ಶನಿವಾರಸಂತೆ, ಏ. ೨೬ : ಪಟ್ಟಣದಲ್ಲಿ ೪ ಮತಗಟ್ಟೆಗಳು ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨ ಮತಗಟ್ಟೆಗಳಿದ್ದು ಶುಕ್ರವಾರ ನಡೆದ ಲೋಕಸಭೆ ಚುನಾವಣೆಯಲ್ಲಿ ನೀರಸ ಹಾಗೂ ಶಾಂತ ರೀತಿಯ ಮತದಾನ ಕಂಡು ಬಂದಿತು.
ಶನಿವಾರಸAತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-೩೫, ಗ್ರಾಮ ಪಂಚಾಯಿತಿ ಮತಗಟ್ಟೆ ಸಂಖ್ಯೆ: ೩೭ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ೩೬ ಹಾಗೂ ಮತಗಟ್ಟೆ ಸಂಖ್ಯೆ :೩೩ ರಲ್ಲಿ ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೩-೩೦ರ ವರೆಗೆ ನೀರಸ ಮತದಾನ ಮಂದಗತಿಯಲ್ಲಿ ನಡೆಯಿತು. ಉದ್ದದ ಸರತಿ ಸಾಲು ಕಂಡುಬಾರದೇ ಆಗಾಗ್ಗೆ ೩-೪ ಜನ ಮಾತ್ರ ಬಂದು ಮತ ಚಲಾಯಿಸಿ ತೆರಳುತ್ತಿದ್ದರು. ಪ್ರಥಮ ಮತ ಚಲಾಯಿಸಿದ ಯುವ ಜನತೆಯಲ್ಲಿ ಮಾತ್ರ ಉತ್ಸಾಹ, ಸಂತಸದ ಭಾವ ಕಂಡುಬರುತ್ತಿತ್ತು.
ದುAಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ೩೪ ರಲ್ಲಿ ಬೆಳಿಗ್ಗೆ ೭ ರಿಂದ ಮತದಾನ ಆರಂಭವಾಗಿ ಮೂವರು ಮತದಾನ ಮಾಡಿದ ಬಳಿಕ ಇವಿಎಂ ಬ್ಯಾಟರಿ ಕಡಿಮೆಯಾಗಿ ಸ್ಥಗಿತಗೊಂಡಿತು.ಸುಮಾರು ೮-೫೫ ರ ಬಳಿಕ ಇವಿಎಂ ಬದಲಾಯಿಸಿದ್ದು ನಂತರ ಮಂದಗತಿಯಲ್ಲಿ ಮತದಾನ ಮುಂದುವರೆಯಿತು.
ಸAಜೆ ೪ ರಿಂದ ಮತದಾನದಲ್ಲಿ ಚುರುಕು ಕಾಣಿಸಿತು.ಬಿಸಿಲು ಇಳಿದ ನಂತರ ಜನ ಮನೆಯಿಂದ ಹೊರ ಬಂದು ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದರು. ಸಂಜೆ ೫-೪೫ ಕ್ಕೆ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಶನಿವಾರಸಂತೆಯ ೪ ಮತಗಟ್ಟೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಕಾರ್ಯಕರ್ತರ ಜತೆ ಮಾತನಾಡಿದರು. ಸಂಜೆ ೬ ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ: ೩೫ ರಲ್ಲಿ ೭೭೬ ಮತದಾನವಾಗಿದೆ.
ಗ್ರಾಮ ಪಂಚಾಯಿತಿ ಕಚೇರಿಯ ಮತಗಟ್ಟೆ ಸಂಖ್ಯೆ : ೩೭ ರಲ್ಲಿ ಶೇ.೭೯.೯೪ ಮತದಾನವಾಗಿದೆ. ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ: ೩೩ ರಲ್ಲಿ ಶೇ.೭೪.೬೩ ಮತದಾನವಾಗಿದೆ.ಇದೇ ಶಾಲೆಯ ಮತಗಟ್ಟೆ ಸಂಖ್ಯೆ: ೩೬ ರಲ್ಲಿ ಶೇ. ೭೩.೬೮ ಮತದಾನವಾಗಿದೆ.
ದುಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ೩೪ ರಲ್ಲಿ ೩೫೦ ರಷ್ಟು ಮತದಾನವಾಗಿದೆ.