ಮಕ್ಕಳನ್ನು ರಕ್ಷಿಸಲು ಶ್ವಾನವನ್ನು ಕೊಂದ ಮನೆ ಯಜಮಾನ

ಕೂಡಿಗೆ, ಏ. ೨೩: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಹಾಸನ ಹೆದ್ದಾರಿಯ ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ಗ್ರಾಮದ ಉಪ ರಸ್ತೆಯ ಸಮೀಪದ ಮನೆಯೊಂದಕ್ಕೆ ನುಗ್ಗಿದ ಹುಚ್ಚು ನಾಯಿಯೊಂದು ಮನೆಯಲ್ಲಿ ನಿದ್ರೆಯಲ್ಲಿದ್ದ ೨ ಪುಟ್ಟ ಮಕ್ಕಳನ್ನು ಕಚ್ಚಲು ಮುಂದಾದಾಗ ಮಕ್ಕಳ ರಕ್ಷಣೆಯ ಸಲುವಾಗಿ ನಾಯಿಯನ್ನು ಮಕ್ಕಳ ತಂದೆ ಕೊಂದು ಹಾಕಿದ ಘಟನೆ ಕಳೆದ ೩ ದಿನಗಳ ಹಿಂದೆ ನಡೆದಿದೆ. ನಾಯಿಯು, ಮನೆಯ ಯಜಮಾನ ಶಿವಣ್ಣ ಸೇರಿದಂತೆ ಅವರ ಪತ್ನಿಗೂ ಕಚ್ಚಿದೆ.

ಹಾಸನ ಹೆದ್ದಾರಿಯ ಮುಖ್ಯ ರಸ್ತೆ ಕಡೆಯಿಂದ ಬಂದ ಎರಡು ಹುಚ್ಚು ನಾಯಿಗಳು ಹೆಬ್ಬಾಲೆ ಬಸ್ ನಿಲ್ದಾಣ ರಸ್ತೆಯ ಬದಿಯಲ್ಲಿ ಕಟ್ಟಲಾಗಿದ್ದ ಹಸುಗಳಿಗೂ ಕಚ್ಚಿವೆ. ಅಲ್ಲೆ ಇದ್ದ ಅಂಗಡಿಯೊAದರ ಮಾಲೀಕ ಪುಟ್ಟರಾಜ ಮತ್ತು ಲಕ್ಷ್ಮಮ್ಮ ಎಂಬವರ ಕಾಲಿಗೆ ಕಚ್ಚಿವೆ. ಬಳಿಕ ಇದರಲ್ಲಿ ಒಂದು ನಾಯಿ ಸಮೀಪದಲ್ಲಿದ್ದ ಶಿವಣ್ಣ ಎಂಬವರ ಮನೆ ಒಳಗೆ ನುಗ್ಗಿ ಹಾಲ್ ನಲ್ಲಿ ಮಲಗಿದ್ದ ೬ ವರ್ಷದ ಇಬ್ಬರು ಪುಟ್ಟ ಮಕ್ಕಳಿಗೆ ಕಚ್ಚಲು ಮುಂದಾದಾಗ ಮನೆಯ ಯಜಮಾನ ಶಿವಣ್ಣ ಹುಚ್ಚು ನಾಯಿಯ ಕುತ್ತಿಗೆಯನ್ನು ಹಿಡಿದು ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದಾರೆ.

ಈ ಸಂದರ್ಭ ನಾಯಿಯು ಶಿವಣ್ಣ ಅವರ ಬಾಯಿಯ ಭಾಗಕ್ಕೆ ಕಚ್ಚಿ ತಪ್ಪಿಸಿಕೊಂಡು ಶಿವಣ್ಣ ಅವರ ಪತ್ನಿ ಲೀಲಾವತಿ ಅವರಿಗೆ ಕಡಿದಿದೆ. ಈ ಸಂದರ್ಭ ಶಿವಣ್ಣ ಮನೆಯಲ್ಲಿದ್ದ ಕತ್ತಿಯಿಂದ ನಾಯಿಯನ್ನು ಕಡಿದಿದ್ದಾರೆ. ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ನಂತರ ಗ್ರಾಮ ಪಂಚಾಯಿತಿ ವತಿಯಿಂದ ನಾಯಿಯನ್ನು ಹೂತು ಹಾಕಲಾಗಿದೆ.

ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡ ಶಿವಣ್ಣ, ಮತ್ತು ಪತ್ನಿ ಲೀಲಾವತಿ, ಅಂಗಡಿ ಮಾಲೀಕ ಪುಟ್ಟರಾಜ, ಲಕ್ಷö್ಮಮ್ಮ ಅವರನ್ನು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಎರಡು ದಿನಗಳವರೆಗೆ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ.

ಶಿವಣ್ಣ ಅವರಿಗೆ ನಾಯಿ ಬಾಯಿಗೆ ಕಚ್ಚಿರುವುದರಿಂದ ಸಣ್ಣ ಪೈಪ್ ಮೂಲಕ ಆಹಾರ, ನೀರು ಸೇವನೆ ಮಾಡುವಂತಾಗಿದೆ. ಹೆಬ್ಬಾಲೆಯಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅವುಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡ ಹಸುಗಳಿಗೆ, ಶಿವಣ್ಣ ಅವರ ಪಕ್ಕದ ಮನೆಯವರಿಗೆ ಸೇರಿದಂತೆ ಸುತ್ತಮುತ್ತಲಿನ ಮನೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಚುಚ್ಚು ಮದ್ದು ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ