ವೀರಾಜಪೇಟೆ, ಏ. ೨೪: ವೀರಾಜಪೇಟೆಯ ತೋರ ಗ್ರಾಮದಲ್ಲಿ ಹಾಕಿ ಮೈದಾನಕ್ಕಾಗಿ ಸುಮಾರು ಐದೂವರೆ ಎಕರೆ ಭೂಮಿ ಕಾಯ್ದಿರಿಸಿ ಮಂಜೂರಾತಿಗಾಗಿ ಸಹಕಾರ ನೀಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಕೊಡವ ಹಾಕಿ ಅಕಾಡೆಮಿ ಸನ್ಮಾನಿಸಿ ಗೌರವಿಸಿತು.

ವೀರಾಜಪೇಟೆಯಲ್ಲಿ ಶಾಸಕರ ಗೃಹ ಕಚೇರಿಯಲ್ಲಿ ಭೇಟಿಯಾದ ಹಾಕಿ ಅಕಾಡೆಮಿ ಪ್ರಮುಖರು ಪೊನ್ನಣ್ಣ ಅವರಿಗೆ ಧನ್ಯವಾದ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೊಡಗಿನ ಕ್ರೀಡಾ ಪ್ರತಿಭೆಗಳು ಐದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುವ ಮೈದಾನದ ಸದುಪಯೋಗ ಪಡೆದುಕೊಂಡು ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಲಿ ಎಂದು ಆಶಿಸಿದರು.

ಕೊಡವ ಹಾಕಿ ಅಕಾಡೆಮಿಯ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಅಕಾಡೆಮಿಯ ಅಧ್ಯಕ್ಷ ಪಾಂಡAಡ ಕೆ.ಬೋಪಣ್ಣ ಅವರು ೧೯೯೭ರಲ್ಲಿ ಸ್ಥಾಪಿಸಲ್ಪಟ್ಟ ಕೊಡವ ಹಾಕಿ ಅಕಾಡೆಮಿ ಸಾವಿರಾರು ಹಾಕಿ ಪ್ರತಿಭೆಗಳನ್ನು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.

ಪ್ರತಿವರ್ಷ ಹಾಕಿಹಬ್ಬ ನಡೆಸುವಾಗಲೂ ಮೈದಾನಕ್ಕಾಗಿ ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ. ಆದ್ದರಿಂದ ಹಾಕಿ ಹಬ್ಬಕ್ಕೆ ಶಾಶ್ವತವಾದ ಮತ್ತು ಸುಸಜ್ಜಿತವಾದ ಮೈದಾನ ಬೇಕು ಎನ್ನುವ ಬೇಡಿಕೆಯನ್ನು ಕೊಡವ ಹಾಕಿ ಅಕಾಡೆಮಿ ಇಟ್ಟ ಕಾರಣ ಶಾಸಕ ಪೊನ್ನಣ್ಣ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ತೋರಾ ಗ್ರಾಮದಲ್ಲಿ ಐದೂವರೆ ಎಕರೆ ಜಮೀನು ಮಂಜೂರಾತಿಗೆ ಕ್ರಮ ಕೈಗೊಂಡಿದ್ದಾರೆ ಎಂದರು.

ಹಾಕಿ ಅಕಾಡೆಮಿಯ ಕಾರ್ಯಾ ಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಜಂಟಿ ಕಾರ್ಯದರ್ಶಿ ಚೆಯ್ಯಂಡ ಸತ್ಯ ಹಾಗೂ ಎಲ್ಲಾ ನಿರ್ದೇಶಕರುಗಳು ಈ ಸಂದರ್ಭ ಹಾಜರಿದ್ದರು.