ವೀರಾಜಪೇಟೆ, ಏ. ೨೬: ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಜ್ಞಾನಗಂಗಾ ಭವನ ಸೇವಾ ಕೇಂದ್ರದ ವತಿಯಿಂದ ೩ ದಿನಗಳ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ನಡೆದು ಮಕ್ಕಳಲ್ಲಿ ಬಹಳ ಉತ್ಸಾಹ-ಉಲ್ಲಾಸವನ್ನು ತಂದಿತ್ತು.

ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ. ಕೋಮಲ ಅವರು ಶಿಬಿರದಲ್ಲಿ ಮಕ್ಕಳಿಗೆ ಸದಾ ಮನಸ್ಸನ್ನು ಸ್ವಚ್ಛವಾಗಿ, ಶಕ್ತಿಶಾಲಿಯಾಗಿ ಇಟ್ಟುಕೊಳ್ಳಬೇಕು ಎಂದರೆ ನಕಾರಾತ್ಮಕವಾದ ವ್ಯರ್ಥ ಯೋಚನೆಗಳಿಂದ ಮುಕ್ತರಾಗಿ ಸದಾ ಸಕಾರಾತ್ಮಕ ಚಿಂತನೆಗಳನ್ನು ಒಳ್ಳೆಯ ಹಾಗೂ ಶ್ರೇಷ್ಠ ಚಿಂತನೆಗಳನ್ನು ಮಾಡಬೇಕು ಎಂದು ಉದಾಹರಣೆಯ ಮೂಲಕ ತಿಳಿಸಿದರಲ್ಲದೆ ಪ್ರತಿನಿತ್ಯ ಧ್ಯಾನ ಮಾಡಿಸಿದರು.

ಎರಡನೇ ದಿನ ತ್ರಿವೇಣಿ ಶಾಲೆಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರತಿಮಾ ಬಿ.ಈ. ದಿನಚರಿ ಹೇಗಿರಬೇಕು? ಎಂದು ತಿಳಿಸಿದರು. ಮೂರನೇ ದಿನ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆ, ಆಪ್ತ ಸಮಾಲೋಚಕಿ, ಮನವಿ ಮುತ್ತಮ್ಮ, ಅಧ್ಯಾತ್ಮಿಕತೆಯ ಮೂಲಕ ಸಮಾಲೋಚನೆ' ಎನ್ನುವ ವಿಷಯದ ಬಗ್ಗೆ ತರಗತಿ ತೆಗೆದುಕೊಂಡರು.