ಸೋಮವಾರಪೇಟೆ, ಏ. ೨೪: ಮನೆ ಮೇಲೆ ಬೀಟೆ ಮರ ಬಿದ್ದ ಪರಿಣಾಮ, ಗೋಡೆಗಳು ಜಖಂಗೊAಡಿರುವ ಘಟನೆ ಕೂಗೇಕೋಡಿ ಗ್ರಾಮದಲ್ಲಿ ನಡೆದಿದೆ.

ಕೂಗೇಕೋಡಿ ಗ್ರಾಮ ನಿವಾಸಿ ಜಿ.ಎಚ್. ಹೇಮಾವತಿ ಎಂಬವರ ಮನೆಯ ಮುಂಭಾಗದಲ್ಲಿದ್ದ ಬೀಟೆ ಮರವನ್ನು ಕಡಿದು ಸಾಗಿಸುವಂತೆ ಶನಿವಾರಸಂತೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಜೇಸಿಬಿ ಯಂತ್ರದ ಮೂಲಕ ೨೦೦ ವರ್ಷದಷ್ಟು ಹಳೆಯದಾದ ಮರವನ್ನು ಕಡಿದು ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಮರವನ್ನು ನಿರ್ದಿಷ್ಟ ಸ್ಥಳದಲ್ಲಿ ಬೀಳಿಸುವ ಪ್ರಯತ್ನ ಫಲಿಸದೆ, ಮನೆ ಮೇಲೆ ಬಿದ್ದಿದೆ.

ಅರಣ್ಯ ಇಲಾಖೆ ಮತ್ತು ಗುತ್ತಿಗೆದಾರರ ನಿರ್ಲಕ್ಷö್ಯದಿಂದ ಘಟನೆ ಸಂಭವಿಸಿದೆ. ಸೂಕ್ತ ಪರಿಹಾರ ನೀಡಬೇಕೆಂದು ಹೇಮಾವತಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಲಾಗಿದೆ.