ಪಾಲಿಬೆಟ್ಟ, ಏ. ೨೨: ಆಹಾರ ಅರಸಿಕೊಂಡು ಬಂದ ಜಿಂಕೆಮರಿಯನ್ನು ಬೀದಿನಾಯಿಗಳು ದಾಳಿ ಮಾಡಿ ಕೊಂದು ಹಾಕಿದ ಘಟನೆ ಚೆನ್ನಯ್ಯನಕೋಟೆ ಗ್ರಾಮದ ಚೆನ್ನಂಗಿ ಗ್ರಾಮದಲ್ಲಿ ನಡೆದಿದೆ. ಅರಣ್ಯ ಅಂಚಿನಿAದ ಜಿಂಕೆ ಮರಿಯೊಂದು ಆಹಾರ ಅರಸಿಕೊಂಡು ಬಂದಿದ್ದ ಸಂದರ್ಭ ಬೀದಿ ನಾಯಿಗಳು ಜಿಂಕೆಮರಿಯನ್ನು ಅಟ್ಟಾಡಿಸಿ ಕಚ್ಚಿ ಕೊಂದು ಹಾಕಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಶು ವೈದ್ಯಾಧಿಕಾರಿಗಳಾದ ಡಾ. ನವೀನ್ ಕುಮಾರ್ ರವರಿಗೆ ವಿಷಯ ತಿಳಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಂಡಿದ್ದಾರೆ. -ಪುತ್ತಂ ಪ್ರದಿಪ್