ಕೂಡಿಗೆ, ಏ. ೨೬: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ಕ್ರೀಡಾ ಶಾಲೆ, ವಸತಿ ನಿಲಯಗಳ ರಾಜ್ಯಮಟ್ಟದ ಅಂತಿಮ ಪರಿಶೀಲನಾ ಪ್ರವೇಶ ಆಯ್ಕೆ ಶಿಬಿರ ಕೂಡಿಗೆ ಸರಕಾರಿ ಕ್ರೀಡಾ ಶಾಲೆಯಲ್ಲಿ ಆರಂಭಗೊAಡಿದೆ.

ರಾಜ್ಯಮಟ್ಟದ ಹಾಕಿ ಮತ್ತು ಫುಟ್ಬಾಲ್ ವಿಭಾಗದಲ್ಲಿ ಕಿರಿಯ ಬಾಲಕ, ಬಾಲಕಿಯರಿಗೆ ತಾ. ೧೮ ರಿಂದ ೨೪ ರವರೆಗೆ ಮತ್ತು ಹಿರಿಯ ಬಾಲಕ ಮತ್ತು ಬಾಲಕಿಯರಿಗೆ ತಾ. ೨೭ ರಿಂದ ಮೇ ೩ ರವರೆಗೆ ಅಂತಿಮ ಪರಿಶೀಲನಾ ಪ್ರವೇಶ ಆಯ್ಕೆ ಶಿಬಿರವು ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ಚಾಲನೆ ನಡೆಯಲಿದೆ. ಕ್ರೀಡಾ ಶಿಬಿರದಲ್ಲಿ ಕಿರಿಯರ ವಿಭಾಗದ ಹಾಕಿ ವಿಭಾಗದಲ್ಲಿ ೬೫ ಬಾಲಕರು, ೨೪ ಬಾಲಕಿಯರು, ಫುಟ್ಬಾಲ್ ವಿಭಾಗದ ಕಿರಿಯರ ೩೯ ಬಾಲಕರು ನೊಂದಣಿ ಯಾಗಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಈ ಸಂದರ್ಭ ಶಿಬಿರದ ಸಂಚಾ ಲಕ ಹಾಗೂ ಹಾಕಿ ತರಬೇತುದಾರ ಬಿ.ಎಸ್. ವೆಂಕಟೇಶ್, ಹಾಕಿ ತರಬೇತು ದಾರರಾದ ಜಾಕೀರ್, ಸುಂದರೇಶ್, ರವೀಶ್, ಕೊಟ್ರೇಶ್, ಸುಬ್ಬಯ್ಯ, ಸಂಜಯ್ ಪಾಣೇತ್, ವಿಜಯ ಕೃಷ್ಣ, ಗೋಪಾಲ್, ಕೃಷ್ಣ, ಮುಸದ್, ಶಾಂತಿ ಸೇರಿದಂತೆ ವಿವಿಧ ವಿಭಾಗದ ತರಬೇತುದಾರರು ಹಾಜರಿದ್ದರು.