ಪೊನ್ನAಪೇಟೆ, ಏ. ೨೩: ಕಾನೂರು ಗ್ರಾಮದಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಕಳವು ಮಾಡಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಬಲ್ಯಮಂಡೂರು ಗ್ರಾಮದ ಮನುಪ್ರಸಾದ್ ಎಂಬಾತನೇ ಬಂಧಿತ ಆರೋಪಿ.

ತಾ. ೨೦ ರಂದು ಕೋತೂರು ಗ್ರಾಮದ ವಿ. ಎನ್. ಸಂಪತ್ ಎಂಬವರು ಬೈಕ್‌ನಲ್ಲಿ ಪೆಟ್ರೋಲ್ ಕಡಿಮೆ ಇದ್ದ ಕಾರಣ ಕಾನೂರು ಅಂಗಡಿಯೊAದರ ಎದುರು ತಮ್ಮ ಬೈಕನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಮಾರನೇ ದಿನ ತಾ.೨೧ ರಂದು ಬೈಕ್ ತೆಗೆದುಕೊಂಡು ಹೋಗಲು ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಅಲ್ಲಿ ಬೈಕ್ ಇರಲಿಲ್ಲ. ಈ ಬಗ್ಗೆ ಸಂಪತ್ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಕಳವಾಗಿದ್ದ ಬೈಕ್ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು. ತಾ.೨೩ ರಂದು ಹುಣಸೂರು ತಾಲೂಕಿನ ಪಂಚವಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಆರೋಪಿ ಮನು ಪ್ರಸಾದ್ ಕದ್ದ ಬೈಕನ್ನು ಬೇರೆಯವರಿಗೆ ಮಾರಲು ಮುಂದಾಗಿದ್ದು, ಬೈಕ್ ಸಮೇತ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮನು ಪ್ರಸಾದ್ ಈ ಹಿಂದೆಯೂ ಕೂಡ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದೆ.

ಕೊಡಗು ಎಸ್.ಪಿ ರಾಮರಾಜನ್ ಮತ್ತು ಅಡಿಷನಲ್ ಎಸ್‌ಪಿ ಸುಂದರ್ ರಾಜ್ ನಿರ್ದೇಶನದ ಮೇರೆಗೆ, ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕ್ರೆöÊಮ್ ಸಬ್ ಇನ್ಸ್ಪೆಕ್ಟರ್ ಬಿ. ಶ್ರೀಧರ್, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಸುನಿಲ್, ಪ್ರಸನ್ನ, ನಟರಾಜ್ ಭಾಗವಹಿಸಿದ್ದರು. -ಚನ್ನನಾಯಕ