ಮಡಿಕೇರಿ, ಏ. ೨೩: ರಾಜಕೀಯ ಯಜಮಾನರಿಗೆ ಕೊಡವರು ಊಳಿಗಮಾನ್ಯ ನಿಷ್ಠೆಯನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಕರೆ ನೀಡಿದ್ದಾರೆ.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಂದಿನೆರವAಡ ಒಕ್ಕಡ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು, ಸಂವಿಧಾನವು ಅದರ ನಾಗರಿಕರನ್ನು ಆಳುವ ಅತ್ಯುನ್ನತ ದಾಖಲೆಯಾಗಿದೆ. ಈ ಘನವೆತ್ತ ಸಂವಿಧಾನದಡಿಯಲ್ಲಿ ಸೂಕ್ಷಾö್ಮತೀಸೂಕ್ಷö್ಮ ಕೊಡವರ ಹೆಗ್ಗುರುತು ರಕ್ಷಿಸುವ ಸಲುವಾಗಿ ಕೊಡವಲ್ಯಾಂಡ್ ಸಾಧಿಸುವ ಮೂಲಕ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಶ್ರಮಿಸೋಣ ಎಂದರು.
ಕೊಡವರ ಪರ ಹೋರಾಟ ಕಠಿಣ ಕಾರ್ಯವಾಗಿದೆ. ಸರ್ಕಾರ ಮತ್ತು ಕೊಡವ ವಿರೋಧಿ ಅಂಶಗಳಿAದ ಹಗೆತನವನ್ನು ಅನುಭವಿಸುತ್ತಿದ್ದೇವೆ. ೩೪ ವರ್ಷಗಳ ನಿರಂತರ ಹೋರಾಟ ಕಹಿ ಸಿಹಿ ಅನುಭವದ ಸುದೀರ್ಘ ಪ್ರಯಾಣವಾಗಿದೆ. ದುಃಖವಿಲ್ಲದೆ ಗೆಲುವಿಲ್ಲ, ತ್ಯಾಗವಿಲ್ಲದೆ ಸ್ವಾತಂತ್ರö್ಯವಿಲ್ಲ ಎಂದರು.
ನಾಚಪ್ಪ ಕೊಡವ ಅವರನ್ನು ಸನ್ಮಾನಿಸಿ ಮಾತನಾಡಿದ ನಂದಿನೆರವAಡ ಒಕ್ಕಡ ಅಧ್ಯಕ್ಷ ದಿನೇಶ್, ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ನಮ್ಮ ಅಸ್ಮಿತೆಗೆ ಸಾಂವಿಧಾನಿಕ ಖಾತರಿಯನ್ನು ಸಾಧಿಸಲು ನಾಚಪ್ಪ ಅವರ ನಿರಂತರ ಪ್ರಯತ್ನದ ಬಗ್ಗೆ ಕುಟುಂಬದ ಪರವಾಗಿ ಶ್ಲಾಘಿಸಿದರು.
ನಮ್ಮ ಒಕ್ಕ ಸೇರಿದಂತೆ ನಮ್ಮ ಸಮುದಾಯದ ಅನೇಕ ಜನರು ತಮ್ಮ ವಾಹಕ ಬೆಳವಣಿಗೆಗಳಿಗಾಗಿ ವೈಯಕ್ತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಆದರೆ ನಾಚಪ್ಪ ಅವರು ನಿಸ್ವಾರ್ಥವಾಗಿ ಹೋರಾಡಿ ನಮ್ಮ ಇಡೀ ಕೊಡವ ಸಮುದಾಯದ ಹಕ್ಕುಗಳನ್ನು ಎತ್ತಿ ತೋರಿಸಿದ್ದಾರೆ. ಕೊಡವರ ವೇದನೆ-ಸಂವೇದನೆ, ಆಕಾಂಕ್ಷೆಗಳು ಮತ್ತು ಹಣೆಬರಹವನ್ನು ಪರಿಣಾಮಕಾರಿಯಾಗಿ ಅತ್ಯುನ್ನತ ಸಾಂವಿಧಾನಿಕ ಪ್ರಾಧಿಕಾರ ಮತ್ತು ವಿಶ್ವ ಸಂಸ್ಥೆಯ ಮುಂದೆ ಇರಿಸಿದ್ದಾರೆ. ಇದು ಸರಿಸಾಟಿಯಿಲ್ಲದ ಪ್ರಶಂಸನೀಯ, ಅಪ್ರತಿಮ ಅರ್ಪಣೆಯಾಗಿದೆ ಎಂದು ನುಡಿದರು.
ಕುಟುಂಬದ ಹಿರಿಯ ಸದಸ್ಯರಾದ ಪಾಲಿ ಗಣೇಶ್, ಸೀತಾ ಸೋಮಯ್ಯ, ಶಾಂತಿ ಗಣಪತಿ, ಹಿರಿಯರಾದ ಅಪ್ಪಯ್ಯ, ಗಣೇಶ್ ಚೀಯಣ್ಣ, ರವಿ ಬಸಪ್ಪ, ರವಿ ಕುಟ್ಟಪ್ಪ, ಅಯ್ಯಣ್ಣ, ಮಂದಪ್ಪ, ಮಧು, ನಂದಾ, ಬಿದ್ದಪ್ಪ, ಜಗದೀಶ್, ನಿತಿನ್, ಕಾಶಿ, ಸುರೇಶ್, ಅಚ್ಚಯ್ಯ, ಅಪ್ಪಚ್ಚು, ರಮೇಶ್, ಸೋಮಣ್ಣ ಸೇರಿ ಹಲವು ಹಿರಿಯ, ಕಿರಿಯ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು. ಕುಟುಂಬಸ್ಥರು ನಾಚಪ್ಪ ಕೊಡವ ಅವರಿಗೆ ನೆನಪಿನ ಕಾಣಿಕೆ ನೀಡಿದರು.