ಐಗೂರು, ಏ. ೨೬: ಲೋಕಸಭಾ ಚುನಾವಣೆಯ ಹಿನ್ನೆಲೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆದ ಮತದಾನದಲ್ಲಿ ಐಗೂರು ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಾದ ಮತಗಟ್ಟೆ ಸಂಖ್ಯೆ ೧೦೯ರ ಎಡವನಾಡು ಮತಗಟ್ಟೆ ಸಂಖ್ಯೆ ೧೧೦ರ ಎಡವಾರೆ, ಮತಗಟ್ಟೆ ಸಂಖ್ಯೆ ೧೧೧ರ ಹೊಸತೋಟ ಐಗೂರು, ಮತಗಟ್ಟೆ ಸಂಖ್ಯೆ ೧೧೨ರ ಕಾಜೂರು ಐಗೂರು, ಈ ನಾಲ್ಕು ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಜನರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಕಂಡುಬAತು. ಐಗೂರಿನ ಕೌಶಲ್ಯ ಎಂಬ ೮೨ ವರ್ಷದ ವೃದ್ಧ ತನ್ನ ಮೊಮ್ಮಗನ ಸಹಾಯದಿಂದ ೧೧೨ರ ಸಂಖ್ಯೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.