ಕಣಿವೆ, ಏ. ೨೩: ಲೋಕಸಭಾ ಚುನಾವಣೆಯ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಪರ ಕೂಡಿಗೆಯಲ್ಲಿ ಪಕ್ಷದ ನಾಯಕರು ಮತ ಯಾಚಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಂದ ಮತಯಾಚಿಸಿದರು. ಈ ಸಂದರ್ಭ ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಸುನಿಲ್ ರಾವ್, ಕುಶಾಲನಗರ ಪುರಸಭೆ ಸದಸ್ಯ ಎಂ.ವಿ. ಹರೀಶ್, ಕೂಡಿಗೆ ಮತಗಟ್ಟೆ ಅಧ್ಯಕ್ಷ ಅಶ್ರಫ್, ತಿಮ್ಮಪ್ಪ ಇತರರು ಇದ್ದರು.