ಸೋಮವಾರಪೇಟೆ,ಏ.೨೭: ಚುನಾವಣಾ ಮತದಾನ ದಿನದಂದು ಮತಗಟ್ಟೆಯ ಬಳಿ ವರದಿಗೆ ತೆರಳಿದ್ದ ಪತ್ರಕರ್ತರೋರ್ವರ ಮೇಲೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ನಿನ್ನೆ ಸಂಜೆ ವೇಳೆಗೆ ವರದಿಗಾಗಿ ಶನಿವಾರಸಂತೆಯ ಮತಗಟ್ಟೆಗೆ ತೆರಳಿದ್ದ ಪತ್ರಕರ್ತ ಹರೀಶ್ ಕುಮಾರ್ ಅವರ ಮೇಲೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ ಹಲ್ಲೆ ನಡೆಸಿ, ಕ್ಯಾಮೆರಾವನ್ನು ಕಸಿದುಕೊಂಡ ಘಟನೆಗೆ ಸಂಬAಧಿಸಿದAತೆ ಹರೀಶ್ ಅವರು ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದಾರೆ. ಅಲ್ಲದೇ ಇದೇ ಘಟನೆಗೆ ಸಂಬAಧಿಸಿದAತೆ ಹರೀಶ್ ಅವರ ಮೇಲೆ ಶನಿವಾರಸಂತೆಯ ಗಂಗಾಧರ್, ಅಕ್ಮಲ್ ಎಂಬವರುಗಳು ನೀಡಿದ ಪ್ರತ್ಯೇಕ ದೂರನ್ನು ದಾಖಲಿಸಿಕೊಂಡು ಎಫ್.ಐ.ಆರ್. ಮಾಡಲಾಗಿದೆ.
ಘಟನೆಗೆ ಸಂಬAಧಿಸಿದAತೆ ಒಟ್ಟು ನಾಲ್ಕು ಎಫ್ಐಆರ್ಗಳು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಳಿಗ್ಗೆ ಮತಗಟ್ಟೆಗೆ ತೆರಳಿದ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಗಂಗಾಧರ್ ಅವರು ಒತ್ತಾಯ ಮಾಡಿ ನಿಂದಿಸಿದ್ದಾರೆ ಎಂದು ಪಾರ್ವತಿ ಎಂಬವರು ನೀಡಿದ ದೂರಿನ ಮೇಲೆ ಗಂಗಾಧರ್ ವಿರುದ್ದ ಮೊಕದ್ದಮೆ ದಾಖಲಾಗಿದೆ. ಇದೇ ಘಟನೆಗೆ ಸಂಬAಧಿಸಿದAತೆ ಅಕ್ಮಲ್ ಎಂಬವರು ದೂರು ನೀಡಿದ್ದು, ತನ್ನ ಮೇಲೆ ಹರೀಶ್ ಕುಮಾರ್ ಹಾಗೂ ರಘು ಎಂಬವರುಗಳು ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹರೀಶ್ಕುಮಾರ್ ಅವರು ದೂರು ನೀಡಿದ್ದು, ಮತಗಟ್ಟೆಯ ಬಳಿ ಗಲಾಟೆಯಾಗುತ್ತಿದ್ದ ಸಂದರ್ಭ ಚಿತ್ರೀಕರಿಸುವಾಗ ಗಂಗಾಧರ್ ಹಾಗೂ ಅಕ್ಮಲ್ ಅವರುಗಳು ಹಲ್ಲೆ ನಡೆಸಿರುವುದಾಗಿ ಉಲ್ಲೇಖಿಸಿದ್ದಾರೆ. ಇನ್ನೊಂದು ಮೊಕದ್ದಮೆಯಲ್ಲಿ ಗಂಗಾಧರ್ ಎಂಬವರು ದೂರು ನೀಡಿದ್ದು, ರಘು ಹಾಗೂ ಹರೀಶ್ ಅವರುಗಳು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಒಂದೇ ಘಟನೆಗೆ ಸಂಬAಧಿಸಿದAತೆ ಪ್ರತ್ಯೇಕವಾಗಿ ೪ ಎಫ್.ಐ.ಆರ್.ಗಳನ್ನು ದಾಖಲಿಸಿಕೊಂಡಿರುವ ಶನಿವಾರಸಂತೆ ಪೊಲೀಸ್ ಇನ್ಸ್ ಪೆಕ್ಟರ್ ಪ್ರೀತಂ ದತ್ತ ಅವರು ತನಿಖೆ ಮುಂದುವರೆಸಿದ್ದಾರೆ.
ಖAಡನೆ
ಶನಿವಾರಸAತೆ ಪ್ರೆಸ್ಕ್ಲಬ್ ಅಧ್ಯಕ್ಷ ಹರೀಶ್ ಕುಮಾರ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಶನಿವಾರಸಂತೆ ಪ್ರೆಸ್ ಕ್ಲಬಿನ ಪದಾಧಿಕಾರಿಗಳು ಮತ್ತು ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದು ಹಲ್ಲೆ ಮಾಡಿದವರ ವಿರುದ್ದ ಪೊಲೀಸರು ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.