ಇತ್ತೀಚೆಗಷ್ಟೆ ದ್ವಿತೀಯ ಪಿ.ಯು ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳಿಗೆ ದೊರೆತ ಫಲಿತಾಂಶವನ್ನು ಇಲ್ಲಿ ನೀಡಲಾಗಿದೆ.
ಪೆರುಂಬಾಡಿ ಶಂಶುಲ್ ಉಲಮಾ ಎಜುಕೇಶನ್ ಅಕಾಡೆಮಿ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇಕಡ ೧೦೦ ಫಲಿತಾಂಶ ಲಭಿಸಿದೆ. ಒಟ್ಟು ೫೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾÀಗಿ ಶೇ.೧೦೦ ಸಾಧನೆಯಾಗಿದೆ.
ಸೋಮವಾರಪೇಟೆ ಕುವೆಂಪು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಬಿಟಿಸಿಜಿ ಪಿಯು ಕಾಲೇಜು ಶೇ. ೧೦೦ ಫಲಿತಾಂಶ ಪಡೆದಿದೆ. ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಶೇ. ೯೫.೨೩, ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.೭೭, ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜು ಶೇ. ೯೬.೯೬ ಸಾಧನೆ ಮಾಡಿದೆ. ಕಾಲೇಜಿನ ಐಶ್ವರ್ಯ ೫೬೯, ಬೃಂದಾ ೫೬೮, ಕೀರ್ತನಾ ೫೬೪ ಅಂಕ ಗಳಿಸಿ ಮೊದಲ ೩ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೧೬ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇ. ೧೦೦ ಫಲಿತಾಂಶ ಲಭಿಸಿದೆ. ಕಾಲೇಜಿನ ಟಿ.ಎ. ಸ್ಫೂರ್ತಿ ಶೇ.೯೫.೧೬, ಕೆ.ಯು. ರಶ್ಮಿ ಶೇ. ೯೨ ಅಂಕಗಳನ್ನು ಗಳಿಸಿ ಕಾಲೇಜಿಗೆ ಮೊದಲೆರಡು ಸ್ಥಾನಗಳನ್ನು ಗಳಿಸಿದ್ದಾರೆ.
ಸೋಮವಾರಪೇಟೆ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಶೇ. ೯೫.೨೩ ಫಲಿತಾಂಶ ಪಡೆದಿದೆ. ಕಾಲೇಜಿನ ೧೨೬ ವಿದ್ಯಾರ್ಥಿಗಳ ಪೈಕಿ ೧೨೦ ಮಂದಿ ತೇರ್ಗಡೆಯಾಗಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ಟಿ.ವಿ. ಕಾರುಣ್ಯ ಶೇ. ೯೭.೮೩, ಬಿ.ಪಿ. ಸುದೀಪ್ ೯೬.೧೬, ಶ್ರೇಯಶ್ವಿತ ೯೫.೬೬, ರೋಶಿಕ ೯೫.೬೬, ವಿಜ್ಞಾನ ವಿಭಾಗದಲ್ಲಿ ಮಿಲೀಶಾ ಡಿಸೋಜ ೯೪.೩೩, ಎಂ.ಎ. ಅಫ್ರಾ ೯೦.೮೩, ಜೀವಿತ ೮೭.೮೩ ಅಂಕಗಳೊAದಿಗೆ ಉತ್ತೀರ್ಣರಾಗಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ೨೦ ವಿದ್ಯಾರ್ಥಿಗಳ ಪೈಕಿ ೧೪ ಮಂದಿ ತೇರ್ಗಡೆಯಾಗಿದ್ದು, ಶೇ ೭೦ ಫಲಿತಾಂಶ ಬಂದಿದೆ. ಕಾಮರ್ಸ್ ವಿಭಾಗದಲ್ಲಿ ೪೯ ವಿದ್ಯಾರ್ಥಿಗಳ ಪೈಕಿ ೩೯ ಮಂದಿ ತೇರ್ಗಡೆಯಾಗಿದ್ದು, ಶೇ.೮೦ ಸಾಧನೆಯಾಗಿದೆ. ಕಾಮರ್ಸ್ನಲ್ಲಿ ಆಯಿಷತ್ ರಿಷಾನ್ ಶೇ. ೯೨ ಅಂಕಗಳೊAದಿಗೆ ಕಲಾ ವಿಭಾಗದಲ್ಲಿ ಮುಫಿದ ಶೇ. ೮೭ ಅಂಕಗಳೊAದಿಗೆ ಮೊದಲೆರಡು ಸ್ಥಾನಗಳಿಸಿದ್ದಾರೆ.
ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇಕಡ ೯೭.೨೯.ರಷ್ಟು ಫಲಿತಾಂಶ ಬಂದಿದೆ. ಕಾಲೇಜಿನ ೧೧೧ ವಿದ್ಯಾರ್ಥಿಗಳಲ್ಲಿ ೧೦೮ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.
ವೀರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಈ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೯.೬೦ ರಷ್ಟು ಫಲಿತಾಂಶ ದೊರೆತಿದೆ. ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು ೨೪೯ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿ.ಯು ಪರೀಕ್ಷೆ ಎದುರಿಸಿದ್ದು, ಇದರಲ್ಲಿ ೨೪೮ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉತ್ತಮ ಸಾಧನೆ ಮೆರೆದಿದ್ದಾರೆ. ವಾಣಿಜ್ಯ ವಿಭಾಗದ ಸಂಜನ ೫೮೦ ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ತಿಲ್ಲಾನ ೫೭೬ ಹಾಗೂ ಕೃಷ್ಣವೇಣಿ ೫೭೫ ಅಂಕಗಳನ್ನು ಪಡೆಯುವ ಮೂಲಕ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕರುಂಬಯ್ಯ ೫೭೬, ಯುಕ್ತಿ ಗೌರಮ್ಮ ೫೭೫ ಹಾಗೂ ಉರೂಝ್ ಫಾತಿಮಾ ೫೬೭ ಅಂಕಗಳನ್ನು ಗಳಿಸಿದ್ದಾರೆ.
ಸಂಪಾಜೆ ಪದವಿಪೂರ್ವ ಕಾಲೇಜಿಗೆ ಶೇ.೮೨ ಫಲಿತಾಂಶ ದೊರಕಿದೆ. ಇಲ್ಲಿ ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗವಿದ್ದು, ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು ೧೩ ಮಂದಿ ವಿದ್ಯಾರ್ಥಿಗಳಲ್ಲಿ ೧೧ ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.೮೫ ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು ೯ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೭ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.೭೮ ಫಲಿತಾಂಶ ದಾಖಲಾಗಿದೆ. ಸಂಪಾಜೆಯ ಮುಂಡಡ್ಕ ಅಶ್ರಫ್ ಹಾಗೂ ಫಾತಿಮತ್ ನುಸೈಬ ದಂಪತಿಯ ಪುತ್ರಿ ಖತೀಜತ್ ರಂಝೀನ ೫೬೦ ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಶನಿವಾರಸಂತೆ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗೆ ಶೇ.೧೦೦ ಫಲಿತಾಂಶ ದೊರಕಿದೆ. ಪರೀಕ್ಷೆಗೆ ಹಾಜರಾಗಿದ್ದ ೨೬ ವಿದ್ಯಾರ್ಥಿಗಳಲ್ಲಿ ಸಿ.ವಿ.ಕೀರ್ತನಾ ೫೬೭-ಶೇ.೯೫, ಎಚ್.ಎ.ಪಂಚಮಿ ೫೬೪-ಶೇ.೯೪, ಎನ್.ಎ.ಗಾಯತ್ರಿ ೫೬೦-ಶೇ.೯೩.೩೦ ಗಳಿಸಿ ಕಾಲೇಜಿಗೆ ಮೊದಲ ೩ ಸ್ಥಾನಗಳನ್ನು ಗಳಿಸಿದ್ದಾರೆ.
ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ೫೧ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, ಕಾಲೇಜಿಗೆ ಶೇ.೯೭ ಫಲಿತಾಂಶ ಬಂದಿದೆ.
ಗರಗAದೂರಿನಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ೮೦ ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು, ಕಾಲೇಜಿಗೆ ಶೇಕಡ ೧೦೦ ಫಲಿತಾಂಶವ ದೊರಕಿದೆ. ಕಾಲೇಜಿನ ವಿಶ್ವ ಎಸ್.ಎಸ್. ೫೭೮ ಅಂಕಗಳನ್ನು, ವನಿತಾ ಕೆ.ಎಸ್. ೫೭೪ ಅಂಕಗಳನ್ನು ಮತ್ತು ಮೇಘನಾ ಟಿ.ವಿ. ೫೬೨ ಅಂಕಗಳನ್ನು ಪಡೆದಿದ್ದಾರೆ.
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.೧೦೦ ಪಲಿತಾಂಶ ದೊರಕಿದೆ. ಕಾಲೇಜಿನ ಎಸ್.ಕೀರ್ತಿ ೫೮೪, ವಿ.ಷಣ್ಮುಗ ೫೫೩, ಸಾನ ಫರ್ವಿನ್ ೫೪೬ ಅಂಕಗಳನ್ನು ಪಡೆದು ಮೊದಲ ೩ ಸ್ಥಾನಗಳನ್ನು ಗಳಿಸಿದ್ದಾರೆ.