ಕುಶಾಲನಗರ, ಏ.೨೨: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ಹರಿವು ಸ್ಥಗಿತಗೊಂಡು ಮೀನು ಸೇರಿದಂತೆ ಮತ್ತಿತರ ಜಲಚರಗಳು ನಾಶಗೊಳ್ಳುತ್ತಿರುವ ದೃಶ್ಯ ಗೋಚರಿಸಿದೆ.

ಪಟ್ಟಣ ವ್ಯಾಪ್ತಿಯ ಬೈಚನಹಳ್ಳಿ, ದಂಡಿನಪೇಟೆ, ಕೊಪ್ಪ ಸೇತುವೆ ಕೆಳಭಾಗದಲ್ಲಿ ನೀರಿನ ಹರಿವು ನಿಂತು ಹೋಗಿದ್ದು ಪಟ್ಟಣಗಳಿಂದ, ಗ್ರಾಮಗಳಿಂದ ಹೊರಬರುವ ಸಂಪೂರ್ಣ ಚರಂಡಿ ನೀರು ನದಿ ಒಡಲಿಗೆ ನೇರವಾಗಿ ಸೇರುತ್ತಿದೆ.

ಕೆಲವು ಕಡೆಗಳಲ್ಲಿ ರಾಸಾಯನಿಕ ವಸ್ತುಗಳು ಚರಂಡಿ ಮೂಲಕ ನದಿಗೆ ಸೇರುವ ಕಾರಣ ಮೀನುಗಳು ಅಲ್ಲಲ್ಲಿ ಸತ್ತು ಹೋಗಿರುವ ದೃಶ್ಯ ಕಂಡು ಬಂದಿದೆ. ಸ್ನಾನಕ್ಕೆ ನದಿಯನ್ನು ಬಳಸುತ್ತಿದ್ದ ಕುಶಾಲನಗರ ವ್ಯಾಪ್ತಿಯ ಮತ್ತು ಗಡಿ ಭಾಗದ ನಿರಾಶ್ರಿತ ಜನರು ಇದೀಗ ಕಳೆದ ಒಂದು ತಿಂಗಳಿನಿAದ ಬವಣೆಪಡುತ್ತಿರುವುದು ಕೂಡ ಗೋಚರಿಸಿದೆ. ನದಿಯಲ್ಲಿ ಕಂಡುಬರುತ್ತಿದ್ದ ಬೃಹತ್ ಗಾತ್ರದ ಮೊಸಳೆಗಳು ಕೂಡ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊAಡಿವೆ.

ಈ ವ್ಯಾಪ್ತಿಯ ಹಳ್ಳಕೊಳ್ಳಗಳಲ್ಲಿ ನಿಂತಿರುವ ನೀರಿನಲ್ಲಿ ಇರುವ ವಿಶೇಷ ತಳಿಯ ಮಹಷೀರ್ ಮೀನುಗಳನ್ನು ತಕ್ಷಣ ಸ್ಥಳಾಂತರಿಸಲು ಸಂಬAಧಿಸಿದ ಇಲಾಖೆ ಅಧಿಕಾರಿಗಳು ಕಾರ್ಯಯೋಜನೆ ಸಿದ್ಧಪಡಿಸಬೇಕಾಗಿದೆ ಎಂದು ದಂಡಿನಪೇಟೆ ನಿವಾಸಿ ಅಜೀಜ್ ಮನವಿ ಮಾಡಿದ್ದಾರೆ. ಚರಂಡಿ ಮೂಲಕ ಹರಿಯುತ್ತಿರುವ ಕಲುಷಿತ ತ್ಯಾಜ್ಯ ನದಿಗೆ ನೇರವಾಗಿ ಬಿಡದಂತೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. -ಸಿಂಚು೪೪