ಮಡಿಕೇರಿ, ಏ. ೨೩: ಖ್ಯಾತ ಟೆನ್ನಿಸ್ ತಾರೆ ವಿಶ್ವ ನಂ. ೧ ಖ್ಯಾತಿಯ ಕ್ರೀಡಾಪಟು, ಕೊಡಗಿನವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಬಿರುದನ್ನು ಸ್ವೀಕರಿಸಿದರು.

ಕಳೆದ ರಾತ್ರಿ ದೆಹಲಿಯ ರಾಷ್ಟçಪತಿ ಭವನದಲ್ಲಿ ರೋಹನ್ ರಾಷ್ಟçಪತಿ ದ್ರೌಪದಿಮುರ್ಮು ಅವರಿಂದ ಈ ಪ್ರತಿಷ್ಠಿತ ಬಿರುದನ್ನು ಪಡೆದುಕೊಂಡರು. ಕೊಡಗಿನವರಾದ ಸ್ಕಾ÷್ವಷ್ ತಾತೆ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರೂ ಸಹ ಈ ಬಾರಿಯ ಪದ್ಮಶ್ರೀ ಪುರಸ್ಕೃತರ ಪಟ್ಟಿಯಲ್ಲಿದ್ದಾರೆ. ನಿನ್ನೆ ನಡೆದ ಸಮಾರಂಭದಲ್ಲಿ ಕೆಲವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ರೋಹನ್ ಪ್ರಶಸ್ತಿ ಪಡೆದುಕೊಂಡರು.

ಮುAದೆ ನಡೆಯಲಿರುವ ಮತ್ತೊಂದು ಸಮಾರಂಭದಲ್ಲಿ ಜೋಶ್ನಾ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಇತರ ಗಣ್ಯರು ಹಾಜರಿದ್ದರು. ರೋಹನ್ ಹಾಗೂ ಜೋಶ್ನಾ ಅವರಿಗೆ ಈ ಸಾಲಿನಲ್ಲಿ ಪದ್ಮಶ್ರೀ ದೊರೆತಿದೆ. ಈ ಹಿಂದೆ ಕೊಡಗಿನವರಾದ ಜನರಲ್ ಕೆ.ಎಸ್. ತಿಮ್ಮಯ್ಯ ಅವರಿಗೆ ಪದ್ಮಭೂಷಣ ದೊರೆತಿದ್ದು, ಶಿಕ್ಷಣ ಕ್ಷೇತ್ರದ ಸಾಧಕಿ ಕೋದಂಡ ರೋಹಿಣಿ, ಹಾಕಿಪಟು ಡಾ. ಮೊಳ್ಳೆರ ಪಿ. ಗಣೇಶ್, ಜನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಲಭ್ಯವಾಗಿದ್ದು, ಒಟ್ಟು ಆರು ಮಂದಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದವರಾಗಿದ್ದಾರೆ.