. ತರಬೇತುದಾರರಾದ ಎಸ್.ಎಂ.ಪ್ರಕಾಶ್, ಅಂಥೋಣಿ ಡಿಸೋಜ, ಬಿ.ಎಸ್.ಸುರೇಶ್, ಬಿ.ಎಸ್.ವೆಂಕಟೇಶ್ ಅವರುಗಳು ತರಬೇತಿ ನೀಡಲಿದ್ದಾರೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
೧೯೭೦ರ ದಶಕದಿಂದಲೂ ಅಂತರರಾಷ್ಟಿçÃಯ ಮಟ್ಟದಲ್ಲಿ ಹಾಕಿ ಕ್ರೀಡೆಗೆ ಸೋಮವಾರಪೇಟೆ ತಾಲೂಕಿನ ಕ್ರೀಡಾಪ್ರತಿಭೆಗಳ ಕೊಡುಗೆ ಅಪಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಾಕಿ ಪ್ರತಿಭೆಗಳ ಕೊರತೆಯಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಗ್ರಾಮೀಣ ಪ್ರತಿಭೆಗಳನ್ನು ಹಾಕಿ ಕ್ರೀಡೆಯತ್ತ ಆಸಕ್ತಿ ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನದಲ್ಲಿ ಯಶ ಕಂಡಿದ್ದೇವೆ. ಕಳೆದ ೮ ವರ್ಷಗಳಿಂದ ಎಸ್ಎಸ್ಎಲ್ಸಿಯಲ್ಲಿ ನಿರಂತರವಾಗಿ ಶೇ.೧೦೦ರಷ್ಟು ಫಲಿತಾಂಶ ಶಾಲೆಗೆ ಬಂದಿದೆ. ಪ್ರಸಕ್ತ ಪಿಯುಸಿಯಲ್ಲೂ ಶೇ.೧೦೦ ರಷ್ಟು ಫಲಿತಾಂಶ ಬಂದಿದೆ ಎಂದು ಹೇಳಿದರು. ಮಕ್ಕಳಿಗೆ ಹಾಕಿ ಕ್ರೀಡೆಯಲ್ಲಿ ತರಬೇತಿಗೊಳಿಸುವ ಪ್ರಯತ್ನದ ಫಲವಾಗಿ ಬೇಸಿಗೆ ಶಿಬಿರ ಆಂಗ್ಲಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನದಲ್ಲಿ ಯಶ ಕಂಡಿದ್ದೇವೆ. ಕಳೆದ ೮ ವರ್ಷಗಳಿಂದ ಎಸ್ಎಸ್ಎಲ್ಸಿಯಲ್ಲಿ ನಿರಂತರವಾಗಿ ಶೇ.೧೦೦ರಷ್ಟು ಫಲಿತಾಂಶ ಶಾಲೆಗೆ ಬಂದಿದೆ. ಪ್ರಸಕ್ತ ಪಿಯುಸಿಯಲ್ಲೂ ಶೇ.೧೦೦ ರಷ್ಟು ಫಲಿತಾಂಶ ಬಂದಿದೆ ಎಂದು ಹೇಳಿದರು. ಮಕ್ಕಳಿಗೆ ಹಾಕಿ ಕ್ರೀಡೆಯಲ್ಲಿ ತರಬೇತಿಗೊಳಿಸುವ ಪ್ರಯತ್ನದ ಫಲವಾಗಿ ಬೇಸಿಗೆ ಶಿಬಿರ