ಸಿದ್ದಾಪುರ, ಏ. ೨೩: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವತಿ ಯಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿ.ಜೆ.ಪಿ. ಸರಕಾರದ ವಿರುದ್ಧ ಹಾಗೂ ಪ್ರಧಾನಿ ಮೋದಿಯನ್ನು ವಿರೋಧಿಸಿ ‘ಭಾರತದ ಮಹಿಳೆಯರ ಸ್ಥಿತಿಗತಿಗಳು’ ೨೦೧೪-೨೦೨೪ ದಶಕದ ಅನುಭವಗಳು ಎಂಬ ಪುಸ್ತಕವನ್ನು ಸಿದ್ದಾಪುರದಲ್ಲಿ ಬಿಡುಗಡೆಗೊಳಿಸಿದರು.

ಸಿದ್ದಾಪುರದ ಸಿ.ಪಿ.ಐ.ಎಂ. ಪಕ್ಷದ ಕಚೇರಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಕಳೆದ ೧೦ ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ಅವರ ಸರಕಾರದ ಕಾರ್ಯವೈಖರಿಯನ್ನು ಖಂಡಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಪ್ರತಿ ಗ್ರಾಮ ಗಳಿಗೆ ಮಹಿಳೆ ಯರು ತೆರಳಿ ಜನಾಂದೋಲನವನ್ನು ನಡೆಸಲಾಗುವುದೆಂದರು.

ಬಿ.ಜೆ.ಪಿ. ಸರಕಾರದ ಆಡಳಿತದಲ್ಲಿ ದಿನಬಳಕೆಯ ವಸ್ತುಗಳು ಗಗನಕ್ಕೇರಿದೆ. ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ಆರೋಪಿಸಿದರು. ಚುನಾವಣೆಯ ಮೊದಲು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದರು.

ಈ ಸಂದರ್ಭ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ, ಸಂಘಟನೆ ಪದಾಧಿಕಾರಿಗಳಾದ ಪ್ರೇಮಾ, ಲಕ್ಷಿö್ಮ, ಮುತ್ತು, ರತ್ನ, ರಾಧಾ, ದಮಯಂತಿ, ಕಮಲ ಇನ್ನಿತರರು ಹಾಜರಿದ್ದರು.