ಚೆಯ್ಯಂಡಾಣೆ, ಏ. ೨೩: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) (ಎಸ್.ಎಸ್.ಎಫ್) ನೆಲ್ಲಿಹುದಿಕೇರಿ ಶಾಖೆಯ ವತಿಯಿಂದ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿ ಕಟ್ಟಡದಲ್ಲಿ ಮತದಾರರ ಗುರುತಿನ ಚೀಟಿ ತಿದ್ದುಪಡಿ ಹಾಗೂ ನೋಂದಾವಣಿ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಮತದಾರರ ಗುರುತಿನ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರು.
ಶಿಬಿರವನ್ನು ಕೊಡಗು ಜಿಲ್ಲಾಧ್ಯಕ್ಷರಾದ ಝುಭೈರ್ ಸಅದಿ ಅಲ್ ಅಫ್ಳಲಿ ಉದ್ಘಾಟಿಸಿದರು.
ಎಸ್.ಎಸ್.ಎಫ್ ನೆಲ್ಲಿಹುದಿಕೇರಿ ಶಾಖಾಧ್ಯಕ್ಷ ರಹೀಸ್ ಇ.ಎಂ. ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಫಿನಾನ್ಸ್ ಕಾರ್ಯದರ್ಶಿ ರಿಯಾಜ್ ಪಿ.ಇ ಆನ್ಲೈನ್ ಮುಖಾಂತರ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸುವಲ್ಲಿ ಸಹಕರಿಸಿದರು.